ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಥಿಕ ಅಭಿವೃದ್ಧಿಗೆ ಪೂರಕ ಬಜೆಟ್‌’

Last Updated 3 ಮಾರ್ಚ್ 2015, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್‌ ಮಂಡಿಸಿದ್ದು, ಹೂಡಿಕೆ­ದಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದು ಆದಾಯ ತೆರಿಗೆ (ತನಿಖೆ) ಪ್ರಧಾನ ನಿರ್ದೇಶಕ ಎಸ್‌.ಕೆ.ಮಿಶ್ರಾ ಅಭಿಪ್ರಾಯಪಟ್ಟರು.

ವಾಣಿಜ್ಯೋದ್ಯಮಗಳ ಮಹಾಸಂಘ (ಅಸೋಚಾಮ್‌) ನಗರದಲ್ಲಿ ಮಂಗಳ­ವಾರ ಆಯೋಜಿಸಿದ್ದ ‘ಕೇಂದ್ರ ಬಜೆಟ್‌ 2015–16’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ‘ಉದ್ಯಮ ವಲಯಕ್ಕೆ ಅತ್ಯುತ್ತಮ ವಾತಾವರಣ ಕಲ್ಪಿಸಿಕೊಡಲಾಗಿದೆ. ಜೊತೆಗೆ ಆರ್ಥಿಕ ಸ್ಥಿರತೆ ಹಾಗೂ ಪಾರ­ದರ್ಶಕತೆ ಸಾಧಿಸುವ ದಿಕ್ಕಿನಲ್ಲಿ ಮಹ­ತ್ವದ ಹೆಜ್ಜೆ ಇಡಲಾಗಿದೆ’ ಎಂದರು.

‘ಬಜೆಟ್‌ ಎನ್ನುವುದು ಕೇವಲ ಅಂಕಿ ಅಂಶಗಳ ಆಟವಲ್ಲ. ಅದೊಂದು ದೃಷ್ಟಿ­ಕೋನ ಹಾಗೂ ಧ್ಯೇಯದ ತಿರುಳನ್ನು ಹೊಂದಿರುವ ಸೂಕ್ಷ್ಮ ವಿಚಾರ. ಸಮತೋಲನದಿಂದ ಕೂಡಿರಬೇಕಾದ ಬಜೆಟ್‌ನಲ್ಲಿ ಎಲ್ಲರನ್ನೂ ಸಂತೃಪ್ತ­ಗೊಳಿಸುವುದು ಅಷ್ಟು ಸುಲಭವಲ್ಲ’ ಎಂದು ಹೇಳಿದರು.
‘ಈ ಎಲ್ಲಾ ಅಡೆತಡೆಗಳ ನಡುವೆ ಈ ಬಾರಿಯ ಬಜೆಟ್‌ ಉದ್ಯಮ ಸ್ನೇಹಿ­ಯಾಗಿದೆ. ಪ್ರಮುಖವಾಗಿ ಹೂಡಿಕೆದಾ­ರ­ರನ್ನು ಆಕರ್ಷಿಸಲು ಹಾಗೂ ಅವ­ರಲ್ಲಿ ಆತ್ಮವಿಶ್ವಾಸ ತುಂಬಲು ಕಸರತ್ತು ನಡೆಸಲಾಗಿದೆ. ಜೊತೆಗೆ ತೆರಿಗೆ­ದಾರರಲ್ಲಿ ಆತ್ಮವಿಶ್ವಾಸ ಮೂಡಿಸಿದೆ’ ಎಂದು ವಿಶ್ಲೇಷಿಸಿದರು.

ಕೇಂದ್ರೀಯ ಅಬಕಾರಿ ಆಯುಕ್ತ (ಬೆಂಗಳೂರು) ಕಮಲ್‌ ಜ್ಯೋತಿ ಮಾತ­ನಾಡಿ, ‘ಸುಧಾರಣೆಯತ್ತ ಒಲವು ಹೊಂದಿರುವ ಬಜೆಟ್‌ ಮಂಡಿ­ಸ­ಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸುಧಾರಣೆಯ ಭರವಸೆ ಇಟ್ಟುಕೊಳ್ಳಬಹುದು’ ಎಂದರು. ‘ಕೇವಲ ಅಭಿವೃದ್ಧಿ ಪಥದಲ್ಲಿ ಸಾಗಿದರೆ ಸಾಲದು. ಅಭಿವೃದ್ಧಿಯು ಹೆಚ್ಚು ಮಂದಿಗೆ ಉದ್ಯೋಗ ನೀಡು­ವಂತಿರಬೇಕು.

ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯಾಗಬೇಕು. ಆದರೆ, ಹೂಡಿಕೆಗೂ ಮಿತಿ ಇದೆ. ಹಾಗಾಗಿ ತೆರಿಗೆ ಮೂಲ  ಹೆಚ್ಚಾಗ­ಬೇಕು’ ಎಂದು ತಿಳಿಸಿದರು. ‘ಆರ್ಥಿಕ ಸ್ಥಿರತೆ ಸಾಧಿಸಬೇಕಾ­ಗಿದ್ದು, ತೆರಿಗೆ ಸಂಗ್ರಹದಲ್ಲಿ ಮತ್ತಷ್ಟು ಸುಧಾರಣೆ ಆಗಬೇಕಿದೆ. ಅದಕ್ಕೆ ಪೂರಕ ತಂತ್ರಜ್ಞಾನದ ಅಗತ್ಯವಿದೆ’ ಎಂದರು. ಅಸೋಚಾಮ್ ದಕ್ಷಿಣ ವಲಯ ಪ್ರಾದೇಶಿಕ ಮಂಡಳಿಯ ಸದಸ್ಯ ಎಸ್‌.ಬಾಬು ಹಾಗೂ ಪ್ರೈಸ್‌ವಾಟರ್‌­ಹೌಸ್‌ನ ಅಬ್ದುಲ್‌ ಮಜೀದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT