ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ತ್ವಚೆಗೆ ರಸ ಚಿಕಿತ್ಸೆ

Last Updated 23 ಜುಲೈ 2015, 19:30 IST
ಅಕ್ಷರ ಗಾತ್ರ

ಮಹಿಳೆಯರು ಯಾವಾಗಲೂ ಚಿಂತಿಸುವುದು ತಮ್ಮ ತ್ವಜೆ ಸುಂದರವಾಗಿ ಕಾಣಬೇಕು ಎಂದು. ಎಣ್ಣೆ ಚರ್ಮ, ರಂಧ್ರದಿಂದ ಕೂಡಿದ ಕಳೆಗುಂದಿದ ಚರ್ಮವನ್ನು ಯಾವ ಮಹಿಳೆಯೂ ಬಯಸುವುದಿಲ್ಲ.

ಮೊಡವೆ, ಕಪ್ಪುಕಲೆ, ರಂಧ್ರಯುಕ್ತ ಚರ್ಮ ನಿಮ್ಮದಾದರೆ ಅದರಿಂದ ಬಿಡುಗಡೆ ಪಡೆಯಲು ನೈರ್ಸಗಿಕ ಮಾರ್ಗಗಳನ್ನು ಅನುಸರಿಸುವುದು ಸೂಕ್ತ. ಚರ್ಮದಲ್ಲಿನ ಕಲೆ ಹಾಗೂ ರಂಧ್ರಗಳನ್ನು ಹೋಗಲಾಡಿಸಿ ಸುಂದರವಾಗಿ ಕಾಣಲು ಇಲ್ಲಿವೆ ಕೆಲವು ಸುಲಭ ಪರಿಹಾರಗಳು.

ಐಸ್‌ ಕ್ಯೂಬ್
ಐಸ್‌ಗೆ ಚರ್ಮವನ್ನು ಬಿಗಿಗೊಳಿಸುವ ಗುಣವಿದೆ. ಐಸ್‌ಕ್ಯೂಬ್‌ ಅನ್ನು ಶುದ್ಧವಾದ  ಬಟ್ಟೆಯಲ್ಲಿ ಸುತ್ತಿ, ಮುಖದ ಮೇಲೆ ಸವರುವುದರಿಂದ ಮುಖದಲ್ಲಿ ರಕ್ತ ಸಂಚಾರ ಸುಲಭವಾಗುತ್ತದೆ. ಇದರಿಂದ ಮುಖದ ಕಾಂತಿ ಹೆಚ್ಚಿ, ತ್ವಚೆ ಸದಾ ಹೊಳೆಯುತ್ತಿರುತ್ತದೆ.

ಟೊಮ್ಯಾಟೋ ರಸ
ಟೊಮ್ಯಾಟೋ ರಸ ಅಥವಾ  ತಿರುಳನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದಲ್ಲಿನ ರಂಧ್ರಗಳು ಮಾಯವಾಗಿ, ಚರ್ಮ ಹೊಳೆಯುವಂತೆ ಮಾಡುತ್ತದೆ. ಟೊಮ್ಯಾಟೋ ರಸದೊಂದಿಗೆ ಕುಂಬಳಕಾಯಿ ರಸ ಮತ್ತು ಮೊಟ್ಟೆಯನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚುವುದರಿಂದ ಸುಕ್ಕುಗಟ್ಟಿದ ಹಾಗೂ ಎಣ್ಣೆಯುಕ್ತ ಚರ್ಮ ನಿವಾರಣೆಯಾಗಿ ತ್ವಚೆಯ ಕಾಂತಿ ಹೆಚ್ಚುತ್ತದೆ.

ಮೊಟ್ಟೆಯ ಬಿಳಿಭಾಗ
ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಹಚ್ಚುವುದರಿಂದ ಎಣ್ಣೆಯುಕ್ತ ಚರ್ಮವನ್ನು ನಿವಾರಿಸಬಹುದು. ಮೊಟ್ಟೆಯ ಬಿಳಿಭಾಗವು ಕಳೆಗುಂದಿದ ಚರ್ಮವನ್ನು ಹದಗೊಳಿಸಿ ಹೊಳೆಯುವಂತೆ ಮಾಡುತ್ತದೆ. ಮೊಟ್ಟೆಯ ಬಿಳಿಭಾಗದೊಂದಿಗೆ ನಿಂಬೆರಸವನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ತ್ವಚೆ ಸದಾ ಹೊಳೆಯುತ್ತಿರುತ್ತದೆ.

ಮುಲ್ತಾನಿ ಮಿಟ್ಟಿ
ಮುಲ್ತಾನಿ ಮಿಟ್ಟಿಯನ್ನು ಗುಲಾಬಿ ಜಲದೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಕಲೆಗಳು ನಿವಾರಣೆಯಾಗುತ್ತವೆ. ಇದು ಸೂರ್ಯನ ಬಿಸಿಲಿನಿಂದ ಕಳೆಗುಂದಿದ ಚರ್ಮವನ್ನು ತಿಳಿಗೊಳಿಸಲು ಸಹಕಾರಿ.

ಓಟ್‌ಮೀಲ್‌
ಕಳೆಗುಂದಿದ ಹಾಗೂ ಸುಕ್ಕುಗಟ್ಟಿದ ಚರ್ಮವನ್ನು ಹೋಗಲಾಡಿಸಲು ಓಟ್‌ಮೀಲ್‌ ಒಂದು ನೈಸರ್ಗಿಕ ಪರಿಹಾರ. ಇದು ಸುಕ್ಕುಗಟ್ಟಿದ ಹಾಗೂ ಎಣ್ಣೆಯುಕ್ತ ಚರ್ಮವನ್ನು  ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT