ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲು ದರೋಡೆ

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ರಾಜ್ಯದ ಪ್ರತಿ ಸರ್ಕಾರಿ ಬಸ್ ನಿಲ್ದಾಣದಲ್ಲೂ ಸಾರ್ವಜನಿಕ ಶೌಚಾಲಯಗಳಿವೆ. ಆ ಶೌಚಾಲಯಗಳ ಗೋಡೆ ಮೇಲೆ ‘ಮೂತ್ರ ವಿಸರ್ಜನೆಗೆ ಉಚಿತ ಮತ್ತು ಮಲ ವಿಸರ್ಜನೆಗೆ 1 ಅಥವಾ 2 ರೂಪಾಯಿ’ ಎಂದು ಬರೆಯಲಾಗಿರುತ್ತದೆ. ಈ ಫಲಕ ನೋಡಿ, ಸತ್ಯ ಎಂದು ನಂಬಿ ಹೋದರೆ, ಅಲ್ಲಿರುವ ಶೌಚಾಲಯ ನಿರ್ವಾಹಕರು ‘ನೀವು ಒಳಗಡೆ ಹೋಗಿ ಏನಾದ್ರೂ ಮಾಡಿಕೊಳ್ಳಿ. ಇಲ್ಲಿ 5 ರೂಪಾಯಿ ಇಟ್ಟು ಹೋಗಿ’ ಎನ್ನುತ್ತಾರೆ.

ಗೋಡೆಯ ಮೇಲೆ ನಮೂದಿಸಿರುವಂತೆ ಹಣ ನೀಡುತ್ತೇವೆ ಎಂದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇದನ್ನು ಕೇಳಲು ಯಾವೊಬ್ಬ ಅಧಿಕಾರಿಯೂ ಸಮೀಪದಲ್ಲಿ ಇರುವುದಿಲ್ಲ. ಇಂತಹ ಹಗಲು ದರೋಡೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT