ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ–ತೆಲುಗು ಸಾಮರಸ್ಯ ಮಾದರಿ’

ಬಳ್ಳಾರಿ ರಾಘವ ಜಯಂತಿ ಸಮಾರೋಪ ಸಮಾರಂಭ
Last Updated 4 ಆಗಸ್ಟ್ 2015, 9:22 IST
ಅಕ್ಷರ ಗಾತ್ರ

ಬಳ್ಳಾರಿ: ಕನ್ನಡ ಮತ್ತು ತೆಲುಗು ಭಾಷೆ ಮತ್ತು ಜನ ಸಂಸ್ಕೃತಿಗಳ ನಡುವಿನ ಸಾಮರಸ್ಯ ಮಾದರಿಯಾಗಿದೆ ಎಂದು ಅನಂತಪುರ ಜಿಲ್ಲೆಯ ಲೇಖಕ ಏಲೂರು ಯಂಗನ್ನ ಅಭಿಪ್ರಾಯಪಟ್ಟರು.

ನಗರದ ರಾಘವ ಕಲಾಮಂದಿರದಲ್ಲಿ ಸೋಮವಾರ ರಾತ್ರಿ ರಾಘವ ಮೆಮೋ ರಿಯಲ್ ಅಸೋಸಿಯೇಷನ್‌ ಏರ್ಪಡಿ ಸಿದ್ದ ಬಳ್ಳಾರಿ ರಾಘವ ಜಯಂತಿ ಸಮಾರೋಪ ಸಮಾರಂಭದಲ್ಲಿ ಮಾತ ನಾಡಿದ ಅವರು, ಬಳ್ಳಾರಿ ರಾಘವ ಸಾಮರಸ್ಯದ ಕೊಂಡಿಯಂತೆ ಕಾರ್ಯನಿ ರ್ವಹಿಸಿದ ಅಪರೂಪದ ಕಲಾವಿದರಾ ಗಿದ್ದರು ಎಂದರು.

ಆಂಧ್ರಪ್ರದೇಶದಲ್ಲಿ ಹುಟ್ಟಿ ಬೆಳೆ ದರೂ, ಬಳ್ಳಾರಿಯಲ್ಲಿ ನೆಲೆ ನಿಂತು ಈ ಊರಿನ ಹೆಸರನ್ನೇ ತಮ್ಮ ಹೆಸರಿಗಿಂತ ಮುಂಚೆ ಸೇರಿಸಿಕೊಂಡರು. ಅದರಿಂದ ಏಕಕಾಲಕ್ಕೆ ಬಳ್ಳಾರಿ ಮತ್ತು ರಾಘವ ಇಬ್ಬರ ಘನತೆಯೂ ಹೆಚ್ಚಿತು ಎಂದರು.

ಬರ್ನಾಡ್‌ ಷಾ ಅವರಂಥ ವಿಶ್ವಪ್ರ ಸಿದ್ಧ ನಾಟಕಕಾರಿಂದ ಮೆಚ್ಚುಗೆ ಯನ್ನು ಪಡೆದಿದ್ದ ರಾಘವ ಅವರು ತಮ್ಮ ಶಿಷ್ಯಂದಿರನ್ನೂ ಮೇರು ಮಟ್ಟಕ್ಕೆ ಕೊಂಡೊಯ್ದ ವಿಶಾಲ ಮನೋಭಾವದ ಪೋಷಕ ಕಲಾವಿದರಾಗಿದ್ದರು. ಅವರ ಮಾರ್ಗದರ್ಶನವಿಲ್ಲದೇ ಹೋಗಿದ್ದರೆ ಜೋಳದರಾಶಿ ದೊಡ್ಡನಗೌಡರಂಥ ಕಲಾವಿದರು ಬಳ್ಳಾರಿಯ ನೆಲದಲ್ಲಿ ರೂಪುಗೊಳ್ಳುವುದು ಕಷ್ಟಸಾಧ್ಯವಿತ್ತು ಎಂದರು.

ಬಿ.ವಿ.ಆರ್.ಕಲಾರಂಗದ ಸಂಸ್ಥಾಪಕ ಬುದ್ದಾಲ ವೆಂಕಟರಾಮರಾವು, ಅಸೋ ಸಿಯೇಷನ್‌ ಕಾರ್ಯವನ್ನು ಶ್ಲಾಘಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾ ಯಕ ನಿರ್ದೇಶಕ ಬಿ.ನಾಗರಾಜ, ಅಗತ್ಯ ಸಹಕಾರ, ನೆರವನ್ನು ನೀಡುವುದಾಗಿ ತಿಳಿಸಿದರು.  ಬಳ್ಳಾರಿ ರಾಘವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಎಸ್‌.ಆರ್‌. ಎಸ್‌.ಪ್ರಸಾದ ನಂದ್ಯಾಲ. ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಎಂ.ಶ್ರೀನಿವಾಸುಲು, ಟಿ.ಪಿ.ವೆಂಕ ಟರಾಮಪ್ಪ, ಕೆ.ಸೋಮಿರೆಡ್ಡಿ, ಬಿ.ಹನು ಮಂತಪ್ಪ, ಜಿ.ಪ್ರಭಾಕರ್ ಅವರಿಗೆ ಗಣ್ಯರು ಪ್ರದಾನ ಮಾಡಿದರು. ಅಸೋಸಿ ಯೇಷನ್‌ ಗೌರವಾಧ್ಯಕ್ಷ ಕೆ.ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.

ಪೌರಾಣಿಕ ನಾಟಕ: ಕಾರ್ಯಕ್ರಮದ ಬಳಿಕ ಅನಂತಪುರ ಲಲಿತಕಲಾ ಪರಿಷತ್‌  ತಂಡದ ಕಲಾವಿದರು ‘ಶ್ರೀ ಕೃಷ್ಣರಾಯ ಭಾರಂ’ ಪೌರಾಣಿಕ ನಾಟಕವನ್ನು ಅಭಿನಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT