ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಂಡೆ’ ಹಬ್ಬ: ಗಮನ ಸೆಳೆದ ವೇಷಭೂಷಣ

Last Updated 21 ಮೇ 2014, 19:30 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಗಿರಿ­ಜನರ ವಿಶಿಷ್ಟ ಸಂಪ್ರದಾಯವಾದ ‘ಕುಂಡೆ’ ಹಬ್ಬದ ಅಂಗವಾಗಿ ಪಟ್ಟ­ಣದ ಪ್ರಮುಖ ಬೀದಿಗಳಲ್ಲಿ ತಾಲ್ಲೂ­ಕಿನ ಮುತ್ತೂರು ಗಿರಿಜನ ಹಾಡಿಯ ಯುವಕರು ವಿಚಿತ್ರ ವೇಷಭೂಷಣ ಧರಿಸಿ ಬುಧವಾರ ಮೆರವಣಿಗೆ ನಡೆಸಿದರು.

ತಾಲ್ಲೂಕಿನ ಗಿರಿಜನರಲ್ಲಿ ‘ಬೈಗು­ಳದ ಹಬ್ಬ’ವೆಂದೇ ಜನಜನಿತವಾಗಿ­ರುವ ‘ಕುಂಡೆ’ ಹಬ್ಬದ ಅಂಗವಾಗಿ ಗಿರಿಜನ ಹಾಡಿಯ ಇಪ್ಪತ್ತಕ್ಕೂ ಹೆಚ್ಚು ಯುವಕ, ಯುವತಿಯರು ಭೂತದ ವೇಷ, ಕ್ಯಾಬರೆ ನರ್ತಕಿ ಉಡುಪು, ಆಫ್ರಿಕಾ ಬುಡಕಟ್ಟು ವೇಷ, ಮಾಟ­ಗಾರ, ಆಧುನಿಕ ಮಹಿಳೆಯ ಪೋಷಾಕು ಧರಿಸಿ ನರ್ತಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಕೆಟ್ಟ ಬೈಗುಳ­ಗಳನ್ನು ರಾಗಬದ್ಧ­ವಾಗಿ ಹಾಡುತ್ತಾ, ಪ್ಲಾಸ್ಟಿಕ್ ಡ್ರಮ್, ಸೋರೆಕಾಯಿ ಬುರುಡೆ, ತಗಡಿನ ಡಬ್ಬಿ ಇತರ ಅನುಪಯುಕ್ತ ವಸ್ತು­ಗ­ಳನ್ನೇ ವಾದ್ಯಗಳನ್ನಾಗಿ ಮಾಡಿ­ ಅದನ್ನು ತಾಳಬದ್ಧ­ವಾಗಿ ನುಡಿಸಿ, ಕುಣಿದು ಕುಪ್ಪಳಿಸಿದರು. ಅಂಗಡಿಗ­ಳಿಂದ ಚಂದಾ ವಸೂಲಿ ಮಾಡು­ವಾಗ ಹಣ ಕೊಡ­ದಿದ್ದರೆ ಬೈಗುಳ­ಗಳನ್ನು ಸುರಿಸು­ತ್ತಿ­ದ್ದು­ದ­ರಿಂದ ವ್ಯಾಪಾ­ರ­ಸ್ಥರು ಪುಡಿ­ಗಾಸು ನೀಡಿ, ಸಾಗ ಹಾಕುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT