ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಇರಲಿ

ಅಕ್ಷರ ಗಾತ್ರ

ಸರ್ಕಾರವು ಕಂದಾಯ ಇಲಾಖೆ­ಯಲ್ಲಿ ಗ್ರಾಮಲೆಕ್ಕಿಗ ಹುದ್ದೆ­ಯನ್ನು ಮೆರಿಟ್‌ ಆಧಾ­ರದ ಮೇಲೆ ನೇಮಕ ಮಾಡಿ­ಕೊಳ್ಳುತ್ತಿದೆ. ಇದರಿಂದ ಎಷ್ಟೋ ಮಂದಿ ನಿರುದ್ಯೋಗಿಗಳಿಗೆ ಅನ್ಯಾ­ಯ­ ಆಗು­ವು­ದಿಲ್ಲವೆ?

ಏಕೆಂದರೆ 7–8 ವರ್ಷಗಳ ಹಿಂದೆ ಶೇ 35ರಷ್ಟು ಅಂಕ ಪಡೆದು ಉತ್ತೀರ್ಣ­ರಾದರೆ ಅದೇ ದೊಡ್ಡ ಸಾಧನೆ. ಆ ದಿನ­­ಗಳಲ್ಲಿ ಉತ್ತೀರ್ಣ­ರಾ­ಗು­ತ್ತಿದ್ದವರ ಸಂಖ್ಯೆಯೇ  ಕಡಿಮೆ. ಆದರೆ ಇತ್ತೀಚಿನ ವರ್ಷ­ಗಳಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಪಡೆಯುವ­ವರಿದ್ದಾರೆ. ಈ ಅಂಕ ಆಧಾರದ ಮೇಲೆ ನೇಮಿ­ಸಿ­ಕೊಳ್ಳುವ ಸರ್ಕಾರದ ನಿಯ­ಮ­ದಿಂದ ಹಿಂದಿನ ವಿದ್ಯಾರ್ಥಿ­ಗಳಿಗೆ ಅನ್ಯಾಯ ಮಾಡಿ­ದಂತೆ ಆಗು­ವುದಿಲ್ಲವೆ?

ಇದರ ಬದಲು ಸಿಇಟಿ ಮೂಲಕ ನೇಮಕ ಮಾಡಿ­ಕೊಂಡರೆ ಕಂದಾಯ ಇಲಾಖೆಗೆ ಸಂಬಂಧಿ­ಸಿದ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ ಮತ್ತು ಎಲ್ಲ­ರಿಗೂ ಕೂಡ ಸಮಾನ ಅವಕಾಶ ಕಲ್ಪಿಸಿ­ದಂತಾ­ಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT