ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗುರ ಭಾರ

Last Updated 9 ಜುಲೈ 2016, 19:30 IST
ಅಕ್ಷರ ಗಾತ್ರ

ವಾಸುದೇವ ನಾಡಿಗ್
ಗುಡಿಸಿದಷ್ಟು ಉಳಿದು ಬಿಡುವ
ಈ ಪಾರಿವಾಳಗಳ ಪುಟ್ಟ ಗರಿ ಸಾಲು
ಗಾಳಿಗಿಂತ ಹಗುರ
ಬಿರುಬೇಸಗೆಯಲ್ಲೂ ಅದಾವ
ಕಂಪಹೀರಿಕೊಂಡು ಬಂತೋ ಮಾದಕ
ಘಮಲು ಮಲ್ಲಿಗೆಯ ತರಹ
ಸುಮ್ಮನೆ ಕೂಡಲು ಬಿಡದ ನೆನಪುಗಳಂತೆ
ಪಾರಿವಾಳಗಳ ಪುಟಿವ ಪಾದ
ಕತ್ತ ಕೊಂಕಿಸಿ ಬಿಗುಮಾನ ಬೇರೆ!
ಕಂಗಳ ತುಂಬಾ ಆಕಾಶದ ಚಲನೆ
ಒಂದೊಂದನೆ ಎಸೆದಂತೆ ಹಾರಲು ಬಿಟ್ಟ
ಗರಿಗಳು ಮತ್ತೆ ಮರಳಿ ಎದೆಪರದೆಗೆ
ಅಡರಿಕೊಳ್ಳುವ ಖಯಾಲಿ ಗಾಯ
ಅದಾವ ಅಕ್ಷಯದ ಗರಿಗುಚ್ಛ
ಒಡಲಿಕಿರುಗಿಸಿಕೊಂಡು ಬಂದವೋ
ಹಾರಿದಲ್ಲೆಲ್ಲ ಗರಿ ಗುರುತು
ಸಂಜೆ ಸೆರಗಿನ ತುಂಬಾ ನೆನಪಿನ ಚಿತ್ತಾರ
ಹಾರದಿರು ಜೀವವೆ ಮುಳ್ಳ ಬೇಲಿಗೆ ಗರಿ ತಾಕಿಸಿ
ನೆನಪುಗಳ ಗುಡಿಸಿ ಗುಡ್ಡೆಹಾಕುವುದೆಂದರೆ
ಹಿತಯಾತನೆ
ದಾಟಿಬಂದ ಮೇಲೇ ಬೆಟ್ಟವೂ ಅದೆಷ್ಟು ಹಗುರ
ಗುಡಿಸಿದಷ್ಟೂ ಉಳಿವ ಗರಿಗಳ ನಾಡಿನಲ್ಲಿ
ಇರದ ಭಾರ
ತುಡಿದಷ್ಟೂ ದೂರವುಳಿವ ಮಿಡಿತಗಳಲ್ಲಿ
ಸಿಗದ ಹಗುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT