ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.3ಕ್ಕೆ ಜೆಡಿಎಸ್‌ ಶಾಸಕರ ಸಭೆ

ಅಸಮಾಧಾನ ಶಮನಕ್ಕೆ ಯತ್ನ
Last Updated 30 ಆಗಸ್ಟ್ 2014, 19:52 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ಪಕ್ಷದಲ್ಲಿ ಕಂಡು ಬಂದಿರುವ ಅಸ­ಮಾ­ಧಾನ, ಭಿನ್ನಮತ­ದ ಬಗ್ಗೆ ಮುಕ್ತವಾಗಿ ಚರ್ಚಿಸಲು ಜೆಡಿಎಸ್‌ ಮುಖಂಡ ಎಚ್‌.ಡಿ ಕುಮಾರಸ್ವಾಮಿ ಅವರು ಸೆ.3ರಂದು ಪಕ್ಷದ ಶಾಸಕರ ಸಭೆ ಕರೆದಿದ್ದಾರೆ.

‘ಗೌರಿ–ಗಣೇಶ’ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಎರಡು ಪುಟಗಳ ಭಾವನಾತ್ಮಕ ಪತ್ರ ಬರೆದಿರುವ ಅವರು, ‘ಯಾವುದೇ ಪೂರ್ವಗ್ರಹ, ಹಿಂಜರಿಕೆ ಇಲ್ಲದೆ ಮುಕ್ತ ವಾತಾ­ರಣ­­ದಲ್ಲಿ ಎಲ್ಲಾ ವಿಷಯಗಳನ್ನು ಚರ್ಚಿ­-ಸೋಣ’ ಎಂದು ಶಾಸಕರಿಗೆ ಆಹ್ವಾನ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟ­ವಾಗುತ್ತಿರುವ ವರದಿಗಳು ತಮ್ಮನ್ನು ಖಿನ್ನತೆಗೆ ದೂಡಿರುವುದು ಮಾತ್ರವಲ್ಲದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿವೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

‘ಪಕ್ಷದಲ್ಲಿ ಮೇಲಿಂದ ಮೇಲೆ ಬರುತ್ತಿರುವ ಅಪ­ಸ್ವರಗಳು ನನಗಿಂತಲೂ ಪಕ್ಷದ ಕಾರ್ಯ­ಕರ್ತರನ್ನು ಆತಂಕಕ್ಕೆ ನೂಕಿವೆ. ಅಧಿ­ಕಾರದ ಕುರ್ಚಿಯ ಕಾಲುಗಳೇ ಕಾರ್ಯ­ಕರ್ತರು. ಇಂತಹ ಕಾಲುಗಳನ್ನು ಮುರಿ­ಯುವ ಬದಲಿಗೆ ಬೆಸೆಯುವ ಕೆಲಸವಾಗ­ಬೇಕು. ಅವರಲ್ಲಿ ಆತ್ಮವಿಶ್ವಾಸ ಮೂಡಿಸ­ಬೇಕು’ ಎಂದು ಅವರು ಬರೆದಿದ್ದಾರೆ. ಸೆಪ್ಟೆಂಬರ್‌ 3ರಂದು ಬೆಂಗಳೂರಿನ ಚಾನ್ಸೆರಿ ಪೆವಿಲಿಯನ್‌ ಹೋಟೆಲ್‌ನಲ್ಲಿ ಈ ಸಭೆ ನಡೆಯಲಿದೆ.

ತಿದ್ದಿಕೊಳ್ಳಲು ಸಿದ್ಧ
ನನ್ನಿಂದ ಆಗಿರ ಬಹುದಾದ ತಪ್ಪು­ಗಳನ್ನು ತಿದ್ದಿ ಕೊಳ್ಳಲು ನಾನು ಸಿದ್ಧ. ನನ್ನ ಕಾರ್ಯ­ವೈಖರಿ­ಯಲ್ಲಿ ತಪ್ಪು ಕಂಡರೆ ಸರಿಪಡಿಸಲು ಹಿರಿಯರಾದ ನೀವು ಅರ್ಹರು. ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ. ನನ್ನ ನಾಯಕತ್ವದಲ್ಲಿ ತಮಗೆ ಅನುಮಾನ­ಗಳಿದ್ದರೆ ಪರಿಹರಿ­ಸೋಣ. ಅವಶ್ಯ ಕಂಡರೆ ಪರ್ಯಾಯ ನಾಯಕತ್ವ ಹುಡುಕೋಣ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲು ನಾನು ಸದಾ ಸಿದ್ಧ.
–ಪತ್ರದಲ್ಲಿ ಎಚ್‌.ಡಿ. ಕುಮಾರಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT