ವನಮಾಲ ಆರ್ಟ್ ಫೌಂಡೇಶನ್ ಒಳಗೆ ಕಾಲಿಟ್ಟರೆ ಅಲ್ಲಿ ಅನಾವರಣಗೊಳ್ಳುವುದು ಸಂಗೀತ ಪ್ರಪಂಚ. ಸಂಗೀತಾಸಕ್ತರನ್ನು ಕಟ್ಟಿಹಾಕುವುದು ಸುಮಧುರ ಆಲಾಪದ ಜತೆಗೆ ಸಂಗೀತಕ್ಕೆ ಸಂಬಂಧಿಸಿದ ಹತ್ತು ಹಲವು ಪುಸ್ತಕಗಳನ್ನೊಳಗೊಂಡ `ಪುಸ್ತಕ ಚಾವಡಿ'. ಈ ಸಂಗೀತ ಗ್ರಂಥಾಲಯದಲ್ಲಿ ಸಂಶೋಧನೆ, ಪರಾಮರ್ಶನ, ಜ್ಞಾನರ್ಜನೆಗೆ ವಿಪುಲ ಅವಕಾಶವಿದೆ. ಜತೆಗೆ ಪ್ರಶಾಂತ ವಾತಾವರಣವಿದೆ.

`ಪುಸ್ತಕ ಚಾವಡಿ'ಯಲ್ಲಿ ಹಲವಾರು ಸಂಗೀತ ಪುಸ್ತಕಗಳು, ಆಕರ ಕೋಶಗಳು, ವಾಗ್ಗೇಯಕಾರರ- ಹಿರಿಯ ವಿದ್ವಾಂಸರ ಚಿತ್ರಪಟ, ಸಂಶೋಧನೆಗೆ, ಉನ್ನತ ಅಭ್ಯಾಸಕ್ಕೆ ಪೂರಕವಾದ ಮಾಹಿತಿಯನ್ನೊಳಗೊಂಡ ಸೀಡಿ, ವಿಡಿಯೊ ಚಿತ್ರೀಕರಣ, ಶಾಸ್ತ್ರಭಾಗ, ಪ್ರಯೋಗ ಭಾಗಕ್ಕೆ ಅಗತ್ಯವಿರುವ ಎಲ್ಲ ಮಾಹಿತಿಯೂ ಇಲ್ಲಿ ಲಭ್ಯ. ಹೀಗಾಗಿ ಈ ಸಂಗೀತ ಶಾಲೆಯಲ್ಲಿ ಸಂಗೀತದ ಜತೆಗೆ ಸರ್ವತೋಮುಖ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ.

ಸಂಗೀತದಲ್ಲಿ ಗುರುಗಳು ಹೇಳಿಕೊಟ್ಟ `ಸರಿಗಮಪದನಿಸ'ವನ್ನು ಮತ್ತೊಂದು ಕ್ಲಾಸ್ಗೆ ಬಂದು `ಗಿಣಿ ಪಾಠ' ಒಪ್ಪಿಸಿದರೆ ಮುಗಿಯುವುದಿಲ್ಲ. ಸಂಗೀತದ ವಿವಿಧ ಆಯಾಮಗಳನ್ನು, ಪೂರಕ ವಿಚಾರಗಳನ್ನು ತಿಳಿದುಕೊಂಡು ಜ್ಞಾನ ವಿಸ್ತರಿಸುವುದು ಬಹಳ ಅಗತ್ಯ. ಈ ನಿಟ್ಟಿನಲ್ಲಿ ಜೆ.ಪಿ. ನಗರದಲ್ಲಿರುವ ವನಮಾಲ ಆರ್ಟ್ ಫೌಂಡೇಶನ್ ನಗರದ ಸಂಗೀತ ಶಾಲೆಗಳಲ್ಲೇ ವಿಭಿನ್ನವಾಗಿ ನಿಲ್ಲುತ್ತದೆ. ಇಲ್ಲಿ ಒಟ್ಟು 20 ಮಕ್ಕಳು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಸಂಗೀತದಲ್ಲಿ ಎಂಫಿಲ್, ಪಿಎಚ್.ಡಿ. ಮಾಡುವ ಅನೇಕ ವಿದ್ಯಾರ್ಥಿಗಳು ಈ ಸಂಗೀತ ಶಾಲೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯ ಮತ್ತು ಜೈನ್ ವಿಶ್ವವಿದ್ಯಾನಿಲಯಗಳಲ್ಲಿ ಸಂಗೀತ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿರುವ ಡಾ. ಮೀರಾ ರಾಜಾರಾಮ್ ಪ್ರಾಣೇಶ್ ಈ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ.

ವನಮಾಲ ಸಂಗೀತ ಶಾಲೆ 1994ರಲ್ಲಿ ಆರಂಭವಾಯಿತು. ಬಳಿಕ 2002ರಲ್ಲಿ ಇದನ್ನು ವನಮಾಲ ಆರ್ಟ್ ಫೌಂಡೇಶನ್ ಎಂದು ಮರುನಾಮಕರಣ ಮಾಡಲಾಯಿತು.

ಇಲ್ಲಿ ಸಂಗೀತ ಕಲಿಯುವ ಮಕ್ಕಳಿಗೆ ಪ್ರತ್ಯೇಕ ಪಾಠ ಲಭ್ಯ. ಮಕ್ಕಳಿಗೆ ವೇದಿಕೆಯಲ್ಲಿ ಹಾಡುವ ಅವಕಾಶವೂ ಇದೆ. ಮಕ್ಕಳೇ ಹಾಡಿರುವ ಆಡಿಯೊ ಸೀಡಿ `ಭಕ್ತಿ ಯಾನ' ಮತ್ತು `ಶ್ರೀ ಚಕ್ರ ದರ್ಶನ' ಎಂಬ ಸಂಗೀತ ಪ್ರಾತ್ಯಕ್ಷಿಕೆ ವೀಡಿಯೊ ಚಿತ್ರೀಕರಣವನ್ನೂ ಮಾಡಲಾಗಿದೆ. ಇದು ಎರಡು ಗಂಟೆ ಅವಧಿಯದ್ದಾಗಿದ್ದು, ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರ `ನವಾವರಣ' ಕೃತಿಗಳ ಕನ್ನಡ ಮತ್ತು ಇಂಗ್ಲಿಷ್ ಅವತರಣಿಕೆಯಾಗಿದೆ. ಈ ಶಾಲೆಯಲ್ಲಿ ಸಂಗೀತ ಕಲಾವಿದರ ಅಪರೂಪದ ಚಿತ್ರಗಳು, ಹಸ್ತಪ್ರತಿಗಳು, ಆಡಿಯೊ ಕ್ಯಾಸೆಟ್ಗಳ ಉತ್ತಮ ಸಂಗ್ರಹವಿದೆ.

`ಕಳೆದ ಎರಡು ದಶಕಗಳಿಂದ ಇಲ್ಲಿ ಪ್ರತಿವರ್ಷವೂ ವಾಗ್ಗೇಯಕಾರರ ಆರಾಧನೆ ನಡೆಸುತ್ತೇವೆ. ಇಂತಹ ವಿಶೇಷ ಸಂದರ್ಭಗಳಲ್ಲಿ ಸಂಗೀತ ದಿಗ್ಗಜರ ಭಾವಚಿತ್ರ, ತೈಲ ಚಿತ್ರಗಳನ್ನು ಅನಾವರಣ ಮಾಡುತ್ತೇವೆ. ಇದರಿಂದ ಮಕ್ಕಳಿಗೆ ಹಿರಿಯರ ಆದರ್ಶಗಳನ್ನು ಪಾಲಿಸಲು ಸ್ಫೂರ್ತಿ ಸಿಕ್ಕಿದಂತಾಗುತ್ತದೆ' ಎನ್ನುತ್ತಾರೆ ಡಾ. ಮೀರಾ ರಾಜಾರಾಮ್.
`ಇಲ್ಲಿ ಸಂಗೀತ ಕ್ಲಾಸ್ ನಡೆಸುವುದರ ಜತೆಗೆ ನಿರಂತರವಾಗಿ ಅತಿಥಿ ಕಲಾವಿದರಿಂದ ಉಪನ್ಯಾಸ, ಹಾಡುಗಾರಿಕೆ ನಡೆಯುತ್ತದೆ. ಸಂಗೀತದ ಪ್ರಯೋಗ ಮತ್ತು ಶಾಸ್ತ್ರ ಭಾಗಗಳನ್ನು ಸರಿಯಾಗಿ ಗ್ರಹಿಸಲು ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ' ಎನ್ನುತ್ತಾರೆ ಅವರು.

`ಇದೀಗ ಶಾಲೆಯಲ್ಲಿ `ಭಾರತೀಯ ಸಂಸ್ಕೃತಿ ದರ್ಶನ' ಎಂಬ ಹೊಸ ಕಾರ್ಯಕ್ರಮ ಆರಂಭಿಸಲಾಗಿದೆ. ಇದರಲ್ಲಿ ವಿಶೇಷ ಉಪನ್ಯಾಸವಿರುತ್ತದೆ. ಸಂಗೀತದ ಹುಟ್ಟು, ಬೆಳವಣಿಗೆ ಕುರಿತು ಮಾಹಿತಿ ನೀಡಲಾಗುತ್ತದೆ. ಮೊದಲ ಕಾರ್ಯಕ್ರಮದಲ್ಲಿ `ದೇವಾಲಯ ವಾಸ್ತು ಶಿಲ್ಪಗಳಲ್ಲಿ ಸಂಗೀತ' ಕುರಿತು ಡಾ. ಚೂಡಾಮಣಿ ನಂದಗೋಪಾಲ್ ಉಪನ್ಯಾಸ ನಡೆಸಿಕೊಟ್ಟಿದ್ದರು. ಇದರಿಂದ ಸಂಗೀತ ಕಲಿಯುವ ಮಕ್ಕಳಿಗೆ ಬಹಳ ಪ್ರಯೋಜನವಾಗುತ್ತದೆ' ಎಂದು ವಿವರಿಸುತ್ತಾರೆ.

`ತಲೆಮಾರುಗಳ ಸಂಗೀತ ರಚನೆಕಾರರ ಅನೇಕ ಕೃತಿಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಣೆ ಕೂಡ ಈ ಸಂಸ್ಥೆಯಿಂದ ನಡೆದಿದೆ. ಆಡಿಯೊ ಸೀಡಿಗಳಲ್ಲಿ ವಚನಕಾರರ, ಹರಿದಾಸರ, ಸಂಗೀತ ತ್ರಿಮೂರ್ತಿಗಳ, ಭಾರತೀಯ ಸಂಗೀತದ ಇತಿಹಾಸ, ಮೈಸೂರು ಮಹಾರಾಜರ ಕಾಲದ ಕೃತಿಗಳು, ವಿವಿಧ ರಾಗಗಳ ಕುರಿತಾದ ಸಂಗ್ರಹವಿದೆ. ಸಂಗೀತಪ್ರಿಯರಿಗೆ ಮತ್ತು ಸಂಗೀತ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದೇ ಇದನ್ನು ರೂಪಿಸಿದ್ದು' ಎನ್ನುತ್ತಾರೆ ಡಾ. ಮೀರಾ.

ಆಳವಾದ ಅಧ್ಯಯನ
ಡಾ. ಮೀರಾ ರಾಜಾರಾಮ್ ಪ್ರಾಣೇಶ್ ಸಂಗೀತದಲ್ಲಿ ಆಳವಾದ ಅಧ್ಯಯನ ನಡೆಸಿದವರು. ಓದಿದ್ದು ಬಿ.ಎಸ್ಸಿ. ಪದವಿ. ಬಳಿಕ ಬೆಂಗಳೂರು ವಿವಿಯಲ್ಲಿ ಎಂ.ಎ. ಸಂಗೀತ ಅಧ್ಯಯನ ಮಾಡಿ, ಅದರಲ್ಲಿ ಚಿನ್ನದ ಪದಕ ಪಡೆದರು. ಜತೆಗೆ ಸಂಗೀತದಲ್ಲಿ ಎಂ.ಫಿಲ್. ಮತ್ತು ಪಿಎಚ್.ಡಿ. ಕೂಡ ಮಾಡಿದ್ದಾರೆ. ವಿದುಷಿ ಸುಧಾ ವಿ. ಮೂರ್ತಿ ಮತ್ತು ವಿದುಷಿ ರೋಹಿಣಿ ಮಂಜುನಾಥ್ ಅವರಲ್ಲಿ ಕರ್ನಾಟಕ ಸಂಗೀತ ಅಭ್ಯಾಸ ಮಾಡಿದವರು.

ರಾಜ್ಯದ ನಾನಾ ಭಾಗಗಳಲ್ಲಿ ಅನೇಕ ಸಂಗೀತ ಕಛೇರಿಗಳನ್ನು ನೀಡಿದ ಅನುಭವ ಇವರಿಗಿದೆ. ಆಕಾಶವಾಣಿಯಲ್ಲಿ ಮಕ್ಕಳಿಗಾಗಿಯೇ ಅನೇಕ ಸಂಗೀತ ನಾಟಕಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ದೂರದರ್ಶನದ `ಸಂಸ್ಕ್ರತ ಸೌರಭ'ದಲ್ಲಿ ಮೀರಾ ಅವರು ವಾಗ್ಗೇಯಕಾರ ಮುತ್ತಯ್ಯ ಭಾಗವತರ್ ಅವರ ಸಂಸ್ಕೃತ ರಚನೆಗಳ ಆಧಾರಿತ ವಿಶಿಷ್ಟ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಸಂಗೀತಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. `ಸ್ವರ ಮಾಧುರಿ' ಕಾರ್ಯಕ್ರಮದಲ್ಲಿ ಅಪರೂಪದ ಜತಿ ಸ್ವರ ಮತ್ತು `ಸ್ವರ ಜತಿ'ಗಳ ಕುರಿತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಅಲ್ಲದೆ ಮೀರಾ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹೊರತಂದಿರುವ ನುಡಿಚಿತ್ರ ಪುಸ್ತಕಕ್ಕೆ ಅನೇಕ ಲೇಖನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದೇ ಅಕಾಡೆಮಿ ತರುವ `ನಾದ ನೃತ್ಯ' ಎಂಬ ನಿಯತಕಾಲಿಕಕ್ಕೆ ಸಂಪಾದಕರಾಗಿದ್ದಾರೆ. ಕರ್ನಾಟಕ ಗಾನ ಕಲಾ ಪರಿಷತ್ ಹೊರತರುವ ಗಾನಕಲಾಶ್ರೀ ನಿಯತಕಾಲಿಕಕ್ಕೂ ಇವರೇ ಸಂಪಾದಕಿ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತಂದಿರುವ `ಕರ್ನಾಟಕ ಕಲಾವಿದರು' ಪುಸ್ತಕವನ್ನು ಸಂಪಾದಿಸಿರುವ ಇವರು ಹಂಪಿ ವಿವಿ ತಂದಿರುವ ಸಂಗೀತ ಎನ್ಸೈಕ್ಲೊಪಿಡಿಯಾಕ್ಕೆ ಸಹಾಯ ಮಾಡಿದ್ದಾರೆ. ಸದ್ಯ ಎಂ.ಫಿಲ್. ಮತ್ತು ಪಿಎಚ್.ಡಿ. ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

`ಶಾಸ್ತ್ರೀಯ ಸಂಗೀತವನ್ನು ಪ್ರಚಾರ ಮಾಡುವುದು, ಪ್ರೋತ್ಸಾಹ ನೀಡುವುದು, ಸಂಶೋಧನೆ ಮತ್ತು ಸಂಗೀತದ ಬೆಳವಣಿಗೆಯ ನಿಟ್ಟಿನಲ್ಲಿ ಕೆಲಸ ಮಾಡುವುದು, ಗಾಯನ ಮತ್ತು ವಾದನಕ್ಕೆ ಸಂಬಂಧಿಸಿದ ಎಲ್ಲ ಸಂಪನ್ಮೂಲಗಳನ್ನು ಅಗತ್ಯವಿರುವವರಿಗೆ ಒದಗಿಸಿಕೊಡುವುದು ಈ ಸಂಸ್ಥೆಯ ಗುರಿ' ಎನ್ನುವ ಅವರು ಆಸಕ್ತರನ್ನು ಸದಾ ಸ್ವಾಗತಿಸುತ್ತಾರೆ.
ವಿಳಾಸ: ವನಮಾಲ ಆರ್ಟ್ ಫೌಂಡೇಶನ್, 13 ಎ-15, ಮಧುವನ, ಎಸ್ಜಿಎಸ್ ಬಡಾವಣೆ, ಕೋತನೂರು ದಿನ್ನೆ ಮುಖ್ಯರಸ್ತೆ, 8ನೇ ಹಂತ, ಜೆ.ಪಿ. ನಗರ, ಬೆಂಗಳೂರು-78. ಫೋನ್: 080- 57614418/ 98455 14661.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.