ಕಳೆದ ದಶಕಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಇಲ್ಲದಿದ್ದ ಸ್ವರೂಪ ಇತ್ತೀಚಿನ ವರ್ಷಗಳಲ್ಲಿ ಪ್ರಾಪ್ತವಾಗಿರುವುದೆಂದರೆ ಸಮ್ಮೇಳನಕ್ಕೆ ಸೇರುತ್ತಿರುವ ಅಪಾರ ಜನಸ್ತೋಮ. ಈ ಜನಸ್ತೋಮಕ್ಕಿರುವ ಆಕರ್ಷಣೆ ಏನು ಎಂಬುದನ್ನು ಖಚಿತವಾಗಿ ಹೇಳಲು ಬರುವಂತಿಲ್ಲ.

ಕನ್ನಡದ ಶ್ರೀಸಾಮಾನ್ಯರ ಜತೆಗೆ ಅಸಾಮಾನ್ಯರೆನಿಸುವ ರಾಜಕಾರಣಿಗಳ ದಂಡೂ ಇರುತ್ತದೆ. ಅಲ್ಲದೆ ಸನ್ಮಾನದ ಪಟ್ಟಿಯಲ್ಲಿ ಸಾಹಿತ್ಯಗೋಷ್ಠಿಗಳಲ್ಲಿ ಸುಪ್ರಸಿದ್ಧರಲ್ಲದವರ ಹೆಸರೂ ಸೇರ್ಪಡೆಗೊಳ್ಳುತ್ತಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಎಂದಲ್ಲಿ ನಾಡಿನ ಸುಪ್ರಸಿದ್ಧ ಲೇಖಕರೇ ಬಹುಮಟ್ಟಿಗೆ ಇರಬೇಕು. ಸ್ಥಳೀಯ ಲೇಖಕರಿಗೆ ತಾಲ್ಲೂಕು, ಜಿಲ್ಲಾಮಟ್ಟದ ವೇದಿಕೆ ಇದ್ದೇ ಇದೆ. ಆದರೆ ಸ್ಥಳೀಯರಿಗೆ ಅಖಿಲ ಭಾರತ ಸಮ್ಮೇಳನದ ವೇದಿಕೆ ಏರಬೇಕೆಂಬ ಹುಮ್ಮಸ್ಸು ಇದ್ದೇ ಇರುತ್ತದೆ. ಈ ಕಾರಣದಿಂದ ಸುಪ್ರಸಿದ್ಧ ಲೇಖಕರು ಅಖಿಲ ಭಾರತ ವೇದಿಕೆಯಲ್ಲಿ ಭಾಗವಹಿಸುವ ಅವಕಾಶವೂ ತಪ್ಪಿ ಹೋಗಬಹುದು.

ಇನ್ನು ಸಮ್ಮೇಳನಾಧ್ಯಕ್ಷರ ಪಕ್ಕದಲ್ಲಿ ಕೂತ ರಾಜಕಾರಣಿಗಳು ನಮ್ಮ ಪಕ್ಷ ಸಮ್ಮೇಳನಕ್ಕೆ ಉದಾರವಾಗಿ ಅನುದಾನ ನೀಡುತ್ತಿರುವುದರಿಂದ ಗೋಷ್ಠಿಗೆ ಬಂದ ಸಾಹಿತಿಗಳೆಲ್ಲ ಪಕ್ಷದ ಸಾಧನೆಯನ್ನು ಹೇಳಬೇಕು, ಕವಿಗಳು ಅಂಥದ್ದೇ ಪದ್ಯ ಬರೆದು ಓದಬೇಕು ಎಂದುಕೊಂಡಿರುತ್ತಾರೆ. ಅಂದರೆ ರಾಜಕಾರಣಿಗಳು ಸಾಹಿತ್ಯ ಸಮ್ಮೇಳನವನ್ನು ಪಕ್ಷದ ಸಮಾವೇಶ ಎಂದುಕೊಂಡಿದ್ದರೂ ಆಶ್ಚರ್ಯವಿಲ್ಲ. ಅಷ್ಟೇ ಅಲ್ಲ ಎಷ್ಟೋ ಜನ ಲೇಖಕರು ಈಗ ಸಾಹಿತ್ಯಕ್ಕಿಂತ ರಾಜಕಾರಣದ ಲಾಭಗಳನ್ನು ಗಮನದಲ್ಲಿಟ್ಟುಕೊಂಡಿರುವುದರಿಂದ, ರಾಜಕಾರಣಿಗಳಿಗೆ ಅದು ಪಕ್ಷದ ಸಮಾವೇಶ ಎಂಬಂತಿದ್ದರೆ ಅದೂ ಕೂಡ ಆಶ್ಚರ್ಯದ ಸಂಗತಿಯಲ್ಲ.

ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಸೇರುವ ಜನಸ್ತೋಮದಿಂದಾಗಿ ಪುಸ್ತಕ ಮಾರಾಟದ ಬಿರುಸು ಹೆಚ್ಚಿದ್ದು, ಪ್ರಕಾಶಕರು ಸ್ವಲ್ಪಮಟ್ಟಿಗೆ ಸಂತುಷ್ಟರಾಗಿರುತ್ತಾರೆ. ವಿಚಿತ್ರ ಸಂಗತಿಯೆಂದರೆ ಕಳೆದ ದಶಕದ ಸಮ್ಮೇಳನಗಳಲ್ಲಿ ಗೋಷ್ಠಿಯ ಮತ್ತು ಲೇಖಕರದೇ ಆಕರ್ಷಣೆ ಪುಸ್ತಕದ ಆಕರ್ಷಣೆಗಿಂತ ಹೆಚ್ಚು ಇರುತ್ತಿತ್ತು. ಇದೇನೇ ಇರಲಿ ಈ ಹೊತ್ತಿನ ಸಮ್ಮೇಳನಗಳಲ್ಲಿ ಪುಸ್ತಕ ಮಾರಾಟ ಹೆಚ್ಚುತ್ತಿರುವುದು ಸಮಾಧಾನದ ವಿಷಯ.

ಮೊನ್ನೆ ಧಾರವಾಡದಲ್ಲಿ ನಡೆದ `ಸಾಹಿತ್ಯ ಸಂಭ್ರಮ' ನೆನಪಾಗುತ್ತಿದೆ. ಅದರ ವ್ಯವಸ್ಥೆಯ ಆರಂಭದಲ್ಲಿಯೂ ಒಂದಷ್ಟು ಅಪಸ್ವರಗಳೆದ್ದವು. ಆದರೆ `ಸಂಭ್ರಮ'ದ ಕಾರ್ಯಕ್ರಮ ಜರುಗಿದ ರೀತಿ ಮಾತ್ರ ಶ್ಲಾಘನೀಯ. ಸ್ವಾಗತವೂ ಇಲ್ಲ, ವಂದನಾರ್ಪಣೆಯೂ ಇಲ್ಲ. ಅನಗತ್ಯ ನಿರೂಪಣೆಗಳೂ ಇಲ್ಲ. ಸಮಯ ಪಾಲನೆಯಂತೂ ಅಷ್ಟೇ ಕಟ್ಟುನಿಟ್ಟಿನಿಂದ ಕೂಡಿತ್ತು.

ಯಾವುದೇ ಮಹತ್ವದ ವಿಷಯವಾದರೂ ಅದು ಉಪನ್ಯಾಸ ರೂಪದಲ್ಲಿರದೆ ಚರ್ಚೆಯಲ್ಲಿರುತ್ತಿತ್ತು. ಒಮ್ಮಮ್ಮೆ ಪ್ರೇಕ್ಷಕರೂ ಭಾಗವಹಿಸಬಹುದಿತ್ತು. ಆದರೆ ಹೆಚ್ಚು ಜನ ಅಲ್ಲ. ಹೀಗಾಗಿ ಯಾವುದೇ ಗೋಷ್ಠಿ ಕೇಳಿಸಿಕೊಳ್ಳಲು ಹಿಂಸೆಯೆನಿಸದೆ ಪ್ರತಿ ಗಂಟೆಯೂ ಕುತೂಹಲದಿಂದ ಇದ್ದುದೇ ಅಲ್ಲದೆ, ತುಂಬಿ ತುಳುಕುತ್ತಿದ್ದ ಸಭಾಂಗಣದ ಆಸಕ್ತರು ಚಹಾ ವಿರಾಮದಲ್ಲಿ ತಂತಮ್ಮ ಆಸನಗಳನ್ನು ಕಾಯ್ದಿರಿಸಿ ಹೊರಗೆ ಹೋಗುತ್ತಿದ್ದರು.

`ಸಾಹಿತ್ಯ ಸಂಭ್ರಮ'ದ ವೇದಿಕೆಯಲ್ಲಿ ಹೆಚ್ಚೆಂದರೆ ಮೂರು ಅಥವಾ ನಾಲ್ಕು ಜನ ಮಾತ್ರ. ಉದ್ಘಾಟನೆ ಅಥವಾ ಸಮಾರೋಪ ಸಮಾರಂಭದಲ್ಲಿಯೂ ವೇದಿಕೆಯಲ್ಲಿ ಏಳೆಂಟು ಜನ ಆಸೀನರಾಗಿದ್ದರೂ, ಮಾತನಾಡಿದವರು ಒಬ್ಬಿಬ್ಬರು ಹಿರಿಯರು ಮಾತ್ರ.

ಉದ್ಘಾಟನೆಯಲ್ಲಿ ಜಿ.ಎಸ್. ಆಮೂರರು, ಸಮಾರೋಪದಲ್ಲಿ ಗಿರಡ್ಡಿ ಗೋವಿಂದರಾಜ ಮತ್ತು ಜಿ.ಎಚ್. ನಾಯಕರು ಆಡಿದ ಮಾತುಗಳು ಮನನೀಯವಾಗಿದ್ದಿತು. ಅವರು `ಸಂಭ್ರಮ'ದ ಎಲ್ಲ ಅರೆಕೊರೆಗಳನ್ನು ಪ್ರಸ್ತಾಪಿಸಿಯೇ ಮಾತನಾಡಿದರು. ಯಾವ ಸಂದರ್ಭದಲ್ಲೂ ಹಾರ, ಶಾಲು, ಹಣ್ಣು, ಹೊಗಳಿಕೆ ಮತ್ತು ಚಪ್ಪಾಳೆಗೆ ಅವಕಾಶವೇ ಇರಲಿಲ್ಲ. ಒಟ್ಟು ಸಮ್ಮೇಳನಕ್ಕೆ ಸರ್ವಾಧ್ಯಕ್ಷರೂ ಇರಲಿಲ್ಲ.

ಇನ್ನು ಸಭಾಂಗಣದ ಒಳಗೆ `ಧಾರವಾಡ ಸಾಹಿತ್ಯ ಸಂಭ್ರಮ'ಕ್ಕೆ ಪ್ರಾಯೋಜಕತ್ವ ನೀಡಿದವರಲ್ಲಿ ಹಲಕೆಲವರಿದ್ದರು. ರಾಜಕಾರಣಿಗಳೂ ಇದ್ದರು. ಅವರು ಒಮ್ಮೆಯೂ ವೇದಿಕೆಯತ್ತ ಸುಳಿಯಲಿಲ್ಲ. ಸಭಾಂಗಣದಲ್ಲಿ ಇದ್ದೇವೆಂಬುದನ್ನೇ ತೋರಗೊಡಲಿಲ್ಲ. ಇಂಥ ಕೆಲವು ನಿಯಮ ಮತ್ತು ಕ್ರಮಗಳನ್ನು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಉಸ್ತುವಾರಿ ವಹಿಸುವವರು ಪರಿಪಾಲಿಸಬಹುದೇನೊ ? ಆದರೆ ಹಾಗೆ ಮಾಡುವುದಕ್ಕಿಂತ ಮೊದಲು ಒಂದು ಸಭೆ ನಡೆಸಿ ಸಮ್ಮೇಳನದ ರೂಪುರೇಷೆಗಳನ್ನು ಸಿದ್ಧಪಡಿಸಿದರೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನೂ ತಕ್ಕಮಟ್ಟಿಗೆ ಚೆನ್ನಾಗಿಯೇ ನಡೆಸಬಹುದೆನಿಸುತ್ತದೆ. ಸರ್ಕಾರಿ ಪ್ರೋಟೋಕಾಲನ್ನೇ ಸಮ್ಮೇಳನದಲ್ಲಿಯೂ ಅನುಸರಿಸುವುದಾದರೆ ಅದು ರಾಜಕಾರಣಿಗಳ ಕಾರ್ಯಕರ್ತರ ಸಮ್ಮೇಳನವಾಗಿಬಿಡುತ್ತದೆ. ಅದು ಈಗಾಗಲೇ ಮೈಸೂರಿನಲ್ಲಿ ಕೆ.ಎಸ್.ನ. ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಮತ್ತು ಹಾಸನದ ಸಾಹಿತ್ಯ ಸಮ್ಮೇಳನದಲ್ಲಿ ನಡೆದೂ ಬಿಟ್ಟಿದೆ. ಈ ಸಂಬಂಧ ಪರಿಷತ್ತು ಮತ್ತು ನಾಡಿನ ಹಿರಿಯ ಲೇಖಕರು ಒಂದೆಡೆ ಸೇರಿ ಒಮ್ಮೆಯಾದರೂ ಸಾಹಿತ್ಯ ಸಮ್ಮೇಳನದ ಸ್ವರೂಪ ಕುರಿತು ಚರ್ಚಿಸುವಂತಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.