ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಚಿಂತನೆ ಉತ್ತೇಜನಕ್ಕೆ ಇನ್ಫೊಸಿಸ್‌ ನಗದು ಪುರಸ್ಕಾರ

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದಿನನಿತ್ಯದ ಬದುಕಿನ ಸಮಸ್ಯೆಗಳನ್ನು ಬಗೆಹರಿಸುವ ಹೊಸ ಚಿಂತನೆಗಳನ್ನು ಉತ್ತೇಜಿಸಲು ಪ್ರತಿ ವರ್ಷ 20 ಉದ್ಯಮಿಗಳಿಗೆ ನಗದು ಬಹುಮಾನ ನೀಡಲು ದೇಶದ 2ನೆ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆ ಇನ್ಫೊಸಿಸ್‌ ನಿರ್ಧರಿಸಿದೆ.

ಹೊಸ ಚಿಂತನೆಗಳ ಅರ್ಹತೆಯನ್ನು ತೀರ್ಪುಗಾರರ ಮಂಡಳಿಯು ಪರಾಮರ್ಶಿಸಲಿದ್ದು, ಆಸಕ್ತಿದಾಯಕವಾದ  ಮತ್ತು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಪ್ರಸ್ತುತ ಎನಿಸಿದರೆ ಅಂತಹ ಉದ್ಯಮಿಗಳ ಸಾಧನೆ ಗುರುತಿಸಿ, ಉತ್ತೇಜನ ನೀಡಲು ಪುರಸ್ಕಾರ ನೀಡಲಾಗುವುದು. ಪ್ರತಿ ವರ್ಷ ಇಂತಹ 20 ಉದ್ಯಮಿಗಳಿಗೆ ತಲಾ ₹ 5 ಲಕ್ಷದ ನಗದು ಬಹುಮಾನ ನೀಡಲಾಗುವುದು’ ಎಂದು ಸಂಸ್ಥೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ)  ಪ್ರವೀಣ್‌ ರಾವ್‌ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚಿಂತನೆಗಳು ರೂಪುಗೊಳ್ಳುವ ಹಂತದಲ್ಲಿ ಇರುವಾಗಲೇ ಉದ್ಯಮಿಗಳು  ‘ಇನ್ಫೊಸಿಸ್‌ ಮೇಕರ್‌ ಅವಾರ್ಡ್‌’ಗೆ  ಅರ್ಜಿಗಳನ್ನು ಸಲ್ಲಿಸಬಹುದು. ಭರವಸೆ ಮೂಡಿಸುವ ಪ್ರತಿಯೊಂದು  ಚಿಂತನೆಯು ಬಂಡವಾಳ ಹೂಡಿಕೆ ದಾರರ ಗಮನ ಸೆಳೆಯುವುದಿಲ್ಲ.  ಹೀಗಾಗಿ ಇನ್ಫೊಸಿಸ್‌ ಪ್ರಶಸ್ತಿ ಮೂಲಕ ಉದಯೋನ್ಮುಖ ಉದ್ಯಮಿಗಳಿಗೆ ವೇದಿಕೆ ಕಲ್ಪಿಸಲಾಗುವುದು’  ಎಂದು ರಾವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT