ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಸ್‌ ಆಫ್‌ ಲವ್‌’ಗೆ ಅವಕಾಶ ಕೊಡಲ್ಲ

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸ್ಪಷ್ಟನೆ
Last Updated 23 ನವೆಂಬರ್ 2014, 20:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬೆಂಗಳೂರಿನಲ್ಲಿ ‘ಕಿಸ್‌ ಆಫ್‌ ಲವ್‌’ ಪ್ರತಿಭಟನೆಗೆ ಶ್ರೀರಾಮ ಸೇನೆ ಅವಕಾಶ ಕೊಡುವುದಿಲ್ಲ. ಅಸಂಬದ್ಧ ಪ್ರತಿಭಟನೆ ತಡೆಯುವ ವೇಳೆ ಹಿಂಸಾಚಾರ ನಡೆದರೆ ಸರ್ಕಾರವೇ ಅದರ ಹೊಣೆ ಹೊರಬೇಕಾಗುತ್ತದೆ. ಅಷ್ಟರ ಮೇಲೂ ಕಾರ್ಯಕ್ರಮ ನಡೆಸುವುದು ಸಂಘಟ­ಕರಿಗೆ ಬಿಟ್ಟದ್ದು’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಭಾನುವಾರ ಇಲ್ಲಿ ಎಚ್ಚರಿಸಿದರು.

‘2009ರ ಮಂಗಳೂರು ಪಬ್‌ ದಾಳಿ ನಮ್ಮಿಂದಾದ ತಪ್ಪು. ಅದನ್ನು ಒಪ್ಪಿಕೊಳ್ಳುತ್ತೇನೆ. ನೈತಿಕ ಪೊಲೀಸ್‌ಗಿರಿ ವಿರುದ್ಧ ಅವರು ನಡೆಸು ತ್ತಿರುವ ಪ್ರತಿಭ­ಟನೆಯನ್ನು ನಾವು ವಿರೋಧಿ­ಸುತ್ತಿಲ್ಲ. ಆದರೆ, ಅದನ್ನು ವಿರೋಧಿಸು­ತ್ತಿರುವ ರೀತಿ ಸರಿಯಲ್ಲ. ‘ಕಿಸ್‌ ಆಫ್‌ ಲವ್‌’ ಆಚರಣೆ ನಮ್ಮ ಸಂಸ್ಕೃತಿಗೆ ವಿರುದ್ಧ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಐವರಿಗೆ ನೋಟಿಸ್‌: ಬೆಂಗಳೂರಿನಲ್ಲಿ‘ಕಿಸ್‌ ಆಫ್‌ ಲವ್‌’ ಪ್ರತಿಭಟನೆ ತಡೆಯಬೇಕು ಎಂದು ಒತ್ತಾ­ಯಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ, ಕಾನೂನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಸಂಸ್ಕೃತಿ ಸಚಿವರಿಗೆ ಹಾಗೂ ಹೆಚ್ಚುವರಿ ಪೊಲೀಸ್‌ ನಿರ್ದೇಶಕರಿಗೆ ಲೀಗಲ್‌ ನೋಟಿಸ್‌ ಜಾರಿ ಮಾಡಲಾಗಿದೆ. ಅಲ್ಲದೆ, ನ್ಯಾಯಾಲ­ಯದಲ್ಲಿ ಈ ಬಗ್ಗೆ ಸಾರ್ವ ಜನಿಕ ಹಿತಾ­ಸಕ್ತಿ ಅರ್ಜಿ ಸಲ್ಲಿಸಲಾಗುವುದು’ ಎಂದೂ ಹೇಳಿದರು. ‘ಕಾಂಗ್ರೆಸ್‌ನ ಉಮಾಶ್ರೀ, ಮೋಟಮ್ಮ ಹಾಗೂ ರಾಜ್ಯ ಮಹಿಳಾ ಆಯೋ­ಗದ ಅಧ್ಯಕ್ಷೆ ಮಂಜುಳಾ ಮಾನಸ ‘ಕಿಸ್‌ ಆಫ್‌ ಲವ್‌’ ವಿರೋಧಿ­ಸಿ­ದ್ದಾರೆ. ಇಂತಹ ಕಾರ್ಯಕ್ರಮ ಆಯೋ­ಜಿ­ಸಿ ಪರೋಕ್ಷ­­ವಾಗಿ ಮಹಿಳೆಯರ ವಿರುದ್ಧದ ದೌರ್ಜ­ನ್ಯ­ವನ್ನು ಪ್ರೋತ್ಸಾಹಿಸಿ­ದಂತಾ­ಗುತ್ತದೆ’ ಎಂದು ಹೇಳಿದರು.

ಪ್ರೀತಿಯ ಮುತ್ತು: ಚರ್ಚೆ ಅನಗತ್ಯ– ದೇವೇಗೌಡ
ಪ್ರಜಾವಾಣಿ ವಾರ್ತೆ

ಮದ್ದೂರು: ‘ನೈತಿಕ ಪೊಲೀಸ್‌­ಗಿರಿಯನ್ನು  ವಿರೋಧಿಸಿ ಆಯೋ­ಜಿಸ­ಲಾದ ‘ಪ್ರೀತಿಯ ಮುತ್ತು’ ಕಾರ್ಯಕ್ರಮ ಕುರಿತು ಚರ್ಚೆ ಅನಗತ್ಯ’ ಎಂದು ಸಂಸದ ಎಚ್‌.ಡಿ. ದೇವೇಗೌಡ ತಿಳಿಸಿದರು.

ಇಲ್ಲಿಗೆ ಸಮೀಪದ ದೇಶಹಳ್ಳಿಯಲ್ಲಿ ಭಾನು­ವಾರ ಅವರು ಸುದ್ದಿಗಾ ರರೊಂದಿಗೆ ಮಾತ ನಾಡಿದರು. ಪ್ರಶ್ನೆ ಕೇಳುತ್ತಿ ದ್ದಂತೆ ತುಸು ಮುಜು ಗರಕ್ಕೆ ಒಳಗಾದ ದೇವೇ­ಗೌಡರು, ಇದು ಚರ್ಚೆಗೆ ಯೋಗ್ಯವಾದ ವಿಚಾರವಲ್ಲ  ಎಂದು ಸುಮ್ಮನಾದರು. 

‘ಶೃಂಗಾರ ಬಚ್ಚಿಡು­ವಂಥದ್ದು, ಬಿಚ್ಚಿಡು­ವಂಥದ್ದಲ್ಲ’: ‘ಶೃಂಗಾರ  ಬಚ್ಚಿಡುವಂಥದ್ದು, ಬಿಚ್ಚಿಡುವಂಥದ್ದಲ್ಲ’  ಎಂದು ಹಿರಿಯ ಸಾಹಿತಿ ಪ್ರೊ.­ದೊಡ್ಡ­ರಂಗೇಗೌಡ  ಹೇಳಿದರು.

ಇಲ್ಲಿಗೆ ಸಮೀಪದ  ದೇಶಹಳ್ಳಿಯಲ್ಲಿ ಸುದ್ದಿ­ಗಾರರೊಂದಿಗೆ ಮಾತ­ನಾಡಿದ ಅವರು, ‘ನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಆಯೋ ಜಿಸಲಾದ ‘ಪ್ರೀತಿಯ ಮುತ್ತು’ ಕಾರ್ಯಕ್ರಮ ನಮ್ಮ ಸಂಸ್ಕೃತಿಗೆ ನಾವೇ ಮಾಡಿಕೊಂಡ ಅಪಮಾನ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

‘ಮುತ್ತಿನ ಪ್ರೇಮ ಕಾರ್ಯಕ್ರಮ ನಮ್ಮ ನೆಲಕ್ಕೆ ಒಗ್ಗುವಂಥದ್ದಲ್ಲ. ಇಂತಹ ಕಾರ್ಯ­ಕ್ರಮಗಳನ್ನು ಎಲ್ಲರೂ ಸಾರ್ವತ್ರಿಕವಾಗಿ ವಿರೋ­ಧಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ಸರ್ಕಾರ ಅವಕಾಶ ನೀಡಬಾರದು. ಶೃಂಗಾರ ನಾಲ್ಕು ಗೋಡೆಗಳ ಮಧ್ಯದಲ್ಲಿರಬೇಕೇ ಹೊರತು ಬಹಿರಂಗವಾಗಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT