ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಟನ್‌ ಕಡಲೆ ಕಾಳು ಆಸ್ಟ್ರೇಲಿಯದಿಂದ ಆಮದು

Last Updated 8 ಅಕ್ಟೋಬರ್ 2015, 20:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ದ್ವಿದಳ ಧಾನ್ಯಗಳ ಬೆಲೆಯು ಗಗನ ಮುಖಿಯಾಗಿದೆ. ಕಳೆದೊಂದು ವರ್ಷದಲ್ಲಿ ಕಡಲೆ, ತೊಗರಿ ಮತ್ತು ಉದ್ದಿನ ಕಾಳು ಗಳ ಬೆಲೆಯು ಶೇ 75ರಷ್ಟು ಹೆಚ್ಚಿದೆ. ಕೆ.ಜಿ.ಗೆ ₹100ವರೆಗೂ ಏರಿಕೆಯಾಗಿದೆ.

ದ್ವಿದಳ ಧಾನ್ಯಗಳ ಬೆಲೆ ನಿಯಂತ್ರಣ ಕ್ಕಾಗಿ ಕೇಂದ್ರ ಸರ್ಕಾರ ಆಮದು ಪ್ರಕ್ರಿಯೆ ಚುರುಕುಗೊಳಿಸಿದೆ. ಆಸ್ಟ್ರೇಲಿಯಾದಿಂದ ಒಂದು ಸಾವಿರ ಟನ್‌ ಕಡಲೆ ಕಾಳು ಆಮದು ಮಾಡಿ ಕೊಳ್ಳಲು ಕೇಂದ್ರ ಸರ್ಕಾರ ಒಡೆತನದ ಮೆಟಲ್ಸ್‌ ಆ್ಯಂಡ್‌  ಮಿನರಲ್ಸ್‌ ಟ್ರೇಡಿಂಗ್‌ ಕಾರ್ಪೊರೇಷನ್‌ (ಎಂಎಂಟಿಸಿ) ಜಾಗತಿಕ ಟೆಂಡರ್‌ ಕರೆದಿದೆ.

ಇದೇ ಮಾಸಾಂತ್ಯ ವೇಳೆಗೆ ಕಡಲೆ ಕಾಳು ಕೊಲ್ಕತ್ತ ಬಂದರನ್ನು ಬಂದು ಸೇರುವ ನಿರೀಕ್ಷೆ ಇದೆ. ಎಂಎಂಟಿಸಿ ಈಗಾಗಲೇ ತೊಗರಿ ಮತ್ತು ಉದ್ದಿನ ಕಾಳುಗಳನ್ನು ತಲಾ ಐದು ಸಾವಿರ ಟನ್‌ ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT