ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಸ್ಥಳಕ್ಕೆ ಭಾರತೀಯರು

Last Updated 24 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇರಾಕ್‌ನ ಗಲಭೆ ಪೀಡಿತ ಪ್ರದೇಶಗಳಲ್ಲಿದ್ದ 17ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳೀಯ ಆಡಳಿತದ ನೆರವಿನಿಂದ ಬಾಗ್ದಾದ್‌ಗೆ ಸ್ಥಳಾಂತರಿ­ಸಲಾಗಿದೆ. ಈವರೆಗೆ ಭಾರತ ಮೂಲದ 34 ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.

‘ಸುರಕ್ಷತೆ ದೃಷ್ಟಿಯಿಂದ ಇರಾಕ್‌ ತೊರೆ­ಯುವುದು ಒಳಿತು’ ಎಂದು ಭಾರ­ತೀಯರಿಗೆ ಸಲಹೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ಇರಾಕ್‌ನಲ್ಲಿರುವ ಭಾರತೀಯರ ಸುರಕ್ಷತೆಗೆ ಮೊದಲ ಆದ್ಯತೆ. ಆದ್ದರಿಂದ ಹಿಂಸಾಚಾರ ನಡೆಯುತ್ತಿರುವ ಪ್ರದೇಶ­ದಲ್ಲಿ­ರುವವರಿಗೆ  ಹೊರಕ್ಕೆ ಬಾರದಂತೆ ಸೂಚಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರರು ಹೇಳಿದ್ದಾರೆ.

‘ಇರಾಕ್‌ ತೊರೆಯಲು ಬಯಸುವ ಭಾರತೀಯರಿಗೆ ನೆರವು ನೀಡಲು ಭಾರತದ ದೂತಾವಾಸದ ಅಧಿಕಾರಿ­ಗಳು ಮತ್ತು ಇರಾಕ್‌ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಲಾ­ಗುತ್ತಿದೆ’ ಎಂದೂ ವಕ್ತಾರರು ಹೇಳಿದ್ದಾರೆ.

‘ಸೇನೆ ನಿಯೋಜನೆ ಇಲ್ಲ’
ಇರಾಕ್‌ನ ಗಲಭೆಗ್ರಸ್ತ ಸ್ಥಳಗಳಲ್ಲಿ­ರುವ ಭಾರತೀಯರ ಸುರಕ್ಷಿತ  ಸ್ಥಳಾಂತರಕ್ಕಾಗಿ ದೇಶದ ಸೇನಾ ಪಡೆಯನ್ನು ನಿಯೋಜಿಸುವ ಇಚ್ಛೆ ಸರ್ಕಾರಕ್ಕೆ ಇಲ್ಲ ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಸ್ಪಷ್ಟಪಡಿ­ಸಿದ್ದಾರೆ.

‘ಈ ವಿಷಯದಲ್ಲಿ ನಾನು ಯಾವುದೇ ಊಹಾಪೋಹಗಳಿಗೆ ಆಸ್ಪದ ನೀಡುವುದಿಲ್ಲ’ ಎಂದು ಅವರು ಸುದ್ದಿಗಾರರ ಪ್ರಶ್ನೆ­ಯೊಂದಕ್ಕೆ ಉತ್ತರಿಸಿದ್ದಾರೆ.

ವೆಚ್ಚ ಭರಿಸಲು ಸಿದ್ಧ
(ತಿರುವನಂತಪುರ ವರದಿ): ಇರಾಕ್‌ನಲ್ಲಿ ಘರ್ಷಣೆ ನಡೆಯುತ್ತಿ­ರುವ ಸ್ಥಳಗಳಲ್ಲಿ ಸಿಲುಕಿಕೊಂಡಿ­ರುವ ಕೇರಳ ಮೂಲದವರನ್ನು ರಾಜ್ಯಕ್ಕೆ ವಾಪಸು ಕರೆತರಲು ತಗಲುವ ವೆಚ್ಚ ಭರಿಸುವುದಾಗಿ ಕೇರಳ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT