ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲ್ಲಲ್ಲಿ ದೇವರು... ಕಲ್ಲೇ ದೇವರಲ್ಲ’

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ರಾಘವೇಂದ್ರ ಸ್ವಾಮಿಗಳು ದೇವರಲ್ಲವೆಂಬ ನನ್ನ ಹೇಳಿಕೆ­ಯನ್ನು ಆಕ್ಷೇಪಿಸಿ ವಾಚಕರೊಬ್ಬರು ‘ಸರ್ವಾಂತರ್ಯಾಮಿ­ಯಾದ ದೇವರು ರಾಘವೇಂದ್ರ ಸ್ವಾಮಿಗಳಲ್ಲಿ ಇಲ್ಲವೇ?’ (ವಾ.ವಾ., ಜುಲೈ 25) ಎಂದು  ಪ್ರಶ್ನಿಸಿದ್ದಾರೆ. ರಾಘವೇಂದ್ರ ಸ್ವಾಮಿಗಳಲ್ಲಿ ದೇವರು ಖಂಡಿತ­ವಾ­ಗಿಯೂ ಇದ್ದಾರೆ. ಆದರೆ ರಾಘವೇಂದ್ರ ಸ್ವಾಮಿಗಳೇ ದೇವ­ರೆಂದು ಹೇಳಬಾರದು. ಕಲ್ಲಿನಲ್ಲಿ ದೇವರಿದ್ದಾರೆ. ಆದರೆ ಕಲ್ಲೇ ದೇವರೆಂದು ಹೇಳಬಹುದೇ?

ಈ ವ್ಯತ್ಯಾಸ ಅರ್ಥ ಮಾಡಿಕೊಂಡರೆ ನನ್ನ ಹೇಳಿಕೆಯಿಂದ ಯಾವುದೇ ಗೊಂದಲ ಉಂಟಾಗಲಾರದು. ರಾಘವೇಂದ್ರ ಗುರುಗಳಲ್ಲಿ ದೇವರಿ­ದ್ದಾರೆ. ಅವರು ದೇವರ ಮಹಾನ್ ಭಕ್ತರು. ಮಹಾ­ಗುರು­ಗಳು. ಅವರನ್ನೂ ದೇವರಂತೆ ಪೂಜಿಸಿರಿ. ಆದರೆ ಅವರೇ ಸರ್ವೋ­ತ್ತಮನಾದ ದೇವರೆಂದು ಭಾವಿಸಬಾರದು. ಅದ­ರಂತೆ ಸಾಯಿಬಾಬಾರವರು ದೊಡ್ಡ ಸಂತರು. ಅವರ ಭಕ್ತರು ಅವರನ್ನು ದೇವರಂತೆ ಪೂಜಿಸಬಹುದು. ಆದರೆ ಅವರೇ ದೇವರೆಂದು ಭಾವಿಸಬಾರದು. ನನ್ನ ಹೇಳಿಕೆಯನ್ನು ಜನರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿ ಅಪೇಕ್ಷಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT