ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ಹಾವಳಿ: ಪುನರಾರಂಭಗೊಂಡ ಕಾರ್ಯಾಚರಣೆ

ರೈಲ್ವೆ ಕ್ವಾರ್ಟರ್ಸ್‌ನ ಖಾಲಿ ಮನೆಗಳಲ್ಲಿ ನೂರಾರು ಹಂದಿಗಳು!
Last Updated 20 ಸೆಪ್ಟೆಂಬರ್ 2014, 5:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಹಂದಿಗಳನ್ನು ಹಿಡಿದು ಸ್ಥಳಂತರಿಸುವ ಕಾರ್ಯಾ­ಚರಣೆ ಶುಕ್ರವಾರ ಪುನರಾರಂಭ­ಗೊಂಡಿತು. ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ, ರಾಮನಗರ, ಪ್ರಕಾಶ ಕಾಲೊನಿ, ಶಿವಗಂಗಾ ಲೇಔಟ್‌ ಹಾಗೂ ರೈಲ್ವೆ ಕ್ವಾರ್ಟರ್ಸ್‌್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಮಕೂರಿನಿಂದ ಬಂದಿದ್ದ ತಂಡ ಹಂದಿಗಳನ್ನು ಹಿಡಿಯಿತು.

ಶುಕ್ರವಾರ ನಡೆದ ಕಾರ್ಯಾಚರಣೆ­ಯಲ್ಲಿ 140ಕ್ಕೂ ಅಧಿಕ ಹಂದಿಗಳನ್ನು ಹಿಡಿದು, ಸಾಗಿಸಲಾಗಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ ತಿಳಿಸಿದರು.

‘ಕಾರ್ಯಾಚರಣೆ ಆರಂಭಗೊಂಡಾ­ಗಿನಿಂದ ಈ ವರೆಗೆ 3,000ಕ್ಕೂ ಅಧಿಕ ಹಂದಿಗಳನ್ನು ಹಿಡಿ­ಯ­ಲಾಗಿದೆ. ನಾಳೆಯೂ (ಸೆ. 20) ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಹೇಳಿದರು.

ಕಾರ್ಯಾಚರಣೆ ನಡೆಸಿದ ತಂಡಕ್ಕೆ ಭದ್ರತೆ ಒದಗಿಸುವ ದೃಷ್ಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಅನಧಿಕೃತ ಸಾಕಾಣಿಕೆ?: ರೈಲ್ವೆ ಕ್ವಾರ್ಟರ್ಸ್‌ನಲ್ಲಿ ಖಾಲಿ ಬಿದ್ದಿರುವ ಹಲವಾರು ಮನೆಗಳಲ್ಲಿ 100ಕ್ಕೂ ಅಧಿಕ ಹಂದಿಗಳನ್ನು ಕೂಡಿ ಹಾಕಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಡಾ.ಪ್ರಭು ಬಿರಾದಾರ, ‘ನೂರಾರು ಸಂಖ್ಯೆಗಳಲ್ಲಿ ಹಂದಿಗಳನ್ನು ಅನಧಿಕೃತವಾಗಿ ಕೂಡಿ ಹಾಕಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೂ ತಿಳಿಸಲಾಗಿದೆ. ಆದರೆ, ಈ ಹಂದಿಗಳನ್ನು ಹಿಡಿದು ಸಾಗಿಸಲು ಪಾಲಿಕೆ ನಿಯೋಜಿಸಿ­ರುವ ತಂಡಕ್ಕೆ ಅನುಮತಿ ನೀಡಲು ರೈಲ್ವೆ ಅಧಿಕಾರಿಗಳು ಸಮ್ಮತಿಸಲಿಲ್ಲ’ ಎಂದರು.

‘ಹಂದಿಗಳನ್ನು ಹೊರಗೆ ಸಾಗಿಸಲು ರೈಲ್ವೆ ಅಧಿಕಾರಿ­ಗಳು ಸೂಚಿಸಿದರೂ ಹಂದಿಗಳ ಮಾಲೀಕರು ಈ ಕುರಿತು ಏನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನಾಳೆ ಮತ್ತೊಮ್ಮೆ ರೈಲ್ವೆ ಮತ್ತು ಪೊಲೀಸ್‌ ಅಧಿಕಾರಿ­ಗಳೊಂ­ದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು. 

‘ಇದೇ ರೀತಿ ಒಂದು ದೊಡ್ಡ ಪ್ರದೇಶ­ಗಳಲ್ಲಿ ಹಂದಿ­ಗಳನ್ನು ಅನಧಿಕೃತವಾಗಿ ಕೂಡಿ ಹಾಕುತ್ತಿರುವುದು ಆನಂದ­ನಗರ ಮತ್ತು ಗುಡಿಹಾಳ ರಸ್ತೆಯಲ್ಲಿ ಸಹ ಕಂಡು ಬಂದಿದೆ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT