ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಟುಂಬಕ್ಕೊಂದು ದಾರಿ ತೋರಿ’

Last Updated 26 ಮೇ 2015, 7:03 IST
ಅಕ್ಷರ ಗಾತ್ರ

ವಿಜಯಪುರ: ‘ಅಪ್ಪ ಅಪಘಾತದಲ್ಲಿ ಇಲ್ಲವಾದರು. ಅಮ್ಮ ಈ ಆಘಾತದಿಂದ ಇನ್ನೂ ಹೊರ ಬಂದಿಲ್ಲ. ಅಣ್ಣನ ದುಡಿಮೆ ಕುಟುಂಬದ ಹೊಟ್ಟೆ ತುಂಬಿಸುತ್ತಿಲ್ಲ. ನಮಗೂ ದುಡಿಯುವ ಛಲವಿದೆ. ಸ್ವಾವಲಂಬಿ ಬದುಕು ನಡೆಸಲು ಅಪ್ಪ ಬಿಟ್ಟು ಹೋಗಿರುವ ಹಿಟ್ಟಿನ ಗಿರಿಣಿಯೂ ಇದೆ. ಆದರೆ ಇದ್ಯಾವುದು ನಮಗೆ ಅನುಕೂಲವಾಗುತ್ತಿಲ್ಲ.

ಕುಬ್ಜತನ ನಮ್ಮ ಬದುಕಿಗೆ ಕಂಟಕ­ವಾಗಿ ಕಾಡುತ್ತಿದೆ’... ಎಂದು ಕಣ್ಣೀರಿಟ್ಟ­ವರು ನಗರದ ಜಾಡರ ಓಣಿಯ ಅಕ್ಕ–ತಮ್ಮ ನಸ್ರೀನ್ ರಫೀಕ್ ಶೇಖ್ (21), ಚಾಂದ್ ರಫೀಕ್ ಶೇಖ್ (16).

ಈ ಇಬ್ಬರೂ ಕುಬ್ಜರು. ಕ್ರಮವಾಗಿ 2.5, 3 ಅಡಿ ಎತ್ತರವಿರುವ ಯುವತಿ, ಬಾಲಕ. ನೋಡಲು 7–8 ವರ್ಷದ ಮಕ್ಕ­ಳಂತೆ ಕಾಣುತ್ತಾರೆ.  ನಸ್ರೀನ್‌ ಎಸ್‌ಎಸ್‌­ಎಲ್‌ಸಿಯಲ್ಲಿ ಅನು ತ್ತೀರ್ಣ­ಗೊಂಡು, ಮತ್ತೆ ಪರೀಕ್ಷೆ ಎದುರಿ ಸಲು ಸಿದ್ಧಳಾ ಗಿದ್ದರೆ, ಚಾಂದ್‌ ನಗರದ ಸ್ನೇಹ ಸಂಗಮ ಪ್ರೌಢಶಾಲೆಯಲ್ಲಿ ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ.

‘ಅಪ್ಪ ರಫೀಕ್ ಶೇಖ್ ಹಿಟ್ಟಿನ ಗಿರಣಿ ನಡೆಸಿಕೊಂಡು ನಮ್ಮನ್ನು ಸಲಹುತ್ತಿದ್ದರು. ಮೂರೊತ್ತಿನ ತುತ್ತಿಗೆ, ಬಟ್ಟೆಗೆ ಅಡ್ಡಿಯಿ ಲ್ಲದಂತೆ ಬದುಕು ನಡೆದಿತ್ತು. ಇದೇ 1 ರಂದು ನಡೆದ ಅಪಘಾತದಲ್ಲಿ ಅಪ್ಪ ನಮ್ಮನ್ನು ಬಿಟ್ಟು ಹೋದರು.

ಈ ದುರ್ಘಟನೆಯಿಂದ ­­ಆಘಾ­ತ­ ಕ್ಕೊಳಗಾದ ಅಮ್ಮ ಜೈತುಂಬಿ ಇನ್ನೂ ಚೇತರಿಸಿಕೊಂಡಿಲ್ಲ. ಮೂಲೆ­ಯಿಂದ ಎದ್ದಿಲ್ಲ. ಅಣ್ಣ ಸದೃಢನಾಗಿದ್ದಾನೆ. ಅನಿ ವಾರ್ಯವಾಗಿ ದುಡಿಯಲು ಹೋಗು­ತ್ತಿದ್ದಾನೆ. ಈತನ ಸಂಪಾದನೆ­ಯಿಂದ ನಾಲ್ವರ ಹೊಟ್ಟೆ ತುಂಬುತ್ತಿಲ್ಲ. ನಮ್ಮ ಬದುಕು ಅಯೋಮಯವಾಗಿದೆ. ದಿಕ್ಕು ತೋಚದೆ ನೆರವಿಗಾಗಿ ಜಿಲ್ಲಾಡ­ಳಿತಕ್ಕೆ ಮೊರೆ ಹೋಗಲು ಬಂದಿದ್ದೇವೆ’ ಎಂದು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ‘ಪ್ರಜಾವಾಣಿ’ಗೆ ತಮ್ಮ ಕುಟುಂಬದ ಸ್ಥಿತಿ ತಿಳಿಸಿದರು.

ಸ್ಪಂದಿಸಿದ ಜಿಲ್ಲಾಧಿಕಾರಿ: ಚುನಾವಣಾ ಸಿಬ್ಬಂದಿ ತರಬೇತಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಡಿ.ರಂದೀಪ್ ಕಚೇರಿ ಎದುರು ನಿಂತಿದ್ದ ಕುಬ್ಜರನ್ನು ಗಮನಿಸಿ ಸಮಸ್ಯೆ ಆಲಿಸಿದರು. ಕುಬ್ಜರಿಬ್ಬರು ತಮ್ಮ ಹಳಿ ತಪ್ಪಿದ ಕುಟುಂಬದ ಕಥೆಯನ್ನು ಹೇಳಿ ಬದುಕಿಗೊಂದು ದಾರಿ ತೋರಿ ಎಂದು ಮನವಿ ಮಾಡಿದರು. ಅಕ್ಕ–-ತಮ್ಮನ ಮೊರೆ ಆಲಿಸಿದ ಜಿಲ್ಲಾಧಿಕಾರಿ  ಒಂದ ರೆಕ್ಷಣ ಮೂಕವಿಸ್ಮಿತರಾದರು.

‘ಹಿರಿಯ ನಾಗರಿಕರ ಮತ್ತು ವಿಕಲ ಚೇತನ ಇಲಾಖೆಯಿಂದ ದೊರಕುವ ಸೌಲಭ್ಯವನ್ನು ತಕ್ಷಣವೇ ಕೊಡಿಸ ಲಾಗು ವುದು. ಮಾಸಾಶನಕ್ಕೆ ವ್ಯವಸ್ಥೆ ಮಾಡಲಾ ಗುವುದು. ಮಹಾನಗರ ಪಾಲಿಕೆಯಲ್ಲಿ ಅಂಗವಿಕಲರಿಗಾಗಿಯೇ ಮೀಸಲಿರುವ ಶೇ 3ರ ಅನುದಾನದಲ್ಲಿ ನೆರವು ಕೊಡಿ ಸುತ್ತೇನೆ’ ಎಂದು ಭರವಸೆ ನೀಡಿದರು.

‘ಚುನಾವಣೆ ಮುಗಿದ ತಕ್ಷಣವೇ ಮತ್ತೆ ಭೇಟಿಯಾಗಿ ನಿಮ್ಮ ಮಾಹಿತಿ ನೀಡಿ. ಅಗತ್ಯ ಸೌಲಭ್ಯ ಒದಗಿಸುತ್ತೇನೆ. ಇಬ್ಬರ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡುತ್ತೇನೆ’ ಎಂದೂ ಜಿಲ್ಲಾಧಿಕಾರಿ ಡಿ.ರಂದೀಪ್‌ ಭರವಸೆ ನೀಡುತ್ತಿದ್ದಂತೆ ನಸ್ರೀನ್‌ ಮತ್ತು ಚಾಂದ್ ಅವರು ಕೈಮುಗಿದು ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT