ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಿ’

ಸುಪ್ರೀಂ ಕೋರ್ಟ್‌ ಮೊರೆ ಹೋದ ಶ್ರೀನಿವಾಸನ್‌
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳಲು ಅನುಮತಿ ನೀಡಬೇಕೆಂದು ಎನ್‌. ಶ್ರೀನಿವಾಸನ್‌ ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಐಪಿಎಲ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣದ ತನಿಖೆ ನಡೆಸಿದ್ದ ಮುಕುಲ್‌ ಮುದ್ಗಲ್‌ ಸಮಿತಿ ಶ್ರೀನಿವಾಸನ್‌ ಅವರನ್ನು ‘ನಿರ್ದೋಷಿ’ ಎಂದಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾ ಸನ್‌ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದು, ‘ನನ್ನ ವಿರುದ್ಧದ ಎಲ್ಲ ಆರೋಪಗಳೂ ನಿರಾಧಾರ ಎಂಬುದು ತನಿಖಾ ವರದಿಯಿಂದ ಸಾಬೀತಾಗಿದೆ’ ಎಂದು ಹೇಳಿದ್ದಾರೆ.

‘ಐಪಿಎಲ್‌ ಬೆಟ್ಟಿಂಗ್ ಮತ್ತು ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದೇನೆ ಎಂಬ ಆರೋಪ ಹಾಗೂ ಈ ಹಗರಣದ ವಿಚಾರಣೆಗೆ ಅಡ್ಡಿಪಡಿಸಿದ ಆರೋಪಗ ಳಿಂದ ನಾನು ಮುಕ್ತನಾಗಿದ್ದೇನೆ. ದುರ್ನಡತೆ ತೋರಿದ ಒಬ್ಬ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂಬ ಸಣ್ಣ ಆರೋಪ ಮಾತ್ರ ವರದಿಯಲ್ಲಿದೆ’ ಎಂದು ಶ್ರೀನಿವಾಸನ್‌ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

‘ಯಾರೋ ಮಾಡಿರುವ ಸುಳ್ಳು ಆರೋಪಗಳಿಂದಾಗಿ ನಾನು ಅಧಿಕಾರದ ಅವಧಿಯ ಒಂದು ವರ್ಷವನ್ನು ಕಳೆದು ಕೊಂಡಿದ್ದೇನೆ. ಮತ್ತೆ ಮಂಡಳಿಯ ಅಧಿಕಾರ ವಹಿಸಿಕೊಳ್ಳಲು ಅನುಮತಿ ನೀಡಬೇಕೆಂದು ಕೋರುತ್ತೇನೆ’ ಎಂದಿ ದ್ದಾರೆ.

ಅಫಿಡವಿಟ್‌ ಸಲ್ಲಿಸಿದ ಇಂಡಿಯಾ ಸಿಮೆಂಟ್ಸ್‌: ಐಪಿಎಲ್‌ ಫ್ರಾಂಚೈಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಒಡೆತನ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ ಕಂಪೆನಿ ಕೂಡಾ ಸುಪ್ರೀಂ ಕೋರ್ಟ್‌ಗೆ ಪ್ರತ್ಯೇಕ ಅಫಿಡವಿಟ್‌ ಸಲ್ಲಿಸಿದೆ.

ಮುಕುಲ್‌ ಮುದ್ಗಲ್‌ ಸಮಿತಿ ತನ್ನ ವರದಿಯಲ್ಲಿ ಶ್ರೀನಿವಾಸನ್‌ ಅವರ ಅಳಿಯ  ಹಾಗೂ ಸಿಎಸ್‌ಕೆ ತಂಡದ ಮಾಜಿ ಅಧಿಕಾರಿ ಗುರುನಾಥ್‌ ಮೇಯ ಪ್ಪನ್‌ ‘ಬೆಟ್ಟಿಂಗ್‌ನಲ್ಲಿ ಭಾಗಿಯಾಗಿ ದ್ದಾರೆ’ ಎಂದು ಹೇಳಿತ್ತು.

‘ಐಪಿಎಲ್‌ ಮತ್ತು ಸಿಎಸ್‌ಕೆ ತಂಡದ ಒಪ್ಪಂದ ರದ್ದಾಗುವ ರೀತಿಯ ಯಾವುದೇ ತೀರ್ಪು ನೀಡಬೇಡಿ’ ಎಂದು ಇಂಡಿಯಾ ಸಿಮೆಂಟ್ಸ್‌ ಅಫಿಡವಿಟ್‌ನಲ್ಲಿ ಕೋರಿಕೊಂಡಿದೆ. ಅಷ್ಟು ಮಾತ್ರವಲ್ಲದೆ, ‘ಮೇಯಪ್ಪನ್‌ ಗೆ ಇಂಡಿಯಾ ಸಿಮೆಂಟ್ಸ್‌ ಕಂಪೆನಿ ಜತೆ ಯಾವುದೇ ಸಂಬಂಧವಿಲ್ಲ’ ಎಂದು ತಿಳಿಸಿದೆ.

‘ಸೂಪರ್‌ ಕಿಂಗ್ಸ್‌ ತಂಡದ ಅಸ್ತಿತ್ವಕ್ಕೆ ಧಕ್ಕೆಯಾಗುವಂತಹ ತೀರ್ಪು ನೀಡಿದರೆ ಗಂಭೀರ ಪರಿಣಾಮಗಳು ಉಂಟಾಗಬ ಹುದು. ಇದರಿಂದ ಸಿಎಸ್‌ಕೆ ತಂಡದ ಆಟಗಾರರು ಹಾಗೂ ಒಟ್ಟಾರೆ ಲೀಗ್‌ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ’ ಎಂದಿದೆ.

‘ಇಂಡಿಯಾ ಸಿಮೆಂಟ್ಸ್‌ ಕಂಪೆನಿ ಯಲ್ಲಿ ಮೇಯಪ್ಪನ್‌ ಷೇರು ಹೊಂದಿಲ್ಲ. ಕಂಪೆನಿಯ ನಿರ್ದೇಶಕರೂ ಅಲ್ಲ. ಉದ್ಯೋಗಿಯೂ ಅಲ್ಲ. ನಮ್ಮ ಕಂಪೆನಿ ಯಿಂದ ಯಾವುದೇ ವೇತನ ವನ್ನೂ ಪಡೆದಿಲ್ಲ’ ಎಂದು ಅಫಿಡವಿಟ್‌ನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT