ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಫ್ಘಾನಿಸ್ತಾನ ಇನ್ನೂ ಅಪಾಯಕಾರಿ ಸ್ಥಳ’

Last Updated 26 ಮೇ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ಪಿಟಿಐ): ಒಸಾಮ ಬಿನ್‌ ಲಾಡೆನ್‌ ಸೇರಿದಂತೆ ಅಲ್‌ ಖೈದಾ ಸಂಘಟನೆಯ ಪ್ರಮುಖ ನಾಯ­ಕರನ್ನು ನಾಶ-­ಗೊಳಿಸಿ ಅದರ ಸಂಪರ್ಕ ಜಾಲ­ವನ್ನು ದುರ್ಬಲ­ಗೊಳಿಸಿ­ದ್ದ­­ಕ್ಕಾಗಿ ಬರಾಕ್‌ ಒಬಾಮ ಅಮೆರಿಕ ಸೇನಾಪಡೆ­ಯನ್ನು ಪ್ರಶಂಸಿಸಿ­ದ್ದಾರೆ. ಆದರೆ ‘ಆಫ್ಘಾನಿ­ಸ್ತಾನ ಇಂದಿಗೂ ತುಂಬ ಅಪಾಯಕಾರಿ ಸ್ಥಳ­ವಾ­ಗಿಯೇ ಉಳಿದಿದೆ’ ಎಂದೂ ಅವರು ಹೇಳಿದ್ದಾರೆ.

ಭಾನುವಾರ ರಾತ್ರಿ ಆಫ್ಘಾನಿಸ್ತಾನದ ಬಗ್ರಾಂ ವಾಯುನೆಲೆಗೆ ನಾಲ್ಕು  ಗಂಟೆಗಳ ಹಠಾತ್‌ ಭೇಟಿ ನೀಡಿದ ಒಬಾಮ ಬಂಡು­ಕೋರರು ಹೇಡಿಗಳಂತೆ ಅಮಾಯಕ ನಾಗ­ರಿಕರ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ.

ಆದರೆ ಆಫ್ಘಾನಿಸ್ತಾನ ಸಮು­ದಾಯ­ದವರ ಸುಧಾರಣೆ ಸಾಧ್ಯವಾ­ಗು­ವಂತೆ ನೀವು ಶ್ರಮಿಸಿದ್ದೀರಿ. ಹೆಚ್ಚು ಬಾಲಕಿ­ಯರು ಶಾಲೆಗಳಿಗೆ ಮರಳುತ್ತಿ­ದ್ದಾರೆ. ಸಾರ್ವಜನಿಕ ಆರೋಗ್ಯ, ಜೀವನಮಟ್ಟ ಮತ್ತು ಸಾಕ್ಷರತೆಯಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದೆ’ ಎಂದು ಅಮೆರಿಕದ ಯೋಧರನ್ನು ಉದ್ದೇಶಿಸಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT