ಕ್ವಾಲಾಲಂಪುರ (ಪಿಟಿಐ):  ವಿಶಾಲ್ ಭಾರದ್ವಾಜ್ ನಿರ್ದೇಶನದ ‘ಹೈದರ್’ ಹಾಗೂ ವಿಕಾಸ್ ಬಾಲ್ ಅವರ ನಿರ್ದೇಶನದ ‘ಕ್ವೀನ್’ ಚಿತ್ರಗಳು 2015ನೇ ಸಾಲಿನ ಐಫಾ ಅವಾರ್ಡ್ಸ್ನಲ್ಲಿ ತಲಾ ಮೂರು ಪ್ರಶಸ್ತಿಗಳನ್ನು ಬಾಚಿವೆ.

ಇಲ್ಲಿ ನಡೆದ 16ನೇ ಐಫಾ ಅವಾರ್ಡ್ಸ್ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.

‘ಕ್ವೀನ್’ ಚಿತ್ರದ ನಾಯಕಿ ಕಂಗನಾ ರಣಾವತ್ಗೆ ಶ್ರೇಷ್ಠ ನಟಿ ಪ್ರಶಸ್ತಿ ಗರಿ ಲಭಿಸಿದೆ. ಇದೇ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ನಟಿ ಕಂಗನಾ ಅವರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು.
ಇನ್ನು, ‘ಹೈದರ್’ ಚಿತ್ರದ ಅಭಿನಯಕ್ಕಾಗಿ ಶಾಹಿದ್ ಕಪೂರ್ ಅವರಿಗೆ ಉತ್ತಮ ನಟ ಪ್ರಶಸ್ತಿ ದಕ್ಕಿದೆ.

ಹೈದರ್ ಚಿತ್ರದಲ್ಲಿ ಶಾಹಿದ್ ಅವರ ತಾಯಿ ಪಾತ್ರ ನಿರ್ವಹಿಸಿದ್ದ ನಟಿ ತಬು ಅವರು ಅತ್ಯುತ್ತಮ ಪೋಷಕ ನಟಿ ಹಾಗೂ ಸಹ ನಟ ಕೇ ಕೇ ಮೆನನ್ ಅವರು ಅತ್ಯುತ್ತಮ ಖಳನಾಯಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇನ್ನು, ‘ಕ್ವೀನ್’ ಅತ್ಯುತ್ತಮ ಚಿತ್ರ (ಬಾಲ್, ಚೈತಾಲಿ ಪಾರ್ಮರ್) ಹಾಗೂ ಅತ್ಯುತ್ತಮ ಕಥೆ(ಪರ್ವೇಜ್ ಶೇಖ್) ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.