ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

​ ಬೋಡೊ ಉಗ್ರರ ದಾಳಿ: 3 ಸಾವು

Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೋಕ್ರಝಾರ್‌ (ಅಸ್ಸಾಂ)(ಪಿಟಿಐ): ಬೋಡೊ ಪ್ರತ್ಯೇಕತಾವಾದಿ ಉಗ್ರರು ನಡೆಸಿದ ದಾಳಿ­ಯಲ್ಲಿ ಮೂರು ಜನ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯ­ಗೊಂಡಿ­ರುವ  ಘಟನೆ ಬುಧವಾರ ಇಲ್ಲಿ ನಡೆದಿದೆ. 

ಅಸ್ಸಾಂ – ಬಂಗಾಳ ಗಡಿ­ಪ್ರದೇಶ­ದ­ಲ್ಲಿನ ಮಾರ್ನೋಯಿ ಟೀ ಎಸ್ಟೇಟ್‌­ನಲ್ಲಿ ಸೇತುವೆ ನಿರ್ಮಾಣಕ್ಕಾಗಿ ಟ್ರಕ್‌­ನಲ್ಲಿ ನಿರ್ಮಾಣ
ಸಾಮಾಗ್ರಿ­ಗಳನ್ನು ಕೊಂಡೊ­ಯ್ಯು­ತ್ತಿದ್ದಾಗ ಸುಮಾರು ಮಧ್ಯಾಹ್ನ 12.45ರ ವೇಳೆಗೆ ಬೋಡೊ ಉಗ್ರರು ದಾಳಿ ನಡೆಸಿದ್ದಾರೆ.

ಈ ವೇಳೆ ಟ್ರಕ್‌ ಚಾಲಕ ಹಾಗೂ ಇನ್ನಿಬ್ಬರು ಕೆಲಸ­ಗಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಕೆಲಸಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀ­ಸರು ತಿಳಿಸಿದ್ದಾರೆ. ಮೃತರನ್ನು ರಜಿಬ್‌ ಮುಶಹರಿ, ಅಸತುನ್‌ ಬೀಬಿ ಹಾಗೂ ಅಶಬುಲ್‌ ಶೇಖ್‌ ಎಂದು ಗುರುತಿಸಲಾಗಿದೆ.

ಗಾಯಾಳು ಆಯುಫ್‌ ರೆಹಮಾನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಕ್ರಝಾರ್‌ ಕ್ಷೇತ್ರದಲ್ಲಿ ಏಪ್ರಿಲ್‌ 24ರಂದು ಚುನಾವಣೆ  ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT