ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜತೆಯೇ ನಿಜವಾದ ಸಂಸ್ಕೃತಿ

ಕೋಟ ಕಾರಂತ ಥೀಂ ಪಾರ್ಕ್‌ ಗುಂಜನಕ್ಕೆ ಚಾಲನೆ
Last Updated 2 ಅಕ್ಟೋಬರ್ 2014, 9:10 IST
ಅಕ್ಷರ ಗಾತ್ರ

ಬ್ರಹ್ಮಾವರ: ಸಹಜತೆಯೇ ನಮ್ಮ ಸಂಸ್ಕೃತಿ. ಈ ಸಂಸ್ಕೃತಿಯನ್ನು ಶಿಕ್ಷಣದ ಮೂಲಕ ಮಕ್ಕಳಲ್ಲಿ ಬಿತ್ತುವ ಕೆಲಸವಾಗಬೇಕು ಎಂದು ಶಾಸಕ ರಮೇಶ ಕುಮಾರ್ ಅಭಿಪ್ರಾಯಪಟ್ಟರು.

ಕೋಟ ಕಾರಂತ ಥೀಂ ಪಾರ್ಕ್‌ ಕಲಾಭವನದಲ್ಲಿ ಬುಧವಾರ ಕೋಟತಟ್ಟು ಗ್ರಾ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ  ಸಂಯುಕ್ತ ಆಶ್ರಯ ದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಶಮಾನೋತ್ಸವದ ಸರಣಿ  ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ಮಕ್ಕಳಿಗೆ ಸಿನಿಮಾ ಸ್ಫೂರ್ತಿ ನೀಡುವುದಿಲ್ಲ. ಬದಲಾಗಿ ಕಥೆ ಕಾದಂಬರಿಗಳು ನೀಡುತ್ತವೆ. ಈ ದಿಸೆಯಲ್ಲಿ ಕಾರಂತರ ಕಾದಂಬರಿಗಳು ಸಮಾಜಕ್ಕೆ ಮಾದರಿಯಾಗಿವೆ. ಮಕ್ಕಳಿಗೆ ಜೀವನಮೌಲ್ಯಯುಳ್ಳ ಶಿಕ್ಷಣವನ್ನು ನೀಡಬೇಕಾದ ಅಗತ್ಯವಿದೆ. ಹಿಂದಿನ ಶಿಕ್ಷಣದಲ್ಲಿದ್ದ ಶ್ರೀರಾಮನ ಆದರ್ಶ, ಪುಣ್ಯಕೋಟಿಯ ತ್ಯಾಗ, ಭರತ ಚಕ್ರವರ್ತಿಯ  ಜನಪರ ಚಿಂತನೆ, ಸ್ವಾತಂತ್ರ್ಯ ಹೋರಾಟಗಾರ ಕೆಚ್ಚು ಇವತ್ತಿನ ಪಠ್ಯದಲ್ಲಿ ಮರೆಯಾಗುತ್ತಿದೆ.  ನೀತಿಪಾಠವನ್ನು ಹೇಳುವ ಶಿಕ್ಷಣದಿಂದ ಬದಲಾವಣೆ ಸಾಧ್ಯವಿದ್ದು, ಮಕ್ಕಳಿಗೆ ಉತ್ತಮ ವಾತಾವರಣದ ನಿರ್ಮಾಣ ಮಾಡಲು ಪೋಷಕರು ಮಾಡಿಕೊಡಬೇಕು ಎಂದರು.

ಮಕ್ಕಳ ಮನಸ್ಸಿಗೆ ಪರಿಣಾಮಕಾರಿಯಾದ ಸಾಹಿತ್ಯ ಬೇಕೇ ಹೊರತು ವಿಷವಲ್ಲ. ಸಂಸ್ಕೃತಿಯ ಕಲ್ಪನೆ ಮತ್ತು ಸಹಜತೆಯಿಂದ ಉತ್ತಮ ವಾತಾವರಣ ನಿರ್ಮಾಣ ಸಾಧ್ಯ. ಸಹಜತೆಯೇ ನಿಜವಾದ ಸಂಸ್ಕೃತಿ, ಕಾರಂತರು ಚುನಾವಣೆಗೆ ನಿಂತಿದ್ದು ಗೆಲ್ಲುವ ಉದ್ದೇಶಕ್ಕಲ್ಲ, ತನ್ನ ನಂಬಿಕೆ, ವಿಚಾರಗಳ ತೋರ್ಪಡಿಸಲು. ಗಾಂಧೀಜಿಯೇ ಇವತ್ತು ಚುನಾವಣೆಗೆ ನಿಂತಿದ್ದರೂ ಶೇ ೧೦೦ ಸೋಲು ತ್ತಿದ್ದರು ಎಂದರು. ಕೋಟತಟ್ಟು  ಗ್ರಾ.ಪಂ ಅಧ್ಯಕ್ಷೆ  ಶೋಭಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಡಾ.ಶಿವರಾಮ ಕಾರಂತ ಜನ್ಮದಿ ನೋತ್ಸವ ಮತ್ತು ಹುಟ್ಟೂರು ಪ್ರಶಸ್ತಿ ಕುರಿತಾದ ಸ್ಮರಣ ಸಂಚಿಕೆಯನ್ನು  ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ  ಬಿಡುಗಡೆಗೊಳಿಸಿದರು. ಅಂಬಲಪಾಡಿ ದೇವ ಸ್ಥಾನದ ಧರ್ಮದರ್ಶಿ ಡಾ.ನಿ.ಬೀ ವಿಜಯ ಬಲ್ಲಾಳ ಅವರು ಸಾಂಸ್ಕೃತಿ ಸುಗ್ಗಿಯನ್ನು ಉದ್ಘಾಟಿಸಿದರು.

ನಂತರ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕೋಟ ವಿವೇಕ ಪ್ರೌಢಶಾಲೆಯ ವಿದ್ಯಾರ್ಥಿನಿ ಪಾವನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಜಿ.ಪಂ.ಸದಸ್ಯೆ ಸುನೀತಾ ರಾಜಾರಾಮ್, ತಾ.ಪಂ ಸದಸ್ಯರಾದ ರಾಘ ವೇಂದ್ರ ಕಾಂಚನ್, ಭರತ್ ಕುಮಾರ್ ಶೆಟ್ಟಿ, ಪಂಚಾ ಯಿತಿ ಸದಸ್ಯ ಪ್ರಮೋದ್ ಹಂದೆ, ಪ್ರಭಾಕರ ಕಾಂಚನ್, ಜಯಶ್ರೀ, ಮಲ್ಯಾಡಿ ಸದರಾಮ ಶೆಟ್ಟಿ, ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ  ನೀಲಾವರ ಸುರೇಂದ್ರ ಅಡಿಗ, ಜೆ.ಸಿ ಅಧ್ಯಕ್ಷ ವಿಜಯ್ ಸುವರ್ಣ ಬೈಕಾಡಿ, ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ  ಜಗದೀಶ್ ಹೊಳ್ಳ, ಹಂಗಾರಕಟ್ಟೆ ಚೇತನಾ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಗಣೇಶ ಜಿ, ಪಂಚಾಯಿತಿ ಪಿಡಿಒ ಜಯರಾಮ ಶೆಟ್ಟಿ, ಕಾರ್ಯ ದರ್ಶಿ ಮೀರಾ ಮತ್ತು ಪ್ರತಿಷ್ಠಾನದ ಸದಸ್ಯರು ಇದ್ದರು.

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಯ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್ ಸ್ವಾಗತಿ ಸಿದರು. ಅಧ್ಯಾಪಕ ಸತೀಶ್ ಕುಮಾರ್ ವಡ್ಡರ್ಸೆ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT