ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖಿಗಳಲ್ಲವೇ?

Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವರ್ಲ್ಡ್‌ ಹ್ಯಾಪಿನೆಸ್ ಸಂಸ್ಥೆ ಸಿದ್ಧಪಡಿಸಿದ ಸುಖೀ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 117ನೇ ಸ್ಥಾನ ಪಡೆದಿರುವುದು ಚಿಂತಿಸಬೇಕಾದ ಸಂಗತಿ. ಪಾಕಿಸ್ತಾನ, ಪ್ಯಾಲೆಸ್ಟೀನ್‌, ಬಾಂಗ್ಲಾದೇಶ ಅಂಥ ದೇಶಗಳು ನಮಗಿಂತ ಉತ್ತಮ ಸ್ಥಿತಿಯಲ್ಲಿರುವುದು ಆಶ್ಚರ್ಯಕರ.


ಭಯೋತ್ಪಾದನೆ, ರಾಜಕೀಯ ಅಸ್ಥಿರತೆಯಿಂದ ನರಳುತ್ತಿರುವ ಪಾಕಿಸ್ತಾನ,  ಅರಾಜಕತೆಯಿಂದ ಬೇಗುದಿಗೆ ಒಳಗಾದ ಪಾಲೆಸ್ಟೀನ್‌, ರಾಜಕೀಯ ಬಿಕ್ಕಟ್ಟು, ಆಂತರಿಕ ಸಂಘರ್ಷಗಳಿಂದ ಬಳಲುತ್ತಿರುವ ಬಾಂಗ್ಲಾದಂಥ ದೇಶಗಳಿಗೂ ಕಡೆಯಾದೆವೇ ನಾವು?

ತಕ್ಕಮಟ್ಟಿಗೆ ನೆಮ್ಮದಿಯಿಂದ ಇರುವ, ಅಭಿವೃದ್ಧಿಯಲ್ಲಿ ದಾಪುಗಾಲು ಇಡುತ್ತಿರುವ ಭಾರತ,  ಸುಖೀ ರಾಷ್ಟ್ರದ ಮಾನದಂಡಗಳಲ್ಲಿ ಹಿಂದೆ ಬೀಳಲು ಕಾರಣ ಏನು? ಈ ಬಗ್ಗೆ ಆತ್ಮಾವಲೋಕನ ಆಗಬೇಕು. ಸುಸ್ಥಿರ ಅಭಿವೃದ್ಧಿ ಕುರಿತು ದನಿ ಮೊಳಗಲಾರಂಭಿಸಿದೆ, ಇದು ಇನ್ನಷ್ಟು ಜೋರು ಪಡೆಯಲಿ.
ಬಾಬಾಜಾನ ಆರ್.ಬೈರಕದಾರ ನರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT