ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋದರಿಯ ಮುಂದಿನ ಸಿನಿಮಾದಲ್ಲಿ ಸೋನಂ ಇಲ್ಲ

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ರಿಯಾ ಕಪೂರ್‌ ನಿರ್ಮಿಸುತ್ತಿರುವ ಮುಂದಿನ ಸಿನಿಮಾದಲ್ಲಿ ಸೋನಂ ಕಪೂರ್‌ ನಟಿಸುತ್ತಿಲ್ಲ. ರಿಯಾ ನಿರ್ಮಾಣದ ಮೊದಲ ಚಿತ್ರ ‘ಆಯಿಷಾ’ ಹಾಗೂ ಎರಡನೇ ಸಿನಿಮಾ ‘ಖೂಬ್‌ಸೂರತ್‌’ನಲ್ಲಿ ಸೋನಂ ಕಪೂರ್‌ಗೆ ಮುಖ್ಯ ಪಾತ್ರ ನೀಡಲಾಗಿತ್ತು. ಆದರೆ ತಮ್ಮ ಮುಂದಿನ ಚಿತ್ರದಲ್ಲಿ ಸೋನಮ್‌ ಕಪೂರ್‌ಗೆ ಅವಕಾಶ ನೀಡಿಲ್ಲ ಎಂದಿದ್ದಾರೆ ರಿಯಾ.

‘ನಾನು ಸದ್ಯಕ್ಕೆ ಯುವ ಪೀಳಿಗೆ ಕುರಿತ ಚಿತ್ರಕಥೆ ಮೇಲೆ ಕೆಲಸ ಮಾಡುತ್ತಿದ್ದೇನೆ. ಈ ಸಿನಿಮಾ ನಿರ್ಮಾಣದ ಬಗ್ಗೆ ಬಹಳ ಉತ್ಸುಕಳಾಗಿದ್ದೇನೆ’ ಎಂದು ಅನಿಲ್‌ ಕಪೂರ್‌ ಅವರ ಕಿರಿಯ ಪುತ್ರಿ ರಿಯಾ, ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಅನುಜಾ ಚೌಹಾಣ್ ಅವರ ‘ಬ್ಯಾಟಲ್‌ ಫಾರ್‌ ಬಿಟ್ಟೋರ’ (Battle For Bittora) ಕಾದಂಬರಿ ಆಧರಿತ ಚಿತ್ರವನ್ನು ನಿರ್ಮಿಸಲಿದ್ದೇನೆ. ಇದು ನನ್ನ ನಾಲ್ಕನೇ ಸಿನಿಮಾ. ಇದರಲ್ಲಿ ಸೋದರಿ ಸೋನಂ ಕಪೂರ್‌ ಅಭಿನಯಿಸಲಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದನ್ನು ಎಂಜಾಯ್ ಮಾಡುತ್ತೇನೆ ಎಂದಿದ್ದಾರೆ 27 ವರ್ಷದ ನಿರ್ಮಾಪಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT