ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹೆಸರು ಬಹಿರಂಗ ಪಡಿಸಿದರೆ ತೊಡಕು'

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಬ್ಯಾಂಕುಗಳ ಕಪ್ಪುಹಣ ಖಾತೆದಾರರ ಹೆಸರು ಬಹಿರಂಗ-­ಗೊಳಿಸಲು ಒತ್ತಾಯಿಸುತ್ತಿ­ರುವವರ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಹರಿಹಾ­ಯ್ದಿದ್ದು, ಹೀಗೆ  ಮಾಡಿದರೆ ತನಿಖಾ ಪ್ರಕ್ರಿಯೆಗೇ ಭಂಗವುಂಟಾಗುತ್ತದೆ ಎಂದಿದ್ದಾರೆ.

ಹೆಸರುಗಳನ್ನು ಅನಧಿಕೃತವಾಗಿ ಬಿಡುಗಡೆ ಮಾಡಿದರೆ ತನಿಖೆಗೆ ಭಂಗವಾಗುವ ಜತೆಗೆ ಆರ್ಥಿಕ­ವಾಗಿಯೂ ಕೆಟ್ಟ ಪರಿಣಾಮವುಂಟಾ­ಗುತ್ತದೆ. ಇದರಿಂದ ತಪ್ಪಿತಸ್ಥರಿಗೇ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ತೆರಿಗೆಗಳನ್ನು ತಡೆಹಿಡಿಯುವ ಮೂಲಕ ನಮ್ಮ ದೇಶದ ಮೇಲೆ ದಿಗ್ಬಂಧನವನ್ನೂ ವಿಧಿಸಬಹುದಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪುಹಣವನ್ನು ನಯಾಪೈಸೆ ಬಿಡದೆ ವಾಪಸ್‌ ತರಲಾಗುವುದು ಎಂದು ಹೇಳಿರುವ ದಿನವೇ ಜೇಟ್ಲಿ ಹೀಗೆ ಹೇಳಿದ್ದಾರೆ.

ತನಿಖೆಗೆ ಏನಾದರೂ ಭಂಗವಾ­ಗಲೆಂದೇ ಕಾಂಗ್ರೆಸ್‌ ಕಾಯುತ್ತಿದೆ. ಅದಕ್ಕಾಗಿಯೇ ಹೆಸರು ಬಹಿರಂಗಗೊ­ಳಿಸುವಂತೆ ಒತ್ತಡ ಹೇರುತ್ತಿದೆ ಎಂದೂ ತಿರುಗೇಟು ನೀಡಿದ್ದಾರೆ.

*ತನಿಖೆ: ಹಿತಾಸಕ್ತಿ ರಕ್ಷಣೆಗೆ ಸ್ವಿಸ್‌ ಬ್ಯಾಂಕ್‌ಗಳ ಶತಪ್ರಯತ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT