ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುರುಳಿಲ್ಲದ ತರ್ಕ

Last Updated 21 ಮೇ 2015, 19:30 IST
ಅಕ್ಷರ ಗಾತ್ರ

‘ಕಮ್ಯುನಿಸಂ ಗೊಂದಲ?’ ಎಂಬ ಬರಹದಲ್ಲಿ ಕೆ.ಎಲ್‌.ಚಂದ್ರಶೇಖರ್‌ ಐಜೂರ್‌ ಅವರು (ಸಂಗತ, ಮೇ 20), ಭಾರತದ ಕಮ್ಯುನಿಸ್ಟ್ ಪಕ್ಷಗಳ ಮೇಲೆ ‘ಹಿಂದುತ್ವದ ಬಾಂಧವ್ಯ’ದ ಆರೋಪ ಹೊರಿಸಿರುವುದು ಹುರುಳಿಲ್ಲದ ತರ್ಕ. ಕಮ್ಯುನಿಸ್ಟ್ ಪಕ್ಷಗಳ ಪ್ರಧಾನ ಕಾರ್ಯದರ್ಶಿ ಹುದ್ದೆ ಅಥವಾ ಪಾಲಿಟ್ ಬ್ಯೂರೊ ಸದಸ್ಯ ಸ್ಥಾನಗಳಿಗೆ ದಲಿತರು ಬಂದು ಕೂರುವುದರಿಂದ, ಭಾರತದ ಸಮಾಜದಲ್ಲಿ ಅವಿ ತುಕೊಂಡಿರುವ ಅಸ್ಪೃಶ್ಯತೆ ಸಮಸ್ಯೆಗೆ ಯಾವ ಪರಿಹಾರವೂ ಸಿಗದು. ಅಷ್ಟೇ ಅಲ್ಲ, ಪ್ರಧಾನ ಮಂತ್ರಿ, ರಾಷ್ಟ್ರಪತಿಯಂತಹ ಸಾಂವಿಧಾನಿಕ ಅಧಿಕಾರ ಇರುವ ಹುದ್ದೆಗಳಿಗೆ ಏರುವುದರ ಮೂಲಕವೂ ಸುಲಭದಲ್ಲಿ ಪರಿಹಾರ ಸಿಗದು. ಜಾತಿ ಪ್ರಜ್ಞೆಯ ವಿನಾಶದ ರಹಸ್ಯವು  ವರ್ಗಪ್ರಜ್ಞೆಯ ವ್ಯಾಪಕ ಬೆಳವಣಿಗೆಯಲ್ಲಿ ಅಂತರ್ಗತವಾಗಿದೆ. ಇದರ ಹೊರತಾದ ಎಲ್ಲವೂ ಗೊಂದಲಮಯ ವಿಚಾರಗಳೇ ಆಗಿರುತ್ತವೆ.
- ಅಯ್ಯಪ್ಪ ಹೂಗಾರ್,
ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT