ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ಅಧಿಸೂಚನೆ ವಾಪಸ್‌ಗೆ ಆಗ್ರಹ

Last Updated 2 ಸೆಪ್ಟೆಂಬರ್ 2014, 6:18 IST
ಅಕ್ಷರ ಗಾತ್ರ

ರಾಯಚೂರು: ತುಂಗಭದ್ರಾ ನೀರಾವರಿ ಕಾರ್ಮಿಕರ ಹೊರ ಗುತ್ತಿಗೆ ಅಧಿ­ಸೂಚನೆ­ಯನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ತುಂಗಭದ್ರಾ ನೀರಾವರಿ ವಲಯ ಕಾರ್ಮಿಕರ ಸಂಘ ಹಾಗೂ ಟಾಸ್ಕ್‌ ವರ್ಕ್‌ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಅನಿರ್ದಿಷ್ಟ ಧರಣಿ ಆರಂಭಿಸಿದರು.

ಕನಿಷ್ಠ ವೇತನ ಕಾಯ್ದೆ ಹಾಗೂ ವೇತನ ಪಾವತಿ ಕಾಯ್ದೆ ಅನುಸಾರ ಹಾಗೂ ಪ್ರಸ್ತುತ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ, ಕಿರಿಯ ಎಂಜಿನಿಯರ್‌ ಕಾರ್ಯ ವಿಧಾನದಂತೆ ಹಾಲಿ ಕಾರ್ಮಿಕರ ಸೇವೆಯನ್ನು ಮುಂದುವರಿಸಬೇಕು. ತುಂಗಭದ್ರಾ ನೀರಾವರಿ ವಲಯದಲ್ಲಿ ಹೊರಗುತ್ತಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಭದ್ರ ಹಾಗೂ ಇತರ ವಲಯದಲ್ಲಿ­ರುವಂತೆ ವರ್ಷ ಪೂರ್ತಿ ಕೆಲಸ ನೀಡಿ ಸೇವಾ ಭದ್ರತೆ ಒದಗಿಸಬೇಕು. ಹಾಲಿ ಕಾರ್ಮಿಕರ ವೇತನ ವ್ಯತ್ಯಾಸ ಹಾಗೂ ಬಾಕಿ ವೇತನ ಕೂಡಲೇ ಪಾವತಿಸ­ಬೇಕು. ಕಾರ್ಮಿಕರ ಇದುವರೆಗಿನ ಸೇವೆಗೆ ಸಂಬಂಧಿಸಿದ ಸೇವಾ ಪ್ರಮಾಣ ಪತ್ರ ನೀಡಬೇಕು ಎಂದು ಸಂಘದ ಅಧ್ಯಕ್ಷ ಆರ್. ಮಾನಸಯ್ಯ ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಅಡವಿರಾವ್, ಪದಾಧಿಕಾರಿಗಳಾದ ಎಸ್‌.ರಾಜಶೇಖರ, ಆರ್‌.ಹುಚ್ಚರೆಡ್ಡಿ, ಚಿನ್ನಪ್ಪ ಕೊಟ್ರಿಕ್ಕಿ, ಪುರುಷೋತ್ತಮ, ಸಿದ್ದಪ್ಪ ವಾದಿರಾಜ, ಬಸನಗೌಡ ಕಲ್ಲೂರು, ಶಾಮ, ಶರಣಪ್ಪ, ಎಂ.ಬಸವರಾಜ, ಜಿ.ಅಮರೇಶ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT