ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಡಳಿತದಲ್ಲಿ ಪಾರದರ್ಶಕ,ದಕ್ಷತೆ ಅಗತ್ಯ’

Last Updated 10 ಅಕ್ಟೋಬರ್ 2015, 8:38 IST
ಅಕ್ಷರ ಗಾತ್ರ

ಶಿವಮೊಗ್ಗ: ಐಟಿ ತಂತ್ರಜ್ಞಾನ ಅಳವಡಿಕೆಯಿಂದ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ, ಸಮಯ ಪಾಲನೆ ಹಾಗೂ ಆರ್ಥಿಕ ಮಿತವ್ಯಯ ಪಾಲಿಸಬಹುದು ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜೋಗನ್ ಶಂಕರ್ ಹೇಳಿದರು.

ಸಮೀಪ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ವಿಶ್ವವಿದ್ಯಾನಿಲಯ ಕೇಂದ್ರೀಯ ಗಣಕ ಕಾರ್ಯ ಸೌಲಭ್ಯ ಮತ್ತು ಐ.ಟಿ.ಸೆಲ್ ದಾಖಲಾತಿ ಕುರಿತು ಘಟಕ ಮತ್ತು ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರಿಗೆ ಏರ್ಪಡಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಐಟಿ ಇನ್ಸಿಯೇಟಿವ್ ಯೋಜನೆಯು ಉನ್ನತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಕಾರ್ಯದಲ್ಲಿ ಒಂದಾಗಿದ್ದು, ವಿಶ್ವವಿದ್ಯಾಲಯದಲ್ಲಿ ಅದನ್ನು ಅಳವಡಿಸುವರ ಮೂಲಕ ವಿವಿ ಆಡಳಿತದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯ. ಐಟಿ ಇನ್ಸಿಯೇಟಿವ್ ಯೋಜನೆ ಯಿಂದ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಐಟಿ ತಂತ್ರಜ್ಞಾನದ ಮೂಲಕ ಜಾರಿಗೆ ತರುವ ಉದ್ದೇಶವಾಗಿದೆ ಎಂದರು.

ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಹಾಗು ಜನಸಾಮಾನ್ಯರಿಗೆ ಶೀಘ್ರ ಮಾಹಿತಿ ಲಭ್ಯವಾಗುತ್ತವೆ. ಜತೆಗೆ ಅಡಳಿತದಲ್ಲಿ ಚುರುಕು ಮೂಡಿಸಬಹುದು ಎಂದರು.  ಮುಂದಿನ ದಿನಗಳಲ್ಲಿ ವಿವಿ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಪ್ರವೇಶ, ಪರೀಕ್ಷೆ ಹಾಗೂ ಸಂಯೋಜನೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲ ಮೂಲಕ ಕಾಲೇಜುಗಳಿಗೆ ರವಾನಿಸ ಲಾಗುವುದು ಎಂದರು.

ಕುಲಸಚಿವ ಪ್ರೊ.ಜೆ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಪ್ರೊ.ಎಚ್.ಎಸ್. ಬೋಜ್ಯಾನಾಯ್ಕ್, ಕಾಲೇಜು ಅಭಿವೃದ್ಧಿ ಪರಿಷತ್ ನಿರ್ದೇಶಕ ಡಾ.ಬಿ. ಗಣೇಶ್ ಇದ್ದರು. ಐಟಿ ಸೆಲ್‌ ಡಾ.ಸುರೇಶ್ ಎಂ. ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT