ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧಾರ್’ಗೆ ಬಲ ತುಂಬಿ

Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪ್ರತಿಯೊಬ್ಬರಿಗೂ ನಿರ್ದಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಗೆ ಕೇಂದ್ರದ  ಎನ್‌ಡಿಎ ಸರ್ಕಾರ ಬೆಂಬಲವನ್ನು  ವ್ಯಕ್ತಪಡಿಸಿದೆ. ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ‘ಆಧಾರ್’ ಗುರುತು ಚೀಟಿ ಯೋಜನೆ ವಿವಾದದಲ್ಲಿ ಸಿಲುಕಿಕೊಂಡಿತ್ತು. ಈ ಯೋಜನೆ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯಗಳ ಮಧ್ಯೆ ಸಂಘರ್ಷ ಉಂಟಾಗಿತ್ತು. ಈ ಯೋಜನೆ ಅಡಿ ಸಂಗ್ರಹಿಸುವ ವೈಯಕ್ತಿಕ ಮಾಹಿ­ತಿ­­­ಗಳ ಸತ್ಯಾಸತ್ಯತೆ ಬಗ್ಗೆ ಯುಪಿಎ ಅವಧಿಯಲ್ಲಿ ಗೃಹ ಸಚಿವಾಲಯ ಸಂಶಯ ವ್ಯಕ್ತಪಡಿಸಿತ್ತು.

ಗುರುತನ್ನು ಖಾತ್ರಿ ಪಡಿಸುವುದಕ್ಕೆ ಅಥವಾ ಇತರ ದಾಖಲಾ­ತಿ­ಗಳ ಅಸಲಿತನ ಸಾಬೀತುಪಡಿಸಲು ‘ವಿಶಿಷ್ಟ ಗುರುತು’ ಅತ್ಯಗತ್ಯವಲ್ಲ ಎಂಬುದು ಅದರ ನಿಲುವಾಗಿತ್ತು. ಈಗ ಕೇಂದ್ರ ಗೃಹ ಸಚಿವಾಲಯ ತನ್ನ ಹಿಂದಿನ ನಿಲುವನ್ನು ಬದಲಿಸಿದೆ. ‘ಪ್ರತಿಯೊಬ್ಬರಿಗೂ ನಿರ್ದಿಷ್ಟ ಆಧಾರ್‌ ಸಂಖ್ಯೆ ಕೊಡುವುದರಿಂದ ವ್ಯಕ್ತಿಯ ಗುರುತನ್ನು ಸಾರ್ವತ್ರಿಕ­ವಾಗಿ ದೃಢಪಡಿ­ಸಬಹುದು. ಸೌಲಭ್ಯ ವಂಚಿತರು ಹಾಗೂ ಬಡವರು ಬ್ಯಾಂಕಿಂಗ್‌ನಂಥ ಸೇವೆ ಪಡೆದು­ಕೊಳ್ಳುವುದಕ್ಕೆ ಇದು ನೆರವಾಗುತ್ತದೆ’ ಎಂದು ಎಲ್ಲ ರಾಜ್ಯ ಸರ್ಕಾರ­ಗಳಿಗೆ ಬರೆದ ಪತ್ರದಲ್ಲಿ ಗೃಹ ಸಚಿವಾಲಯ ತಿಳಿಸಿದೆ. ಇದು ವಾಸ್ತವಿಕ­ವಾದ ದೃಷ್ಟಿಕೋನ. ಈ ಯೋಜನೆಯ ಲಾಭಗಳನ್ನು ಅದು ಸರಿಯಾಗಿಯೇ ಗ್ರಹಿ­ಸಿದೆ.  ಆಧಾರ್‌ ಕಾರ್ಡ್‌, ವ್ಯಕ್ತಿಯ ಜೈವಿಕ ಮಾಹಿತಿ ಆಧರಿಸಿರುವು­ದರಿಂದ ವಂಚನೆ, ನಕಲಿ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ. ಆಧಾರ್‌ ಕಾರ್ಡ್‌ ಹೊಂದಿರುವ ವ್ಯಕ್ತಿ ದೇಶ­ದಾದ್ಯಂತ ಎಲ್ಲ ಸಂದರ್ಭದ­ಲ್ಲಿಯೂ ತನ್ನ ಗುರು­ತನ್ನು ರುಜು­ವಾತು­ಪಡಿಸ­ಬಹುದು’ ಎಂದು ಅದು ಹೇಳಿರುವುದು ಸರಿಯಾದುದು.

ಈಗಾಗಲೇ ರಾಷ್ಟ್ರದಲ್ಲಿ ಆಧಾರ್ ಯೋಜನೆ ಜಾರಿಗೊಂಡಿದೆ. ೬೭ ಕೋಟಿಗೂ ಹೆಚ್ಚು ಆಧಾರ್‌ ಸಂಖ್ಯೆ ಇರುವ ಕಾರ್ಡ್‌ಗಳನ್ನು ವಿತರಿಸಲಾ­ಗಿದೆ. ಸರ್ಕಾರಿ ಯೋಜನೆಗಳ ಹಣವನ್ನು ನೇರವಾಗಿ ಫಲಾನು­ಭವಿ­ಗಳ ಖಾತೆಗಳಿಗೆ ವಿತರಿಸಲು ಈ ಯೋಜನೆ ಸಹಕಾರಿಯಾಗುತ್ತದೆ. ಇದರಿಂದ ಮಧ್ಯವರ್ತಿಗಳನ್ನು ನಿವಾರಿಸುವುದು ಸಾಧ್ಯ. ಅಂತಿಮವಾಗಿ ಭ್ರಷ್ಟಾಚಾ­ರವನ್ನು ತಡೆಯುವಲ್ಲಿ ಇದು ಕೊಡುಗೆ ಸಲ್ಲಿಸುತ್ತದೆ ಎಂಬುದ­ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಇದ್ದ ಗೊಂದಲ­ಗಳು  ಪರಿಹಾರವಾಗಿ ಈ ಯೋಜನೆ ಜಾರಿ ವ್ಯಾಪಕವಾಗಬೇಕು. ಹೆಚ್ಚು ಹೆಚ್ಚು ಯೋಜನೆಗಳನ್ನು ‘ಆಧಾರ್’ ಮೂಲಕ ಒದಗಿಸಲು ಸರ್ಕಾರ ಮುಂದಾ­ಗಲಿದೆ ಎಂದೂ ಎನ್‌ಡಿಎ ಸರ್ಕಾರ ಪ್ರಕಟಿಸಿದೆ. ಆದರೆ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಧಾರ್ ಕಡ್ಡಾಯ ಮಾಡು­ವಂತಿಲ್ಲ ಎಂದು ಸುಪ್ರೀಂಕೋರ್ಟ್ ಅನೇಕ ಸಲ ಕೇಂದ್ರಕ್ಕೆ ಸೂಚಿಸಿದೆ.  ಹೀಗಾಗಿ ಈ ಯೋಜನೆಯಲ್ಲಿನ ನ್ಯೂನತೆಗಳನ್ನು ಪರಿಹರಿಸಲು ಯೋಜನೆಗೆ ಕಾನೂನಿನ ಬಲ ಕೊಡಲೂ ಸರ್ಕಾರ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT