ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿದವರಿಗೆ ಉಚಿತ ಊಟ...

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಹಸಿದ ಹೊಟ್ಟೆಗೆ ಅನ್ನ ನೀಡುವುದು ಪುಣ್ಯದ ಕೆಲಸ ಎಂಬುದು ಭಾರತದಲ್ಲಿ ಜನಜನಿತ. ಅನೇಕರು ದೇವರ ಹೆಸರಿನಲ್ಲೋ, ಹುಟ್ಟುಹಬ್ಬದ ನೆಪದಲ್ಲೋ ಅನ್ನದಾನ ಮಾಡುತ್ತಾರೆ. ಆದರೆ ಇಲ್ಲೊಬ್ಬ ವಿಶೇಷ ವ್ಯಕ್ತಿ ಇದ್ದಾರೆ, ಅವರು ಕೆನಡಾದಲ್ಲಿ ಹೋಟೆಲ್‌  ಆರಂಭಿಸಿ, ಹಸಿವಿನಿಂದ ಬಂದವರಿಗೆ ಉಚಿತವಾಗಿ ಊಟ ನೀಡುವ ಮೂಲಕ ಅನ್ನದಾನ ಎಂಬ ಪದಕ್ಕೆ ಅರ್ಥ ತಂದುಕೊಟ್ಟಿದ್ದಾರೆ.

ಭಾರತ ಮೂಲದ ಪ್ರಕಾಶ್ ಚಿಬ್ಬರ್ ಈ ಹೋಟೆಲ್‌ ಮಾಲೀಕ.  ಇಲ್ಲಿ ಹಸಿವಿನಿಂದ ಬಂದ ಬಡವರಿಗೆ ಉಚಿತವಾಗಿ ಊಟ ನೀಡುತ್ತಾರೆ. ಈ ಹೋಟೆಲ್ ಹೆಸರು ‘ಇಂಡಿಯನ್ ಫ್ಯೂಷನ್‌: ದಿ ಕರಿ ಹೌಸ್’.

ಇಂಡಿಯನ್ ಫ್ಯೂಷನ್ ಕೇವಲ ಸೊಗಸಾದ ಊಟದಿಂದಷ್ಟೇ ಅಲ್ಲದೇ ಉದಾರತೆಯಿಂದಲೂ ಕೆನಡಾದಾದ್ಯಂತ ಹೆಸರುವಾಸಿಯಾಗಿದೆ. ಈ ರೆಸ್ಟೋರೆಂಟ್‌ನ ಹಿಂಬಾಗಿಲ ಬಳಿ ಸಾಗುತ್ತಿದಂತೆ ಅಲ್ಲಿ ಒಂದು ಬೋರ್ಡ್ ಕಾಣಸಿಗುತ್ತದೆ. ಅದರಲ್ಲಿ ಈ ರೀತಿ ಬರೆಯಲಾಗಿದೆ; ‘ಪ್ರೀತಿಯ ಸ್ನೇಹಿತರೆ, ನೀವು ತುಂಬಾ ಹಸಿದಿದ್ದು, ನಿಮ್ಮ ಬಳಿ ಊಟ ಮಾಡಲು ಹಣವಿಲ್ಲದಿದ್ದರೆ ನೀವು ಈ ಬೆಲ್‌ ಅನ್ನು ಒತ್ತಿ ಅಥವಾ ಒಳಗೆ ಬಂದು ಯಾವಾಗ ಬೇಕಾದರೂ ಉಚಿತವಾಗಿ ಊಟ ಹಾಗೂ ಕಾಫಿ ಪಡೆಯಬಹುದು.

“ಎಷ್ಟು ಜನರಿಗೆ ‘ನೀವು ಹಸಿದಿದ್ದೀರಾ, ನೀವು ಊಟ ಮಾಡಿಲ್ಲವೇ’ ಎಂದು ಕೇಳಿಕೊಂಡು ಹೋಗಲಿ, ಅದು ಸಾಧ್ಯವಿಲ್ಲ ಎಂದು ತಿಳಿದ ಮೇಲೆ ನನಗೆ ಈ ಫಲಕವನ್ನು  ಹಾಕುವ ಯೋಚನೆ ಬಂತು” ಎಂದು ಪ್ರಕಾಶ್ ಕೆನಡಾದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಈ ಹೋಟೆಲಿನಲ್ಲಿ ಹಸಿದು ಬಂದವರಿಗೆ ಮೂರು ರೀತಿಯ ಆಹಾರ ನೀಡಲಾಗುವುದು. ಸಸ್ಯಾಹಾರ, ಮಾಂಸಾಹಾರ ಊಟ ಹಾಗೂ ಕಾಫಿ, ಹಾಲು ನೀಡಲಾಗುವುದು.ಆಹಾರದಲ್ಲಿ ಯಾವುದೇ ಅಲರ್ಜಿಯ ಅಂಶ ಕಂಡುಬಂದರೆ ಕೂಡಲೇ ಹೋಟೆಲ್‌ ಸಿಬ್ಬಂದಿ ಗಮನಕ್ಕೆ ತರುವಂತೆ ಕೂಡ ಇವರು ಫಲಕದಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ಅವರಿಗೆ ಬಡವರ ಹೊಟ್ಟೆ ಮೇಲೆ ಮಾತ್ರವಲ್ಲದೇ ಆರೋಗ್ಯದತ್ತ ಕಾಳಜಿ ಇದೆ ಎಂಬುದನ್ನು ತೋರಿಸಿದ್ದಾರೆ.

ಇದು ಆರಂಭದಲ್ಲಿ ಮಾತ್ರ, ಮುಂದಿನ ದಿನಗಳಲ್ಲಿ ಇದು ಸಾಧ್ಯವಿಲ್ಲ. ಹೋಟೆಲ್ ಎನ್ನುವುದು ಬ್ಯುಸಿನೆಸ್‌ನ ಒಂದು ಭಾಗ, ಹಣಗಳಿಸುವುದೊಂದೆ ಇದರ ಮೂಲ ಉದ್ದೇಶ ಎಂಬ ಹಲವರ ಅಭಿಪ್ರಾಯಗಳಿಗೆ ಪ್ರಕಾಶ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ನಾನು ಇನ್ನೂ ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಬಹುದು. ನನ್ನಿಂದ ಅದು ಸಾಧ್ಯ ಕೂಡ, ಇಂದು ಜನರಿಗೆ ಊಟ ಹಾಕುವ ಕೆಲಸ ಮಾಡುತ್ತಿದ್ದೇನೆ, ಮುಂದಿನ ದಿನಗಳಲ್ಲಿ ಸಮಾಜಕ್ಕೆ ನೆರವಾಗುವ ಹೆಚ್ಚಿನ ಕೆಲಸವನ್ನು ನಾನು ಮಾಡುತ್ತೇನೆ. ಇದು ನನ್ನ ಜೀವನದ ಶೈಲಿ. ಇದರಿಂದ ನನಗೆ ಯಾವುದೇ ಹೆಸರು ಗಳಿಸಬೇಕು ಎಂಬ ನಿಲುವು ಇಲ್ಲ’ ಎಂಬುದು ಪ್ರಕಾಶ್ ಅವರ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT