ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರಿಗೆ ಲಾಭದ ವರ್ಷ

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಷೇರುಪೇಟೆಗಳು ಹಿಂದೂ ಕ್ಯಾಲೆಂಡರ್‌ನ ಈ ವರ್ಷದಲ್ಲಿ (2071ನೇ ಸಂವತ್ಸರ­ದಲ್ಲಿ) ಏರುಮುಖವಾಗಿಯೇ ಚಲಿಸ­ಲಿವೆ, ಗೂಳಿಯ ಓಟ ಜೋರಾಗಿರಲಿದೆ, ಇದು ಹೂಡಿಕೆದಾರರ ಪಾಲಿಗೆ ಬಹಳ ಲಾಭ ತರಲಿದೆ, ಹಣ ತೊಡಗಿಸಿದವ­ರನ್ನು ಇನ್ನಷ್ಟು ಶ್ರೀಮಂತಗೊಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಷೇರು ಮಾರುಕಟ್ಟೆ ಪಂಡಿತರು.

ಕಳೆದೊಂದು ತಿಂಗಳಿಂದ ಸಾಗ­ರೋತ್ತರ ಹೂಡಿಕೆದಾರರು ಬೃಹತ್‌ ಪ್ರಮಾಣದಲ್ಲಿ ಷೇರುಗಳನ್ನು ಖರೀದಿ­ಸುತ್ತಿ­ರುವುದು ಷೇರುಪೇಟೆಯ ಮೇಲ್ಮಖ ಚಲನೆಗೆ ವೇಗ ಒದಗಿಸುತ್ತಿದೆ. ಒಟ್ಟಿನಲ್ಲಿ ಈ ವರ್ಷವು ದೇಶದ ಷೇರುಪೇಟೆಯನ್ನು ಭ್ರಮಾತ್ಮಕ ಸುಖದಲ್ಲಿ ತೇಲಿಸಲಿದೆ ಎಂದು ಮಾರುಕಟ್ಟೆ ಪಂಡಿತರ ವಿಶ್ಲೇಷಿಸಿದ್ದಾರೆ.

ಸೂಚ್ಯಂಕಗಳು ಮೇಲೆ ಮೇಲೆ ಏರುತ್ತಾ ಮತ್ತೆ ಮತ್ತೆ ಹೊಸ ದಾಖಲೆ­ಸೃಷ್ಟಿಸುತ್ತಿವೆ. ಇದರಿಂದಾಗಿರುವ ಒಳ್ಳೆಯ ಪರಿಣಾಮವೆಂದರೆ ಚಿಲ್ಲರೆ ಹೂಡಿಕೆ­ದಾರರು ಷೇರುಪೇಟೆಯತ್ತ ಮರಳಿ ಬರು­ತ್ತಿ­ದ್ದಾರೆ. ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ. ಚಿಲ್ಲರೆ ಹೂಡಿಕೆದಾ­ರರ ಭಾಗವಹಿಸುವಿಕೆ ಹೆಚ್ಚಿದಷ್ಟೂ ಷೇರು­ಪೇಟೆ ಆರೋಗ್ಯವೂ ಅಷ್ಟೇ ಉತ್ತಮ­ವಾಗಿ­ರಲಿದೆ. ಈವರೆಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮೇಲೆಯೇ ಅವಲಂಬಿ­ತ­ವಾಗಿದ್ದ ಭಾರತದ ಷೇರು ಮಾರುಕಟ್ಟೆ­ಗಳಿಗೆ ಇದು ಶುಭಸೂಚಕ ಎಂದು ಬೊನಾಂಜಾ ಪೋರ್ಟ್‌­ಫೋಲಿಯೋ ಲಿ.ನ ನಿರ್ದೇಶಕ ಎಸ್‌.ಕೆ.ಗೋಯಲ್‌ ಅಭಿಪ್ರಾಯಪಟ್ಟಿದ್ದಾರೆ.

ಈಗಿನ ಸಂವತ್ಸರದಲ್ಲಿ ಗೂಳಿಯ ಓಟ ವೇಗವಾಗಿರಲಿದೆ. ಕೆಲವೊಮ್ಮೆ ಷೇರು­ಪೇಟೆಯು ಭಾರಿ ಏರಿಕೆ, ಇಳಿಕೆಯನ್ನೂ ಕಾಣಲಿದೆ. ಇದೇ ವೇಳೆ, ಮಾಹಿತಿ ತಂತ್ರಜ್ಞಾನ, ಔಷಧ ತಯಾರಿಕೆ, ವಾಹನ ತಯಾರಿಕೆ ಉದ್ಯಮ, ಗ್ರಾಹಕ ಬಳಕೆ ಸಾಮಗ್ರಿಗಳ ಕಂಪೆನಿಗಳು ಹಾಗೂ ಬ್ಯಾಂಕಿಂಗ್‌ ವಿಭಾಗದ ಷೇರುಗಳೇ ಮುಂಚೂಣಿ­ಯಲ್ಲಿದ್ದ ಮಾರುಕಟ್ಟೆ­ಯನ್ನು ಮೇಲಕ್ಕೆ ಕರೆದೊಯ್ಯಲಿವೆ ಎಂದು ಗೋಯಲ್‌ ಹೇಳಿದ್ದಾರೆ.

2070ನೇ ಸಂವತ್ಸರದಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ ಒಟ್ಟಾರೆಯಾಗಿ 5,590.42 ಅಂಶಗಳ (ಶೇ 26.37) ಏರಿಕೆ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT