ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಎಸ್‌’ ಜಗತ್ತಿನ ಶ್ರೀಮಂತ ಉಗ್ರ ಸಂಘಟನೆ

ಒತ್ತೆ ಹಣ, ತೈಲ ಕಾಳದಂಧೆಯಿಂದ ಅಪಾರ ಹಣ ಸಂಗ್ರಹ
Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಎಎಫ್‌ಪಿ): ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಜಗತ್ತಿನ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆಯಾಗಿ ರೂಪುಗೊಂಡಿದೆ. ತೈಲ ಕಾಳದಂಧೆ, ಒತ್ತೆ ಹಣ ಮತ್ತು ಸುಲಿಗೆಯ ಮೂಲಕ ಈ ಸಂಘಟನೆ ಕೋಟ್ಯಂತರ ಡಾಲರ್‌ ಹಣ ಗಳಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಈ ವರ್ಷದ ಆರಂಭದಲ್ಲಿ ಇರಾಕ್‌ ಮತ್ತು ಸಿರಿಯಾದಿಂದ ವಶಪಡಿಸಿ­ಕೊಂಡ ಪ್ರದೇಶಗ­ಳಲ್ಲಿರುವ ತೈಲ ನಿಕ್ಷೇಪಗಳಿಂದ ಕಚ್ಚಾ ತೈಲ ಮಾರಾಟ ಮಾಡುವುದರ ಮೂಲಕವೇ ಐಎಸ್‌ ಪ್ರತಿ ದಿನ ಆರು ಕೋಟಿ ರೂಪಾಯಿಗೂ ಹೆಚ್ಚಿನ ಹಣ ಪಡೆಯುತ್ತಿದೆ ಎಂದು ಅಮೆರಿಕದ ಹಣಕಾಸು ಸಚಿವಾಲಯದ ಅಧೀನ ಕಾರ್ಯದರ್ಶಿ ಡೇವಿಡ್‌ ಕೋಹೆನ್‌ ಹೇಳಿದ್ದಾರೆ.

ಇತರ ಭಯೋತ್ಪಾದನಾ ಗುಂಪುಗಳಿ­ಗಿಂತ ಭಿನ್ನವಾಗಿ ಐಎಸ್‌ ಭಾರಿ ಮೊತ್ತದ ಹಣ ಸಂಗ್ರಹ ಮಾಡಿದೆ. ಈ ಹಣದ ಹರಿವನ್ನು ತಡೆಯುವುದು ಅಮೆರಿಕ ಮತ್ತು ಮಿತ್ರಕೂಟಕ್ಕೆ ದೊಡ್ಡ ಸವಾಲಾಗಿದೆ. ‘ಐಎಸ್‌ ಖಜಾನೆಯನ್ನು ಒಮ್ಮಿಂ­ದೊ­ಮ್ಮೆಲೆ ಬರಿದುಗೊಳಿಸಲು ನಮ್ಮಲ್ಲಿ ಯಾವುದೇ ರಹಸ್ಯ ಅಸ್ತ್ರ ಇಲ್ಲ. ಇದೊಂದು ನಿರಂತರ ಸಂಘರ್ಷ­ವಾ­ಗಿದ್ದು ನಾವು ಆರಂಭಿಕ ಹಂತದ­ಲ್ಲಿ­ಇದ್ದೇವೆ’ ಎಂದು ಕೋಹೆನ್‌ ಹೇಳಿದ್ದಾರೆ.

ಐಎಸ್‌ ವಿರುದ್ಧ ಹೋರಾಟ ನಡೆ­ಸುವ, ಅದಕ್ಕಾಗಿ ಮಿತ್ರ ದೇಶಗಳನ್ನು ಒಟ್ಟು ಸೇರಿಸುವ ಅಮೆರಿಕ ಸರ್ಕಾರದ ತಂಡದಲ್ಲಿ ಕೋಹೆನ್‌ ಸದಸ್ಯರಾಗಿದ್ದಾರೆ. ‘ಐಎಸ್‌ ಈಗ ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಹಣಕಾಸಿನ ವಿಷಯದಲ್ಲಿ ಸುಸ್ಥಿತಿ­ಯಲ್ಲಿ­ರುವ ಉಗ್ರ­ಗಾಮಿ ಸಂಘಟನೆ’ ಎಂದು ಅಂತರ­ರಾಷ್ಟ್ರೀಯ ಶಾಂತಿಯ ಕಾರ್ನೆಗಿ ದತ್ತಿಯ ಉಪಾಧ್ಯಕ್ಷ ಮಾರ್ವನ್‌ ಮೌಷರ್‌ ಹೇಳಿದ್ದಾರೆ.

ಅಲ್‌ಕೈದಾದಂತಹ ಉಗ್ರಗಾಮಿ ಸಂಘಟನೆಗಳು ಹಣಕ್ಕಾಗಿ ಸಂಘಟನೆಯ ಬಗ್ಗೆ ಸಹಾನುಭೂತಿ ಇರುವ ಶ್ರೀಮಂತರು ಮತ್ತು ಕೆಲವು ರಾಷ್ಟ್ರ­ಗಳಿಂದ ಹಣ ಪಡೆಯುತ್ತವೆ. ಆದರೆ ಐಎಸ್‌ ಇದಕ್ಕಿಂತ ಭಿನ್ನವಾದ ದಾರಿ ತುಳಿದಿದೆ. ಸ್ವಾಧೀನಪಡಿಸಿಕೊಂಡಿರುವ ತೈಲ ನಿಕ್ಷೇಪ­ಗಳಿಂದ ಐಎಸ್‌ ಪ್ರತಿ ದಿನ 50 ಸಾವಿರಕ್ಕೂ ಹೆಚ್ಚು ಬ್ಯಾರಲ್‌ ತೈಲ ಉತ್ಪಾದನೆ ನಡೆಸುತ್ತಿದೆ. ಇದನ್ನು ಟರ್ಕಿ ಸೇರಿ ವಿವಿಧ ದೇಶಗಳ ಮಧ್ಯವರ್ತಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ.

ತೈಲ ಕಾಳದಂಧೆ ಈ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ಇದೆ. ಇರಾಕ್‌­ನಲ್ಲಿರುವ ಕುರ್ದ್‌ ಸಮು­ದಾಯದ ಜನರು ತೈಲ ಖರೀದಿ ಮಾಡು­ತ್ತಾರೆ. ನಂತರ ಅದನ್ನು ಟರ್ಕಿಯಲ್ಲಿ ಮಾರಾಟ ಮಾಡ­ಲಾಗು­ತ್ತದೆ. ಹೀಗೆ ಬೇರು ಬಿಟ್ಟಿರುವ ಕಾಳದಂಧೆಯನ್ನು ಐಎಸ್‌ ತನ್ನ ಉಪಯೋಗಕ್ಕೆ ಬಳಸಿ­ಕೊಳ್ಳುತ್ತಿದೆ.

ಐಎಸ್‌ ವಿರುದ್ಧ ಹೋರಾಟ ನಡೆಸು­ತ್ತಿರುವ ಬಷರ್‌ ಅಲ್‌ ಅಸದ್‌ ನೇತೃತ್ವದ ಸಿರಿಯಾ ಸರ್ಕಾರ ಕೂಡ ಈ ಉಗ್ರರಿಂದ ತೈಲ ಖರೀದಿ ಮಾಡುತ್ತಿದೆ. ಹಿಂದೆ ಸಿರಿಯಾ ನಿಯಂತ್ರಣದಲ್ಲಿದ್ದ ನಿಕ್ಷೇಪ­ಗಳು ಮತ್ತು ರಿಫೈನರಿಗಳಿಂದಲೇ ಈ ತೈಲ ಪೂರೈಕೆ ನಡೆಯುತ್ತಿದೆ.
ಈ ವರ್ಷ ಅಪಹರಣದಿಂದ ಪಡೆದ ಒತ್ತೆ ಹಣವೇ ರೂ 120 ಕೋಟಿಗೂ ಹೆಚ್ಚು. ಪತ್ರಕರ್ತರು ಮತ್ತು ಯುರೋಪ್‌ನ ಜನರನ್ನು ಅಪಹರಿಸಿ ಈ ಹಣವನ್ನು ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT