ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈದ್‌ ಸಿಹಿ’ ಬೇಡವೆಂದ ಪಾಕ್‌

Last Updated 6 ಅಕ್ಟೋಬರ್ 2014, 10:59 IST
ಅಕ್ಷರ ಗಾತ್ರ

ಅಮೃತಸರ್‌ (ಪಿಟಿಐ): ‘ಈದುಲ್‌ ಅಝ’ (ಬಕ್ರೀದ್‌) ಸಂದರ್ಭದಲ್ಲಿ ಭಾರತ– ಪಾಕಿಸ್ತಾನದ ನಡುವಿನ ವಾಘಾ ಗಡಿಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಸಿಹಿ ವಿನಿಮಯ ಆಚರಣೆಗೆ ಪಾಕ್‌ ಈ ಬಾರಿ ನಕಾರ ವ್ಯಕ್ತಪಡಿಸಿದೆ.

ಭಾನುವಾರ ಸಂಜೆ ನಡೆದ ಉಭಯ ರಾಷ್ಟ್ರಗಳ ಸೆಕ್ಟರ್‌ ಕಮಾಂಡರ್‌ಗಳ ಸಭೆಯಲ್ಲಿ ಸಿಹಿ ವಿನಿಮಯಕ್ಕೆ ಪಾಕಿಸ್ತಾನ ಸಮ್ಮತಿ ಸೂಚಿಸಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಈದ್ ಸಂದರ್ಭದಲ್ಲಿ ವಾಘಾಗಡಿಯಲ್ಲಿ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳು ಸಿಹಿ ವಿನಿಮಯ ಮಾಡಿಕೊಳ್ಳುವುದು ಹಲವು ವರ್ಷಗಳಿಂದ ನಡೆದು ಬಂದಿದೆ. ಆದರೆ, ಈ ಬಾರಿ ಸಿಹಿ ವಿನಿಮಯಕ್ಕೆ ಪಾಕ್‌ ಸಮ್ಮತಿಸಿಲ್ಲ. ಜಮ್ಮು– ಕಾಶ್ಮೀರದಲ್ಲಿ ನಡೆಯುತ್ತಿರುವ ದಾಳಿ ಕಾರಣದಿಂದ ಪಾಕ್‌ ನಕಾರ ವ್ಯಕ್ತಪಡಿಸಿರಬಹುದು ಎಂದು ಮೂಲಗಳು ತಿಳಿಸಿವೆ.

ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ, ಈದ್‌, ದೀಪಾವಳಿ ಸಂದರ್ಭದಲ್ಲಿ ವಾಘಾ ಗಡಿಯ ಗಡಿನಿಯಂತ್ರಣ ರೇಖೆಯ ಮುಖ್ಯದ್ವಾರಗಳನ್ನು ತೆರೆದು ಎರಡೂ ರಾಷ್ಟ್ರಗಳ ಗಡಿಯ ಭದ್ರತಾ ಅಧಿಕಾರಿಗಳು ಸಿಹಿ ವಿನಿಮಯ ಮಾಡಿಕೊಳ್ಳುವುದು ಹಾಗೂ ಉಭಯ ಸೇನೆಗಳ ಗೌರವ ವಂದನೆಯು ಸಂಪ್ರದಾಯದಂತೆ ನಡೆದುಬಂದಿದೆ. ಆದರೆ, ಈ ಬಾರಿ ಸಿಹಿ ವಿನಿಮಯಕ್ಕೆ ಪಾಕ್‌ ಅಸಮ್ಮತಿ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT