ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.1ಕ್ಕೆ ‘ಪೈಕಾ’ ಕ್ರೀಡಾಕೂಟ

Last Updated 19 ಸೆಪ್ಟೆಂಬರ್ 2014, 9:31 IST
ಅಕ್ಷರ ಗಾತ್ರ

ರಾಮನಗರ: ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2014– -15ನೇ ಸಾಲಿನಲ್ಲಿ ರಾಮ­ನಗರ ಜಿಲ್ಲೆಯ ನಾಲ್ಕು ತಾಲ್ಲೂ­ಕುಗಳಲ್ಲಿ ತಾಲ್ಲೂಕು ಮಟ್ಟದ ಪೈಕಾ ಕ್ರೀಡಾಕೂಟ ಮತ್ತು ದಸರಾ ಕ್ರೀಡಾ­ಕೂಟವನ್ನು ಈ ಕೆಳಕಂಡ ದಿನಾಂಕ­ಗಳಂದು ಏರ್ಪಡಿಸಿದೆ.

ರಾಮನಗರ ತಾಲ್ಲೂಕಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟಂಬರ್ 1 ರಂದು ಪೈಕಾ ಕ್ರೀಡಾಕೂಟ, ಸೆಪ್ಟೆಂಬರ್ 2 ರಂದು ದಸರಾ ಕ್ರೀಡಾಕೂಟ;  ಕನಕಪುರ ತಾಲ್ಲೂಕಿನ ತಾಲ್ಲೂಕು ಕ್ರೀಡಾಂ­ಗಣದಲ್ಲಿ ಸೆ. 2 ರಂದು ಪೈಕಾ ಕ್ರೀಡಾಕೂಟ, ಸೆ 1 ರಂದು ದಸರಾ ಕ್ರೀಡಾಕೂಟ ನಡೆಯಲಿದೆ.

ಮಾಗಡಿ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೆ 1 ರಂದು ಪೈಕಾ ಕ್ರೀಡಾಕೂಟ, ಸೆ 2 ರಂದು ದಸರಾ ಕ್ರೀಡಾಕೂಟ; ಚನ್ನಪಟ್ಟಣ ತಾಲ್ಲೂಕಿನ ಬಾಲಕರ ಸರ್ಕಾರಿ  ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೆ 1 ರಂದು ಪೈಕಾ ಕ್ರೀಡಾಕೂಟ, ಸೆ 2 ರಂದು ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ತಾಲ್ಲೂಕು ಮಟ್ಟದ ಪೈಕಾ ಕ್ರೀಡಾಕೂಟಗಳಲ್ಲಿ ಸಂಘಟಿಸಲಾಗುವ ಕ್ರೀಡೆಗಳ ವಿವರ: ಅಥ್ಲೇಟಿಕ್ಸ್, ಕಬ್ಬಡಿ, ಕೊಕ್ಕೊ, ವಾಲೀಬಾಲ್ ಹಾಗೂ ಷಟಲ್ ಬ್ಯಾಡ್ಮಿಂಟನ್.

ಅಥ್ಲೇಟಿಕ್ಸ್ :- 100ಮೀ, 400ಮೀ, 800ಮೀ, 1500ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತಟ್ಟೆ ಎಸೆತ 4 X 100 ಮೀಟರ್‌ ಹಾಗೂ 4X400 ಮೀಟರ್‌ ರಿಲೆ (ಬಾಲಕ ಹಾಗೂ ಬಾಲಕಿಯರಿಗೆ) 5000 ಮೀ (ಬಾಲಕರಿಗೆ) 3000 ಮೀ (ಬಾಲಕಿಯರಿಗೆ) ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪೈಕಾ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಬಾಲಕ ಮತ್ತು ಬಾಲ­ಕಿಯರು 2014ರ ಡಿಸೆಂಬರ್‌ 31ಕ್ಕೆ 16 ವರ್ಷದ ಒಳಗಿರಬೇಕು. ಪೈಕಾ ಗ್ರಾಮೀಣ ಪೈಕಾ ಕ್ರೀಡಾ­ಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳು ಸ್ಪರ್ಧೆಗೆ ಬರುವಾಗ ಶಾಲಾ ಮುಖ್ಯಸ್ಥರಿಂದ ವಾಸ ದೃಢೀಕರಣ ಪತ್ರ ಹಾಗೂ ಜನ್ಮ ದಿನಾಂಕ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕು.

ತಾಲ್ಲೂಕು ಮಟ್ಟದಲ್ಲಿ ಭಾಗವಹಿಸಿ ಅಥ್ಲೆಟಿಕ್ ವಿಭಾಗದಲ್ಲಿ ಮೊದಲನೆಯ ಮತ್ತು ಎರಡನೆಯ ಸ್ಥಾನ ಪಡೆದವರು (ರಿಲೇ ಹೊರತುಪಡಿಸಿ) ಮತ್ತು ಗುಂಪು ಕ್ರೀಡೆಗಳಲ್ಲಿ ಮತ್ತು ರಿಲೇ ಓಟಗಳಲ್ಲಿ ಮೊದಲನೇಯ ಸ್ಥಾನ ಪಡೆದ ತಂಡಗಳು ಮಾತ್ರ ಸೆ 10 ರಂದು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಪೈಕಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಯೋಮಿತಿ ಇರುವುದಿಲ್ಲ. ಯಾವುದೇ ಕ್ರೀಡಾಪಟು ಅಥವಾ ತಂಡ ಯಾವುದೇ ಜಿಲ್ಲೆಯಲ್ಲಿ ಒಂದು ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿ­ಸಿದ ನಂತರ ಬೇರೆ ಯಾವುದೇ ತಾಲ್ಲೂಕು ಅಥವಾ ಜಿಲ್ಲೆಯ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವ­ಕಾಶವಿರುವುದಿಲ್ಲ. ತಾಲ್ಲೂಕು ಮಟ್ಟ­ದಲ್ಲಿ ಭಾಗವಹಿಸಿ ಅಥ್ಲೇಟಿಕ್ ವಿಭಾ­ಗದಲ್ಲಿ ಮೊದಲನೆಯ ಮತ್ತು
ಎರ­ಡನೆಯ ಸ್ಥಾನ ಪಡೆದವರು (ರಿಲೇ ಹೊರ­ತುಪಡಿಸಿ) ಮತ್ತು ಗುಂಪು ಕ್ರೀಡೆಗಳಲ್ಲಿ ಮತ್ತು ರಿಲೇ ಓಟಗಳಲ್ಲಿ ಮೊದಲನೇಯ ಸ್ಥಾನ ಪಡೆದ ತಂಡಗಳು ಮಾತ್ರ ಸೆ 11 ರಂದು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ದಸರಾ ಕ್ರೀಡಾ­ಕೂಟದಲ್ಲಿ ಭಾಗವಹಿಸಲು ಅರ್ಹ­ರಾಗಿರುತ್ತಾರೆ.

ಹಾಕಿ, ಬ್ಯಾಸ್ಕೆಟ್‌ ಬಾಲ್‌, ಟೇಬಲ್ ಟೆನ್ನಿಸ್‌ ಸ್ಪರ್ಧೆಗಳನ್ನು (ಪುರುಷರು ಮತ್ತು ಮಹಿಳೆಯರಿಗೆ) ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಲಾಗುವುದು. ಈಜು, ಹ್ಯಾಂಡ್‌ಬಾಲ್‌, ಜಿಮಿನಾಸ್ಟಿಕ್‌, ಟೆನ್ನಿಸ್‌ ಹಾಗೂ ಷಟಲ್ ಬ್ಯಾಡ್ಮಿಂಟನ್ ಈ ಕ್ರೀಡೆಗಳಲ್ಲಿ ಸ್ಪರ್ಧಿಗಳು ಆಯ್ಕೆ ಮಾಡಿ ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಕಳುಹಿಸಿಕೊಡಲಾಗುವುದು ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಿ. ನವಜ್ಯೋತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT