ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿಗಳ ಆದ್ಯತೆಗಳೇನು?

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಇದು ಸ್ವಾಮೀಜಿಗಳ ಕಾಲವೆನಿಸುತ್ತಿದೆ. ಒಬ್ಬರು ಸ್ವಾಮಿಗಳು ಕೊಲೆ ಆಪಾದನೆಗೆ ಸಿಲುಕಿ ಇತ್ತೀಚೆ­ಗಷ್ಟೆ ಅತ್ಯುಚ್ಚ ನ್ಯಾಯಾಲಯದಿಂದ  ಬಿಡುಗ­ಡೆಯ ನೆಮ್ಮದಿ ಪಡೆದಿದ್ದಾರೆ. ಇನ್ನೊ­ಬ್ಬರು ಸ್ವಾಮಿ­ಗಳು ಅತ್ಯಾಚಾರದ ಆರೋಪ ಹೊತ್ತು ಪೊಲೀಸ್ ಸ್ಟೇಷನ್‌ಗೆ ಅಡ್ಡಾಡುತ್ತಿ­ದ್ದಾರೆ. ಒಂದು ಮಠದಲ್ಲಿ ಸ್ವಾಮಿಗಳ ಪೀಠ ತ್ಯಾಗ ಮತ್ತು ಹೊಸ ಸ್ವಾಮಿಗಳ ನೇಮಕಾತಿ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಶೀಘ್ರ ಬಗೆಹರಿಯುವ ಲಕ್ಷಣ­ಗಳಿಲ್ಲ ಮತ್ತು ನ್ಯಾಯಾ­ಲಯದ ಮೆಟ್ಟಿಲು ಹತ್ತಿದರೂ ಹತ್ತಬಹುದು.

ಹಾಗೆಯೇ ಒಬ್ಬರು ಸ್ವಾಮಿಗಳು ಇನ್ನೊಬ್ಬ­ರನ್ನು ದೇವರಲ್ಲವೆಂದು, ದೇವದೂತರಲ್ಲ ಎಂದು ಹೇಳುವುದು, ಇನ್ನೊಬ್ಬರು, ಹಿಂದೂಧರ್ಮದ ಬದಲಿಗೆ ತಮ್ಮ ಪಂಥದ ದೀಕ್ಷೆಯನ್ನು ಕೊಡು­ವು­ದಾಗಿ ಹೇಳಿರುವುದು, ಇವೆಲ್ಲಾ ವಿದ್ಯಮಾನ­ಗಳು ಹಿಂದೂ ಧರ್ಮವನ್ನು ನಂಬಿಕೊಂಡು ಬಂದವರಿಗೆ ಒಂದು ರೀತಿ ಮುಜುಗರ ಉಂಟು ಮಾಡುತ್ತಿವೆ.

ಸ್ವಾಮಿ ನಿತ್ಯಾನಂದ, ಬಾಬಾ ಅಸಾರಾಂ, ಬಾಬಾ ರಾಮ್‌ಪಾಲ್‌ ಅವರು ಹಿಂದೂ ಧರ್ಮಕ್ಕೆ ಅಳಿಸಲಾರದ ಕಪ್ಪುಚುಕ್ಕೆಯಾಗಿದ್ದಾರೆ. 
ಸಾವಿರಾರು ವರ್ಷ­ಗಳಷ್ಟು ಹಳೆಯದಾದ ಹಿಂದೂ ಧರ್ಮ­ವನ್ನು ರಕ್ಷಿಸುವ, ಪಸರಿಸುವ, ಉಳಿಸುವ ಮತ್ತು ಜನರು ಸಜ್ಜನರಾಗಿರುವಂತೆ ಮಾರ್ಗ­ದರ್ಶನ ಮಾಡುವ ಮಹತ್ತರ ಜವಾ­ಬ್ದಾರಿ ಈ ಧಾರ್ಮಿಕ ಪೀಠಗಳ ಮೇಲೆ ಹಾಗೂ ಅದರ ಸ್ವಾಮಿಗಳ ಮೇಲೆ ಇದೆ. ಇವರ ಕಾರ್ಯ­ವೈಖರಿಯಲ್ಲಿ ಕಿಂಚಿತ್ ಲೋಪವಾದರೂ, ಅದು ಇಡೀ ಹಿಂದೂ ಸಮಾಜಕ್ಕೆ ಮತ್ತು ಧರ್ಮಕ್ಕೆ ಆದ ಗಾಯವೇ ಸರಿ. 

ಇಲ್ಲಿಯವರೆಗೆ ಕೆಲವು ರಾಜ­ಕಾರಣಿ­­­ಗಳಿಂದ, ಪಾಶ್ಚಾತ್ಯ ದೇಶಗಳ ಸಂಸ್ಕೃತಿಗೆ ಮಾರುಹೋಗಿ­ರುವ ಯುವ ಜನಾಂಗ­ದಿಂದ, ವಿದೇಶಿ ಧರ್ಮ ಪ್ರಚಾರಕರಿಂದ, ಸೋಗ­ಲಾಡಿ ಬುದ್ಧಿ­ಜೀವಿ­ಗಳಿಂದ ಮತ್ತು ಜಾತ್ಯತೀತ­ವಾದಿ­ಗಳಿಂದ ಹಿಂದೂ ಧರ್ಮ ಪರೋಕ್ಷವಾಗಿ ಪೆಟ್ಟು ತಿನ್ನು­ತ್ತಿತ್ತು. ಅದಕ್ಕೆ ಹಿಂದೂ ಧರ್ಮದ ಕೆಲವು ಸ್ವಾಮಿಗಳ ಕೊಡುಗೆಯೂ ಈಗ ಸೇರಿ­ಕೊಂಡಿದೆ. ಸ್ವಾಮಿಗಳು ಹಿಂದೂ ಧರ್ಮಕ್ಕೆ ವಿಶಾಲವಾದ ತಳಹದಿ ನೀಡಲು ಮತ್ತು ಏಕರೂಪದ ಸಂಹಿತೆ ರೂಪಿಸಲು ಕಾರ್ಯೋನ್ಮುಖರಾಗಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT