ನವದೆಹಲಿ (ಪಿಟಿಐ): ಗ್ರಾಮೀಣ ಮತ್ತು ನಗರ ವಸತಿಗಳು, ಶಾಲೆಗಳು, ನಿರ್ಮಲೀಕರಣ ಸಮುಚ್ಚಯಗಳು ಮತ್ತು ಅಂಗನವಾಡಿಗಳಲ್ಲಿ ನೂರಕ್ಕೆ ನೂರರಷ್ಟು ನಿರ್ಮಲೀಕರಣದ ಸಾಧನೆ ಮಾಡಿದ ಭಾರತದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಸಿಕ್ಕಿಂ ಪಾತ್ರವಾಗಿದೆ.

ಸಿಕ್ಕಿಂನ ಎಲ್ಲ 6,10,577 ನಿವಾಸಿಗಳು ಅತ್ಯುತ್ತಮ ನಿರ್ಮಲೀಕರಣ ವ್ಯವಸ್ಥೆಯುಳ್ಳ ಶೌಚಾಲಯ ಸವಲತ್ತುಗಳನ್ನು ಹೊಂದಿದ್ದಾರೆ.

ಹಿಮಾಲಯ ತಪ್ಪಲಿನ ಈ ರಾಜ್ಯ 98,043 ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದೆ. ಜನವರಿವರೆಗಿನ ಅವಧಿಯಲ್ಲಿ 87,014 ಮನೆಗಳಿಗೆ ಶೌಚಾಲಯ ನಿರ್ಮಿಸಬೇಕೆಂಬ ಗುರಿಯನ್ನು ರಾಜ್ಯ ಹೊಂದಿತ್ತು. ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನಿರ್ಮಲೀಕರಣ ಸಚಿವಾಲಯ ಅನುಷ್ಠಾನಗೊಳಿಸಿದ ನಿರ್ಮಲ ಭಾರತ ಅಭಿಯಾನದ ಅಡಿಯಲ್ಲಿ ಈ ಸಾಧನೆ ಮಾಡುವ ಮೂಲಕ ಶೇಕಡಾ 112.67 ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸ್ವಚ್ಛ ಪರಿಸರದಲ್ಲಿ ಆರೋಗ್ಯಕರವಾದ ನಿರ್ಮಲೀಕರಣ ಸಾಧನೆಗಾಗಿ ಸಮಗ್ರತಾ ಸಿದ್ಧಾಂತ ಅಳವಡಿಸಿಕೊಳ್ಳುವ ಮೂಲಕ ಒಟ್ಟಾರೆ ಅಭಿವೃದ್ಧಿಯನ್ನು ತೀವ್ರಗೊಳಿಸುವ ನಿಟ್ಟಿನ ಜನಜಾಗೃತಿ ಕಾರ್ಯದಲ್ಲೂ ರಾಜ್ಯ ಯಶಸ್ವಿಯಾಗಿದೆ.

ಸಮಗ್ರ ನೈರ್ಮಲ್ಯೀಕರಣ ಯೋಜನೆಯ ಅಡಿಯಲ್ಲಿ ಒಟ್ಟು 1,772 ಶಾಲೆಗಳಲ್ಲಿ ಶೌಚಾಲಯ ಕಲ್ಪಿಸಲಾಗಿದ್ದು, ಇದ್ದ ಗುರಿ 1,604 ಶಾಲೆಗಳು. ತನ್ಮೂಲಕ ಶೇಕಡಾ 110.47 ಸಾಧನೆ ಸಾಧ್ಯವಾಗಿದೆ.

ರಾಜ್ಯದಲ್ಲಿ 789 ಶೌಚಾಲಯ ಸಮುಚ್ಚಯಗಳ ನಿರ್ಮಾಣ ಗುರಿ ಹೊಂದಲಾಗಿತ್ತು. ಆದರೆ 1,105 ಶೌಚಾಲಯ ಸಮುಚ್ಚಯಗಳ ನಿರ್ಮಾಣ ಮಾಡುವ ಮೂಲಕ ಶೇಕಡಾ 140.5ರಷ್ಟಿ ಸಾಧನೆ ಸಾಧ್ಯವಾಗಿದೆ. ಅಂಗನವಾಡಿಗಳಲ್ಲಿ ಉದ್ದೇಶಿತ 340 ಶೌಚಾಲಯಗಳಿಗೆ ಬದಲಾಗಿ 516 ಶೌಚಾಲಯ ನಿರ್ಮಾಣ ಮಾಡುವ ಮೂಲಕ ಶೇಕಡಾ 151.76 ಗುರಿ ಸಾಧಿಸಲಾಗಿದೆ.

1999ರಲ್ಲಿ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರು ಸಂಪೂರ್ಣ ಸ್ಚಚ್ಚತೆ ಸಾಧಿಸುವ ಗುರಿಯೊಂದಿಗೆ ಈ ನಿರ್ಮಲ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳು ಸೇರಿದಂತೆ 7.096 ಚದರ ಕಿಮೀ ವ್ಯಾಪ್ತಿಯನ್ನು ಸಂಪೂರ್ಣ ಸ್ವಚ್ಛತೆಯ ವ್ಯಾಪ್ತಿಗೆ ತರಲು ಆಗ ಉದ್ದೇಶಿಸಲಾಗಿತ್ತು.

ರಾಜ್ಯದ ಎಲ್ಲ ಗ್ರಾಮಸಭೆಗಳಿಗೂ ತಮ್ಮ ಕಾರ್ಯಕ್ರಮ ಪಟ್ಟಿಯಲ್ಲಿ ನಿರ್ಮಲೀಕರಣಕ್ಕೆ ಆದ್ಯತೆ ನೀಡುವುದನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.