ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆ: ಡಿಎಸ್‌ಪಿಇ ಕಾಯಿದೆಗೆ ತಿದ್ದುಪಡಿ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಡಿಎಸ್‌ಪಿಇ (ದೆಹಲಿ ವಿಶೇಷ ಪೊಲೀಸ್‌ ಕಾಯಿದೆ) ಕಾಯಿದೆಯಲ್ಲಿ ಮಾಡ­­­­ಲಾ­ಗಿರುವ ತಿದ್ದುಪಡಿಯಂತೆ ಲೋಕಸಭೆಯ ಏಕೈಕ ದೊಡ್ಡ ಪಕ್ಷದ ನಾಯಕ ಸಿಬಿಐ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಹೊಂದಿರುತ್ತಾರೆ. ಆಯ್ಕೆ ಸಮಿತಿಯಲ್ಲಿ ಸದಸ್ಯರ ಸ್ಥಾನ ಖಾಲಿ ಅಥವಾ ಅವರ ಅನುಪಸ್ಥಿತಿಯಲ್ಲಿ ನಡೆಯುವ ಆಯ್ಕೆಯು ನ್ಯಾಯಸಮ್ಮವತಲ್ಲ ಎಂದು ನಿರೂಪಿಸಲು ಆಗುವುದಿಲ್ಲ.

ಈ ಮಸೂದೆಯ ಬಗ್ಗೆ ಸೋಮವಾರ ಆರಂಭವಾದ ಸಂಸತ್‌ ಅಧಿವೇಶನದಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ, ಅಧಿ­ವೇಶನ­ವನ್ನು ಮುಂದೂಡಿದ್ದರಿಂದ ಚರ್ಚೆ ನಡೆಯಲಿಲ್ಲ.

ಡಿಎಸ್‌ಪಿಇ ಮಸೂದೆಯ ಕಲಂ 4 (ಎ)ಗೆ ಮಾಡಿರುವ ತಿದ್ದುಪಡಿಯ ಪ್ರಕಾರ, ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕನಿಲ್ಲದಿರು­ವಾಗ ಏಕೈಕ ದೊಡ್ಡ ಪಕ್ಷದ ನಾಯಕ­ನನ್ನು ಸಿಬಿಐ ನಿರ್ದೇಶಕ ಆಯ್ಕೆ ಸಮಿತಿಗೆ ಸೇರಿಸಿಕೊಳ್ಳಬಹು­ದಾಗಿದೆ ಎನ್ನುವ ಅಂಶ ಮಸೂದೆ­ಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT