ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು, ಮಾರ್ಗ ಬದಲಿಗೆ ಚಿಂತನೆ

ಮಲೇಷ್ಯಾ: ಅವಳಿ ವೈಮಾನಿಕ ದುರಂತ ಮರೆಯುವ ಯತ್ನ
Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ/ಲಂಡನ್‌(ಪಿಟಿಐ): ಎರಡು ವಿಮಾನಗಳ ದುರಂತದಿಂದಾಗಿ ಮಲೇಷ್ಯಾ ಏರ್‌ಲೈನ್ಸ್‌ ವಿಮಾನ  ಯಾನ ಸಂಸ್ಥೆ ಇದೀಗ ವಿಮಾನದ ಹೆಸರು ಮತ್ತು ಮಾರ್ಗ ಗಳನ್ನು ಬದಲಿಸಲು ಚಿಂತನೆ ನಡೆಸಿದೆ. ಈ ಮೂಲಕ ದುರಂತದ ಕಹಿನೆನಪು ಮರೆಯುವ ಯತ್ನಕ್ಕೆ ಮುಂದಾಗಿದೆ. 

ಆರು ತಿಂಗಳಲ್ಲಿ ಮಲೇಷ್ಯಾ ವಿಮಾನಯಾನ ಸಂಸ್ಥೆಯ ಎರಡು ವಿಮಾನಗಳು ದುರಂತಕ್ಕೀಡಾಗಿವೆ. ಈ ಎರಡರಲ್ಲಿ ಒಟ್ಟು 537 ಜನರು ಮೃತಪಟ್ಟಿದ್ದಾರೆ.  ಆದ್ದರಿಂದ ವಿಮಾನಯಾನ ಸಂಸ್ಥೆಯ ಹೆಸರು ಬದಲಿಸುವ ಸಾಧ್ಯತೆ ಇದೆ. ಸಂಸ್ಥೆ ಹೊಸ ಹೂಡಿಕೆ­ದಾರರಿಗಾಗಿಯೂ ಶೋಧ ನಡೆಸಿದೆ ಎಂದು ‘ಟೆಲಿಗ್ರಾಫ್‌’ ವರದಿ ಮಾಡಿದೆ.

ಮಾರ್ಚ್‌ನಲ್ಲಿ ಕ್ವಾಲಾಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ 239 ಪ್ರಯಾಣಿಕರಿದ್ದ ಎಂ.ಎಚ್‌.370 ವಿಮಾನ ಕಣ್ಮರೆಯಾಗಿತ್ತು. ಜುಲೈನಲ್ಲಿ ಆಮ್‌ಸ್ಟರ್‌ ಡ್ಯಾಂನಿಂದ ಕ್ವಾಲಾಲಂಪುರಕ್ಕೆ ಹೊರಟಿದ್ದ 298 ಪ್ರಯಾ ಣಿಕರಿದ್ದ ಎಂ.ಎಚ್‌.777 ವಿಮಾನವನ್ನು ಉಕ್ರೇನ್‌ನಲ್ಲಿ ಕ್ಷಿಪಣಿ ದಾಳಿ ನಡೆಸಿ ಹೊಡೆದುರುಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT