ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರ ಹಂಚಿಕೆಗೆ ಜಾತಿಗಣತಿ ಅಗತ್ಯ’

Last Updated 28 ಫೆಬ್ರುವರಿ 2015, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಅಧಿಕಾರ ಹಂಚಿಕೆಗೆ, ಮೀಸ­ಲಾತಿ ಪಡೆಯಲು ಜಾತಿ ಜನ­ಗಣತಿ ಬೇಕು. ಹೀಗಾಗಿ, ಜಾತಿ ಜನಗಣತಿ­ಯನ್ನು ಎಲ್ಲರೂ ಬೆಂಬಲಿಸ­ಬೇಕು’ ಎಂದು ‘ಅಹಿಂದ’ ರಾಜ್ಯ ಘಟಕದ ಅಧ್ಯಕ್ಷ ಕೆ.ಮುಕುಡಪ್ಪ ಹೇಳಿದರು. ಅಂಬೇಡ್ಕರ್‌ ಯುವಸೇನೆ ಕರ್ನಾಟಕ ರಾಜ್ಯ ಸಮಿತಿಯು ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ವತಂತ್ರ ಭಾರತದಲ್ಲಿ ಮೀಸಲಾತಿ ಪರಿಕಲ್ಪನೆ: ಸ್ಥಿತಿಗತಿ ಅವಲೋಕನ’ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

‘ಜಾತಿ ಜನಗಣತಿಯಲ್ಲಿ ಎಲ್ಲರೂ ನಿಜ­ವಾದ ಜಾತಿಯ ಹೆಸರನ್ನೇ ಬರೆಸಿ. ನಿಮ್ಮ ಜಾತಿಯನ್ನು ಹೇಳಿಕೊಳ್ಳಲು ಯಾವುದೇ ಸಂಕೋಚ, ಭಯ ಬೇಡ’ ಎಂದರು. ‘ಅಂಬೇಡ್ಕರ್‌ ಜಾತಿ ಜನಗಣತಿ ಆಗ­ಲೇಬೇಕು ಎಂದು ಪ್ರತಿಪಾದಿಸಿದ್ದರು. ಆದರೆ, 1950ರಲ್ಲಿ ನೆಹರು ಅವರು ಜಾತಿ ಜನಗಣತಿ ಬೇಡ ಎಂದಿದ್ದರು. ಸರ್ದಾರ್‌ ವಲ್ಲಬ್‌ಬಾಯ್‌ ಪಟೇಲ್‌ ಅವರನ್ನು ಜಾತಿ ಹೆಸರಿನಲ್ಲಿ ಪ್ರಧಾನಿ­ಯಾಗಲು ಬಿಡಲಿಲ್ಲ’ ಎಂದರು.

‘ಭಾರತ ದೇಶ ಬಲಿಷ್ಠವಾಗಲು ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ ಹೋರಾಡಿಲ್ಲ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರೇ ದೇಶವನ್ನು ಬಲಿಷ್ಠ­ಗೊಳಿಸಲು ಹೋರಾಡಿದರು. ಎಲ್ಲರೂ ಅಂಬೇಡ್ಕರ್‌ ಅವರ ಆದರ್ಶದಲ್ಲಿ ನಡೆಯಬೇಕಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT