ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಿನ ರಾಜಕೀಯದಲ್ಲಿ ನಂಬಿಕೆ ಇಲ್ಲ: ಮೋದಿ

Last Updated 27 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಪತಿ ರಾಬರ್ಟ್‌ ವಾಧ್ರಾ ವಿರುದ್ಧ ಬಿಜೆಪಿ ಮಾಡಿರುವ ಆರೋಪಗಳ ಕುರಿತು ಪ್ರಿಯಾಂಕಾ ಗಾಂಧಿ ತಮ್ಮ ವಾಗ್ದಾಳಿ ತೀವ್ರಗೊಳಿಸಿರುವ ಸಂದರ್ಭದ­ಲ್ಲಿಯೇ, ‘ನಾನು ಸೇಡಿನ ರಾಜಕೀಯ­ದಲ್ಲಿ ನಂಬಿಕೆ ಇಟ್ಟಿಲ್ಲ’  ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಮೋದಿ, ‘ಯಾರಾ­ದರೂ ತಪ್ಪು ಮಾಡಿದಲ್ಲಿ ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತದೆ’  ಎಂದರು.

*ನೀವು ಅಧಿಕಾರಕ್ಕೆ ಬಂದರೆ ವಾಧ್ರಾ ಪ್ರಕ­ರ­ಣ­ವನ್ನು ಯಾವ ರೀತಿ ನಿಭಾಯಿ­ಸುತ್ತೀರಿ?
ಉ: ನಾನು ಪ್ರತೀಕಾರದ ರಾಜಕೀ­ಯದಲ್ಲಿ ನಂಬಿಕೆ ಇಟ್ಟಿಲ್ಲ. ಕಳೆದ ಹತ್ತು ವರ್ಷಗಳಿಂದ ಸ್ವತಃ ನಾನೇ ಇದಕ್ಕೆ ಬಲಿಪಶುವಾಗಿದ್ದೇನೆ.   ತಪ್ಪು ಮಾಡಿದ ವ್ಯಕ್ತಿಯ ವಿರುದ್ಧ ತೆಗೆದು­ಕೊಳ್ಳುವ ಕಾನೂನು ಕ್ರಮ ರಾಜ­ಕೀಯ ಪ್ರೇರಿತವಾಗಿರಬಾರದು.

*ಪ್ರಿಯಾಂಕಾ ಗಾಂಧಿ ಟೀಕೆಗೆ ಏನು ಹೇಳುತ್ತೀರಿ?
ಉ: ಮಗಳಾಗಿ, ಸಹೋದರಿಯಾಗಿ ಅವರು ಸೋನಿಯಾ ಮತ್ತು ರಾಹುಲ್‌್ ಪರ ಪ್ರಚಾರ ಮಾಡುವ ಹಕ್ಕು ಹೊಂದಿದ್ದಾರೆ. ಮಗಳು ತನ್ನ ತಾಯಿಯನ್ನು ಸಮರ್ಥಿಸಿಕೊಳ್ಳು­ವುದು, ಸಹೋದರಿ ತನ್ನ  ಸಹೋದರ­ನನ್ನು ಬೆಂಬಲಿಸುವುದು ಸಹಜ ತಾನೆ?

* ‘‘ನಿಜವಾದ ಮೋದಿ’’ ಯಾರು– ದೃಢ ಸಂಕಲ್ಪದ ನಾಯಕನೇ ಅಥವಾ ವಿಭಜಕ ಮತ್ತು ಸರ್ವಾಧಿಕಾರಿ ಧೋರಣೆಯ ವ್ಯಕ್ತಿಯೇ?
ಉ: ‘ನನ್ನನ್ನು ಹತ್ತಿರದಿಂದ ಬಲ್ಲವರು ಹಾಗೂ ನನ್ನ ಜತೆ ಕೆಲಸ ಮಾಡಿದ­ವರು ನಾನೊಬ್ಬ ದೃಢ ಸ್ವಭಾವದ ವ್ಯಕ್ತಿ ಎಂದು ನಂಬಿದ್ದಾರೆ. ನನ್ನನ್ನು ಹಣಿ­ಯು­ವುದಕ್ಕೆ ವಿರೋಧಿಗಳಿಗೆ ಗಟ್ಟಿ­ಯಾದ ಅಸ್ತ್ರ ಸಿಕ್ಕಿಲ್ಲ. ನಾನೊಬ್ಬ ಸರ್ವಾಧಿ­ಕಾರಿ ಎಂದು ತಮಗೆ ತೋಚಿ­ದಂತೆ ಮಾತನಾಡುತ್ತಾರೆ.

* ಈ ಬಾರಿ ಚುನಾವಣೆಯಲ್ಲಿ ನಿಮ್ಮ ನಿರೀಕ್ಷೆ?
ಉ: ಬಿಜೆಪಿ ಹಾಗೂ ಚುನಾವಣಾ­ಪೂ­ರ್ವದ ಎನ್‌ಡಿಎ ಪಾಲುದಾರರು ಕೇಂದ್ರ­ದಲ್ಲಿ ಸರ್ಕಾರ ರಚಿಸುವುದಕ್ಕೆ ಅಗತ್ಯ­ವಿರುವ ಸಂಖ್ಯಾ ಬಲ ಪಡೆದು­ಕೊಳ್ಳಲಿದ್ದಾರೆ.

*ಮಮತಾ ಬ್ಯಾನರ್ಜಿ­, ಜಯ­ಲಲಿತಾ ಹಾಗೂ ಮಾಯಾವತಿ ನೆರವು ಪಡೆಯಬೇಕಾಗಿ ಬಂದರೆ?
ಉ: ಸರ್ಕಾರ ರಚಿಸುವುದಕ್ಕೆ ಬೇಕಾಗಿ­ರುವ ಸಂಖ್ಯಾಬಲ ಪಡೆದುಕೊಳ್ಳು­ತ್ತೇವೆ ಎಂಬ ದೃಢ ವಿಶ್ವಾಸವಿದೆ. ಆದರೂ, ನಮಗೆ ಈ ದೇಶ ನಡೆಸಲು ಎಲ್ಲರ ಬೆಂಬಲ ಹಾಗೂ ಸಹಕಾರದ ಅಗತ್ಯವಿರುತ್ತದೆ.

*‘ಮೋದಿ ಚುನಾವಣಾ ಪ್ರಚಾರವು ಧರ್ಮ, ಮತಾಂಧತೆ, ಅಧಿಕಾರ ಮತ್ತು ಹಣದ ಅಪಾಯಕಾರಿ ಸಂಯೋ­­­­ಜನೆ’ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರಲ್ಲ...
ಉ:  ಈ ಬಾರಿ ಚುನಾವಣೆಯಲ್ಲಿ 100­ ಸ್ಥಾನಗಳನ್ನು ಗೆಲ್ಲುವುದು ಕೂಡ ಕಾಂಗ್ರೆಸ್‌ಗೆ ದುಸ್ತರವಾಗಿರು­ವು­ದ­ರಿಂದ ಆ ಪಕ್ಷ ತನ್ನ ಅಸ್ತಿತ್ವ ಉಳಿಸಿ­ಕೊಳ್ಳಲು ಹೋರಾಡುತ್ತಿದೆ. ಈ ಕಾರ­ಣ­ಕ್ಕಾಗಿಯೇ  ಜಾತ್ಯತೀತವಾದದ ಅಡಗು­ದಾಣ­ದೊಳಗೆ ಬಚ್ಚಿಟ್ಟು­
ಕೊ­ಳ್ಳಲು ಹೆಣಗಾ­ಡುತ್ತಿದೆ.

*‘ಭಾರತವನ್ನು ಸ್ವರ್ಗವನ್ನಾಗಿ ಮಾಡು­ವು­ದಾಗಿ ಮೋದಿ ಆಶ್ವಾಸನೆ ನೀಡಿದ್ದಾರೆ’ ಎಂದು ಸೋನಿಯಾ ಮಾಡಿದ ಟೀಕೆಗೆ ಏನೆನ್ನುವಿರಿ?
ಉ: ನಾನು ಆ ರೀತಿ ಹೇಳಿಲ್ಲ. ಅಲ್ಲದೇ, ನನ್ನಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ ಎಂದೂ  ಜಂಬಕೊಚ್ಚಿಕೊಂಡಿಲ್ಲ. ಭಾರತದ ಜನ ಪವಾಡ ಎದುರು ನೋಡುತ್ತಿಲ್ಲ. ಸ್ಥಿರವಾದ, ದೃಢವಾದ ಹಾಗೂ ಸಂವೇದನಾಶೀಲ ಸರ್ಕಾರ ಹೊಂದುವುದಕ್ಕೆ ಅವರು ಖಂಡಿತವಾ­ಗಿಯೂ ಅರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT