ಹಂಪಿ (ಹೊಸಪೇಟೆ): ಇಲ್ಲಿನ ಕೃಷ್ಣ ಬಜಾರ್ನ ಪುಷ್ಕರಣಿ ಸಮೀಪದ ಸಾಲು ಮಂಟಪವು ಮಂಗಳವಾರ ಸುರಿದ ಮಳೆಗೆ ಕುಸಿದು ಬಿದ್ದಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಸೇರಿದ ಈ ಸ್ಮಾರಕದ ಮೇಲ್ಛಾವಣಿ ಹಾಗೂ ಅಂದಾಜು 40 ಕಲ್ಲಿನ ಕಂಬಗಳು ಕುಸಿದು ಬಿದ್ದಿವೆ.

ಘಟನೆ ನಡೆದಿರುವ ಸಂದ ರ್ಭದಲ್ಲಿ ಕತ್ತಲಾಗಿದ್ದರಿಂದ ಸ್ಥಳದಲ್ಲಿ ಯಾರೂ ಇರಲಿಲ್ಲ. ಎಎಸ್ಐ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಈವರೆಗಿನ ಬೇಸಿಗೆಯ ಸುಡು ಬಿಸಿಲಿಗೆ ಸ್ಮಾರಕದ ಕಲ್ಲಿನ ಭಾಗಗಳು ಕಾದಿದ್ದವು. ಈಗ ಮಳೆ ಆರಂಭವಾ ದುದರಿಂದ ಏಕಾಏಕಿ ಹವಾಮಾನ ಬದಲಾವಣೆಯಾಗಿ, ಈ ಅವಘಡ ಸಂಭವಿಸಿದೆ’ ಎಂದು ಎಎಸ್ಐ ಅಧಿಕಾರಿ ಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಈಗಾಗಲೇ ಶಿಥಿಲಗೊಂಡಿದ್ದ ಸ್ಮಾರ ಕದ ಪುನರ್ ನಿರ್ಮಾಣಕ್ಕೆ ಎಎಸ್ಐ ತಯಾರಿ ನಡೆಸಿತ್ತಲ್ಲದೆ, ಸ್ಮಾರಕದ ಕಲ್ಲುಗ ಳಿಗೆ ಸಂಖ್ಯೆಯನ್ನೂ ಹಾಕಲಾಗಿತ್ತು. ಅಷ್ಟರ ಲ್ಲಿಯೇ ಈ ಸ್ಮಾರಕ ಕುಸಿದು ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.