ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟು ಸೇದುವವರ ಮೊಮ್ಮಕ್ಕಳಿಗೆ ಆಸ್ತಮಾ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಒಂದು ವೇಳೆ ನೀವು ಅಸ್ತಮಾದಿಂದ ಬಳಲುತ್ತಿದ್ದಲ್ಲಿ ನಿಮ್ಮ ಅಜ್ಜಿ ಏನಾದರೂ ತಂಬಾಕು ಸೇವಿಸುತ್ತಿದ್ದರೆ ಅಥವಾ ಧೂಮಪಾನಿಗಳಾಗಿದ್ದರೆ ಎಂದು ಒಮ್ಮೆ ಪರಿಶೀಲಿಸಿ ಎನ್ನುತ್ತಿದೆ ಸಿಡ್ನಿಯಲ್ಲಿ ಕೈಗೊಂಡಿರುವ ಅಧ್ಯಯನ.

ಅವರ ಅಧ್ಯಯನ ಈ ಅಂಶವನ್ನು ಸಾಬೀತುಪಡಿಸಿದೆ. ಧೂಮಪಾನಿ ಮಹಿಳೆಯರ ಮೊಮ್ಮಕ್ಕಳು ಆಸ್ತಮಾದಿಂದ ಬಳಲುತ್ತಾರೆ. ಅವರಮ್ಮ ಅಥವಾ ಅವರಪ್ಪ ಧೂಮಪಾನಿಗಳಾಗಿರದಿದ್ದರೂ ಮೊಮ್ಮಕ್ಕಳಿಗೆ ಈ ದಮ್ಮು ಕಾಡಲಿದೆಯಂತೆ. ಸುದೀರ್ಘಾವಧಿಯ ಅಧ್ಯಯನವೊಂದು 1982ರಿಂದ86ರ ಅವಧಿಯಲ್ಲಿ ಗರ್ಭಿಣಿಯಾಗಿದ್ದ ಧೂಮಪಾನಿಗಳು ಅವರ ಮೊಮ್ಮಕ್ಕಳು ಇಬ್ಬರನ್ನೂ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಕಳೆದ 5 ದಶಕಗಳಲ್ಲಿ ಆಸ್ತಮಾದಿಂದ ಬಳಲುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ಹೆಚ್ಚಳಕ್ಕೆ ಕಾರಣಗಳನ್ನು ಹುಡುಕುತ್ತ ಹೋದಾಗ ದೊರೆತ ಫಲಿತಾಂಶಗಳಲ್ಲಿ ಇದೂ ಒಂದು. ಆಸ್ಟ್ರೇಲಿಯಾದ ಮೆಲ್ಬರ್ನ್‌ ವಿಶ್ವವಿದ್ಯಾಲಯದ ಸಂಶೋಧಕಿ ಡಾ. ಕೆರೊಲಿನ್‌ ಲಾಡ್ಜ್‌  ಪ್ರಕಾರ ಇನ್ನಿತರ ಪರಿಸರ ಸಂಬಂಧಿ ಕಾರಣಗಳನ್ನು ಹೊರತು ಪಡಿಸಿದರೆ ಹಿಂದಿನ ತಲೆಮಾರಿನವರು ಧೂಮಪಾನಿಗಳಾಗಿರುವುದು ಹೊಸ ತಲೆಮಾರಿನ ಆಸ್ತಮಾ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 

ಇದರಲ್ಲಿ ಅಜ್ಜಿ ಗರ್ಭಿಣಿಯಾಗಿದ್ದಾಗ ಧೂಮಪಾನಿಯಾಗಿದ್ದು, ನಂತರ ಹೆಣ್ಣುಮಗುವಿಗೆ ಜನ್ಮ ನೀಡಿದ್ದರೆ ಆ ಮಗುವಿನ ಮಕ್ಕಳು ಆಸ್ತಮಾದಿಂದ ಬಳಲುವ ಸಾಧ್ಯತೆಗಳೂ ಅತಿ ಹೆಚ್ಚಾಗಿವೆ. ಧೂಮಪಾನಿಗಳಾಗಿದ್ದ 44853 ಅಜ್ಜಿಯಂದಿರನ್ನೂ ಈ ಅಧ್ಯಯನಕ್ಕೆ  ಒಳಪಡಿಸಿದ್ದರು. ಮಕ್ಕಳ ಅಪ್ಪನೂ ಧೂಮಪಾನಿಯಾಗಿದ್ದಲ್ಲಿ ಈ ಸಾಧ್ಯತೆ ಇನ್ನೂ ಹೆಚ್ಚಿದೆ ಎನ್ನುತ್ತಾರೆ ಅವರು. ನಿಮ್ಮ ಮುಂದಿನ ಪೀಳಿಗೆ ಆರೋಗ್ಯವಂತವಾಗಿರಲಿ ಎಂದು ಬಯಸುವುದಾದರೆ ಧೂಮಪಾನ ಬಿಡಬೇಕು ಎನ್ನುವುದೂ ಈ ಸಂಶೋಧನೆಯ ಶಿಫಾರಸು ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT