ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್‌ ಅಲಯನ್ಸ್‌–ಏರ್‌ ಇಂಡಿಯಾ ಮೈತ್ರಿ

ಶೀಘ್ರವೇ ಟಿಕೆಟ್‌ ಮಾರಾಟ ಒಪ್ಪಂದ
Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಟಾರ್‌ ಅಲಯನ್ಸ್‌­ನಲ್ಲಿರುವ ವಿಮಾನಯಾನ ಸಂಸ್ಥೆ­ಗಳೊಂದಿಗೆ ಉತ್ತಮ ಸಂಬಂಧ ಮತ್ತು ಸಹಕಾರ ಸಾಧಿಸುವ ಪ್ರಯತ್ನ ಜಾರಿ­ಯಲ್ಲಿದೆ. ಮಾರ್ಚ್‌ ಅಂತ್ಯ­ದೊಳಗೆ ಸ್ಟಾರ್‌ ಅಲಯನ್ಸ್‌ನ ಎಲ್ಲಾ ವಿಮಾನ­ಯಾನ ಸಂಸ್ಥೆ­ಗಳ ಜತೆ ಕೋಡ್‌ ಷೇರ್‌ (ವಿಮಾನ ವೇಳಾಪಟ್ಟಿ ವಿನಿಮಯ ಮತ್ತು ಟಿಕೆಟ್‌ ಮಾರಾಟ ಅವಕಾಶ) ಒಪ್ಪಂದ ಮಾಡಿಕೊಳ್ಳ­ಲಾಗುವುದು ಎಂದು ‘ಏರ್‌ ಇಂಡಿಯಾ’ ಅಧ್ಯಕ್ಷ ರೋಹಿತ್‌ ನಂದನ್ ಹೇಳಿದ್ದಾರೆ.

ಜಾಗತಿಕ ವಿಮಾನಯಾನ ಒಕ್ಕೂಟ ‘ಸ್ಟಾರ್‌ ಅಲಯನ್ಸ್‌’­ನ ಭಾರತದಲ್ಲಿನ ಮೊದಲ ಮುಖ್ಯ ಕಾರ್ಯ­ನಿರ್ವಾಹಕ ಮಂಡಳಿ (ಸಿಇಬಿ) ಸಭೆಯನ್ನು ‘ಏರ್‌ ಇಂಡಿಯಾ’ ಸಂಸ್ಥೆ ದೆಹಲಿಯಲ್ಲಿ ಬುಧ­ವಾರ ಆಯೋಜಿಸಿತ್ತು. ನಂತರ ಸುದ್ದಿ­ಗಾರರ ಜತೆ ಮಾತನಾಡಿದ ಸಂಸ್ಥೆ ಅಧ್ಯಕ್ಷ ರೋಹಿತ್‌, ‘ಈಗಾಗಲೇ ಏರ್‌ ಕೆನಡಾ­ದೊಂದಿಗೆ ಕೋಡ್‌ ಷೇರ್‌ ಒಪ್ಪಂದಕ್ಕೆ ಸಹಿ ಮಾಡಿದ್ದೇವೆ’ ಎಂದಿದ್ದಾರೆ.

‘ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ಪ್ರತಿಷ್ಠಿತ ಒಕ್ಕೂಟ­ವಾದ ಸ್ಟಾರ್‌ ಅಲ­ಯನ್ಸ್‌ ಸದಸ್ಯತ್ಯ ಪಡೆಯುವ ಮೂಲಕ ಸಂಸ್ಥೆಯು ತನ್ನ ಸೇವೆಗಳ ಗುಣಮಟ್ಟ ವೃದ್ಧಿಗೆ ಹಲವು ಬದಲಾ­ವಣೆಗಳನ್ನು ಮಾಡಿಕೊಳ್ಳುತ್ತಿದೆ’ ಎಂದು ಹೇಳಿದ್ದಾರೆ.

ಒಪ್ಪಂದದ ಬಳಿಕ ಏರ್‌ ಇಂಡಿಯಾ ಮತ್ತು ಸ್ಟಾರ್‌ ಅಲಯನ್ಸ್‌ನಲ್ಲಿರುವ ವಿಮಾನ­ಯಾನ ಸಂಸ್ಥೆಗಳ ನಡುವೆ ಪ್ರಯಾಣಿಸುವ  ಪ್ರಯಾಣಿ­ಕರ ಸಂಖ್ಯೆ ಶೇ 33ರಷ್ಟು ಹೆಚ್ಚಿದೆ. ಮುಖ್ಯವಾಗಿ ದೆಹಲಿ ಅಥವಾ ಮುಂಬೈ ಮೂಲಕ ಪ್ರಯಾಣಿಸುವವರ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತವು ಸ್ವದೇಶಿ ವಿಮಾನಯಾನ ಸೇವೆ ಒದಗಿ­ಸುವ ಐದನೇ ಅತಿದೊಡ್ಡ ಮಾರುಕಟ್ಟೆ­ಯಾಗಿದೆ. ಹೀಗಾಗಿ ಸ್ವದೇಶ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಏರ್‌ ಇಂಡಿಯಾ ಸಂಸ್ಥೆಯನ್ನು ಬೆಳೆಸಲಾ­ಗುವುದು ಎಂದು ಸ್ಟಾರ್‌ ಅಲಯನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್‌ ಸ್ವಾಬ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT