ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿ ಎಕ್ಸ್‌ಪೀರಿಯಾ ಝಡ್‌ 3+

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಸೋನಿ ಎಕ್ಸ್‌ಪೀರಿಯಾ ಝಡ್‌3 ಸರಣಿಗೆ ಹೊಸ ಸೇರ್ಪಡೆ ಎಕ್ಸ್‌ಪೀರಿಯಾ ಝಡ್‌3+. ಇದು ಡ್ಯೂರಬಲ್ ಟೆಂಪರ್ಡ್ ಗಾಜು ಹಾಗೂ ವೃತ್ತಾಕಾರದ ಅಂಚುಗಳನ್ನು ಹೊಂದಿದೆ. ಕೇವಲ 6.9 ಎಂಎಂ ದಪ್ಪ ಹಾಗೂ 144 ಗ್ರಾಂಗಳಿರುವ ಝಡ್ 3+ ಅತ್ಯಂತ ಹಗುರ ಹಾಗೂ ತೆಳುವಾಗಿದೆ.

ಎಕ್ಸ್‌ಪೀರಿಯಾ ಝಡ್ 3+ 20.7 ಎಂಪಿ ಕ್ಯಾಮೆರಾ ಹೊಂದಿದೆ. ಸೆಲ್ಫಿ ಪ್ರಿಯರಿಗೆ 5 ಎಂಪಿ ಮುಂಬದಿ ಕ್ಯಾಮೆರಾ ಇದೆ. ಜೊತೆಗೆ, ಇಂಟೆಲಿಜಿಂಟ್ ಆ್ಯಕ್ಟಿವ್ ಮೋಡ್ ಹಾಗೂ ಎಚ್‌ಡಿಆರ್ ವೈಶಿಷ್ಟ್ಯತೆಗಳೊಂದಿಗೆ ಸ್ಟಡಿ ಶಾಟ್ ವೈಶಿಷ್ಟ್ಯತೆಯನ್ನೂ ಹೊಂದಿದೆ.

ಸೋನಿಯ ಎಂದಿನ ವಿಶೇಷ ಸಿಗ್ನೇಚರ್ ವಾಟರ್‌ಪ್ರೂಪ್‌ ಹಾಗೂ ಡಸ್ಟ್‌ಪ್ರೂಫ್ ವಿನ್ಯಾಸಗಳೊಂದಿಗೆ ಎಕ್ಸ್‌ಪೀರಿಯಾ ಝಡ್ 3+ ಗಮನ ಸೆಳೆಯುವ ಐಪಿ65/ಐಪಿ68 ರೇಟಿಂಗ್ ಕೂಡ ಪಡೆದಿದೆ.

ಎಕ್ಸ್‌ಪೀರಿಯಾ ಝಡ್3+, ಅಲ್ಟ್ರಾ-ಫಾಸ್ಟ್ ಸ್ನ್ಯಾಪ್‌ಡ್ರಾಗನ್‌ 810 ಆಕ್ಟಾ-ಕೋರ್ 64-ಬಿಟ್ ಪ್ರಾಸೆಸರ್‌ಗಳಿಂದ ಕೂಡಿದೆ. ಕಪ್ಪು, ಬಿಳಿ, ಕಾಪರ್‌ ಹಾಗೂ ಅಕ್ವಾ ಗ್ರೀನ್‌ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ ಬೆಲೆ ₹ 55, 990. ಎಕ್ಸ್‌ಪೀರಿಯಾ ಝಡ್ 3+ ಭಾರತದಾದ್ಯಂತ ಸೋನಿ ಸೆಂಟರ್‌ಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ http://www.sonymobile.com ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT