ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಭಾಗ್ಯ ಕಲ್ಪಿಸಿ

ಅಕ್ಷರ ಗಾತ್ರ

ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯದಂತಹ ಜನಪ್ರಿಯ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಆದರೆ ಗ್ರಾಮೀಣ ಬಡವರಿಗೆ ಅನ್ನಭಾಗ್ಯ ಎಷ್ಟು ಉಪ ಯುಕ್ತವೋ ಸಾರಿಗೆ ವ್ಯವಸ್ಥೆಯೂ ಅಷ್ಟೇ ಅಗತ್ಯ.

ನಾವು 21ನೇ ಶತಮಾನದಲ್ಲಿದ್ದರೂ ಇನ್ನೂ ಎಷ್ಟೋ ಗ್ರಾಮಗಳಿಗೆ ಬಸ್‌ ಸೌಕರ್ಯ  ಕಲ್ಪಿಸಲಾಗಿಲ್ಲ. ವಿದ್ಯಾರ್ಥಿ ಗಳು, ಮಹಿಳೆಯರು, ಮಕ್ಕಳು ದೂರದಲ್ಲೆಲ್ಲೋ ಇಳಿದು ಗ್ರಾಮಗಳಿಗೆ ನಡೆದು ಹೋಗುವಂತಹ ಸ್ಥಿತಿ ಇದೆ.

ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸ ಬಹುದಾದ ತೊಂದರೆಗಳನ್ನು ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಗ್ರಹಿಸಬೇಕು. ಗ್ರಾಮಗಳಿಗೆ ಸೂಕ್ತ ಸಾರಿಗೆ ಭಾಗ್ಯ ಕಲ್ಪಿಸಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT