ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಆರೈಕೆ ಹೀಗೆ

Last Updated 15 ಸೆಪ್ಟೆಂಬರ್ 2015, 19:54 IST
ಅಕ್ಷರ ಗಾತ್ರ

ವಯಸ್ಸಾಗುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಅದರಲ್ಲೂ 60 ವರ್ಷ ದಾಟಿದವರು ಆರೋಗ್ಯವಂತರಾಗಿರಬೇಕಾದರೆ ಎಂಥ ಆಹಾರ ಸೇವಿಸಬೇಕು, ದೇಹವನ್ನು ಹೇಗೆ ದಂಡಿಸಬೇಕು ಎಂಬುದರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.

‘ಅರವತ್ತು ದಾಟಿದ ಮೇಲೆ ಮನೆಯಲ್ಲಿಯೇ ಕಾಲ ಕಳೆಯುವವರು ಬಹಳಷ್ಟು ಮಂದಿ ಇದ್ದಾರೆ. ಮಕ್ಕಳು, ಮೊಮ್ಮಕ್ಕಳು ಕೆಲಸಕ್ಕೆ ಹೋದರೆ ಇವರನ್ನು ನೋಡಿಕೊಳ್ಳುವವರು ಇರುವುದಿಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿ ಅಡುಗೆ ಮಾಡಿರುತ್ತಾರೆ. ಆದರೆ ಇಳಿವಯಸ್ಸಿನವರಿಗೆ ಜೀರ್ಣಕ್ರಿಯೆ ನಿಧಾನವಾಗಿರುವುದರಿಂದ ಹೆಚ್ಚು ಬೇಯಿಸಿದ ಆಹಾರ ನೀಡಬೇಕಾಗುತ್ತದೆ.

ದಿನಕ್ಕೆ ಕನಿಷ್ಠ ಮೂರು ವಿಧವಾದ ತರಕಾರಿ, ಹಾಲು, ಎರಡು ಹಣ್ಣು ತಿನ್ನಬೇಕು. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳಿಗ್ಗೆ ಹಾಗೂ ಸಂಜೆ ತಲಾ ಅರ್ಧ ಗಂಟೆಯವರೆಗೂ ವಾಕ್‌ ಮಾಡಬಹುದು.  ಮುಖ್ಯವಾಗಿ ಆಹಾರ ಕ್ರಮದಲ್ಲೂ ಬದಲಾವಣೆ ಬೇಕಾಗುತ್ತದೆ.

ಸಿರಿಧಾನ್ಯದ ಅಡುಗೆಯೂ ಇರಲಿ. ಹಾಲು, ಮೊಸರು ಕೂಡ ಸೇವಿಸಬೇಕು. ವಯಸ್ಸಾದಂತೆ ದೇಹ ದುರ್ಬಲ ವಾಗುವುದರಿಂದ ಪ್ರೊಟೀನ್‌ಯುಕ್ತ ಆಹಾರದ ಅಗತ್ಯವಿದೆ. ಸತ್ಸಂಗ, ಯೋಗ ಮಾಡುವುದರಿಂದಲೂ ಲವಲವಿಕೆ, ಆರೋಗ್ಯವಂತರಾಗಿ ಬದುಕು ನಡೆಸಬಹುದು. ಅಲ್ಲದೇ ಮಾನಸಿಕವಾಗಿಯೂ ಬಲಿಷ್ಠರಾಗಬಹುದು’ ಎನ್ನುತ್ತಾರೆ ಕೋರಮಂಗಲದ ಡಯಬೆಟಾ ಕೇರ್‌ ಇಂಡಿಯಾದ ಮುಖ್ಯ ನ್ಯೂಟ್ರಿಷನಿಸ್ಟ್‌ ಡಾ. ತಾರಾ ಮುರಳಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT