ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಮಕ್ಕಳ ನಡಿಗೆ, ಸರ್ಕಾರಿ ಶಾಲೆ ಕಡೆಗೆ’ ನಾಳೆ

Last Updated 26 ಮೇ 2016, 8:35 IST
ಅಕ್ಷರ ಗಾತ್ರ

ಕಾರವಾರ:  ಸರ್ಕಾರಿ ಕನ್ನಡ ಶಾಲೆಗಳು ಸಾಲು ಸಾಲಾಗಿ ಮುಚ್ಚುತ್ತಿರುವುದು ಆತಂಕ ತರುವ ವಿಷಯವಾಗಿದೆ. ಈ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕ ಜೊತೆಗೂಡಿ ಇದೇ 27ರಂದು ನಗರದಲ್ಲಿ ‘ಕನ್ನಡ ಮಕ್ಕಳ ನಡಿಗೆ, ಸರ್ಕಾರಿ ಶಾಲೆಗೆ ಕಡೆಗೆ’ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

‘ಇಲ್ಲಿನ ಸುಭಾಷ್್ ವೃತ್ತದಿಂದ ಬೃಹತ್‌ ಮೆರವಣಿಗೆ ಹೊರಡಲಿದ್ದು, ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಾರ್ಯಾಲಯವನ್ನು ತಲುಪಲಿದೆ. ಈ ಚಳವಳಿಯು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸಹಕಾರದಲ್ಲಿ ನಡೆಯಲಿದೆ. ಈ ಬಾರಿ ಎಸ್ಸೆಸ್ಸೆಲ್ಸಿಯ ಕನ್ನಡ ಮಾಧ್ಯಮ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್‍್ಯಾಂಕ್‌ ಪಡೆದ ಶಿರಸಿ ಹುಲೇಕಲ್ ಶ್ರೀದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಹಿಮಾ ಮಂಜುನಾಥ ಭಟ್ಟ ಕರಪತ್ರ ಹಂಚುವ ಮೂಲಕ ಚಳವಳಿಗೆ ಚಾಲನೆ ನೀಡಲಿದ್ದಾಳೆ’ ಎಂದು ಹೇಳಿದ್ದಾರೆ.

‘ಉತ್ತರ ಕನ್ನಡದಲ್ಲಿ ಆರಂಭಿಸಿದ ಈ ಚಳವಳಿ ರಾಜ್ಯದಾದ್ಯಂತ ಹಬ್ಬಬೇಕು ಎಂಬುದು ಕಸಾಪ ಜಿಲ್ಲಾ ಘಟಕದ ಆಶಯವಾಗಿದೆ. ನೋಡು ನೋಡುತ್ತಿ ದ್ದಂತೆ ಇಂದು ಇಂಗ್ಲಿಷ್ ಮಾಧ್ಯಮದ ವ್ಯಾಮೋಹದೆಡೆಗೆ ಪಾಲಕರು ಮಾರು ಹೋಗುತ್ತಿದ್ದು, ಕನ್ನಡದ ಭವಿಷ್ಯದ ನಿಟ್ಟಿನಲ್ಲಿ ತುಂಬ ಕಳವಳಕಾರಿಯಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕನ್ನಡ ಮಾಧ್ಯಮವೇ ನಿರ್ಮೂಲನೆಯಾಗುವ ಅಪಾಯವಿದ್ದು, ಇದರಿಂದ ಮುಂದಿನ ಪೀಳಿಗೆಗೆ ತಾಯ್ನುಡಿ ಕನ್ನಡವೇ ಅಪರಿಚಿತವಾಗುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ಕೊಡಬೇಡಿ ಎಂದು ಚಳವಳಿ ಮೂಲಕ ಪಾಲಕರಿಗೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ. 

ಕರಪತ್ರ ಹಂಚಿಕೆ: ಜಿಲ್ಲಾ ಕೇಂದ್ರ ಕಾರವಾರದ ಬೀದಿಯಲ್ಲಿ ಸಾಗುವ ಈ ಚಳುವಳಿಯಲ್ಲಿ ಮನೆ ಮನೆಗೆ, ಅಂಗಡಿ ಮುಂಗಟ್ಟುಗಳಿಗೆ ತೆರಳಿ ಜನತೆಗೆ ಸಾವಿರಾರು ಕರಪತ್ರ ಹಂಚಿ ‘ಕನ್ನಡ ಶಾಲೆ ಉಳಿಸಿಕೊಡಿ’ ಎಂದು ವಿನಂತಿಸಲಾಗು ವುದು ಎಂದು ಹೇಳಿದ್ದಾರೆ.

ಮನವಿ ಸಲ್ಲಿಕೆ: ‘ಜಿಲ್ಲೆಯ ಕನ್ನಡ ಶಾಲೆಗಳಲ್ಲಿ ಕೊರತೆಯಿರುವ ಶಿಕ್ಷಕರನ್ನು ತಕ್ಷಣ ಭರ್ತಿ ಮಾಡುವಂತೆ ಹಾಗೂ ಬಿಸಿಯೂಟ, ಸೈಕಲ್ ವಿತರಣೆ, ಚಪ್ಪಲಿ, -ಬಟ್ಟೆ ವಿತರಣೆ ಇನ್ನಿತರ ಪಠ್ಯದ ಹೊರತಾದ ಚಟುವಟಿಕೆಗಳ ಜವಾಬ್ದಾರಿ ನಿರ್ವಹಿಸಲು ಎರಡನೇ ದರ್ಜೆ ಗುಮಾಸ್ತರನ್ನು  ಪ್ರತಿ ಶಾಲೆಗೆ ನೇಮಕ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಕರ್ಕಿಕೋಡಿ ತಿಳಿಸಿದ್ದಾರೆ.

‘ಚಳವಳಿ ಕುರಿತಂತೆ ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಆಶಯ ನುಡಿಯನ್ನಾಡಲಿದ್ದಾರೆ.  ಈ ಸಂದರ್ಭ ದಲ್ಲಿ  ಕರ್ನಾಟಕ ಬಾಲ ವಿಕಾಸ ಅಕಾ ಡೆಮಿ ಅಧ್ಯಕ್ಷೆ ದಾಕ್ಷಾಯಿಣಿ ಬಸವರಾಜ, ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್‌ ಘೋಷ್ ಅವರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಈ ಚಳವಳಿಯಲ್ಲಿ ಜಿಲ್ಲೆಯ ಸಾಹಿತಿಗಳು, ಕಲಾವಿದರು, ಶಿಕ್ಷಕರು ಮತ್ತು ಕಳಕಳಿಯುಳ್ಳ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕಸಾಪ ತಾಲ್ಲೂಕು ಘಟಕ ನಾಗರಾಜ ಹರಪನಹಳ್ಳಿ  ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT