ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧೀಜಿಗೆ ಒಳ್ಳೆಯ ಮನಸ್ಸಿತ್ತು, ದೂರದೃಷ್ಟಿ ಇರಲಿಲ್ಲ’

Last Updated 25 ಜನವರಿ 2015, 20:38 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂಬೇಡ್ಕರ್ ಮತ್ತು ಗಾಂಧೀಜಿ ಜತೆಗೂಡಿ ಕೆಲಸ ಮಾಡಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು’  ಎಂದು ಲೇಖಕ ಪ್ರೊ.ಜಿ.ಕೆ. ಗೋವಿಂದ­ರಾವ್  ಅಭಿಪ್ರಾಯಪಟ್ಟರು.

66ನೇ ಸಂವಿಧಾನ ದಿನಾಚರಣೆ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌­ವಾದ) ವತಿಯಿಂದ  ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸಂವಿಧಾನದ ಆಶಯಗಳು ಮತ್ತು ಅನುಷ್ಠಾನದಲ್ಲಿನ ವೈಫಲ್ಯಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಕಾಂಗ್ರೆಸ್‌ ಹಾಗೂ ಗಾಂಧೀಜಿ ಅವರನ್ನು ಅಂಬೇಡ್ಕರ್‌ ವಿರೋಧಿಸಿದ್ದರು. ಅವರು ಎಲ್ಲ ವರ್ಗ­ಗಳನ್ನು ಸಮಾನ ದೃಷ್ಟಿಯಿಂದ ನೋಡಿದ್ದರು. ಅವರು ಉತ್ತಮ ಮನಸ್ಸು ಹಾಗೂ ಬುದ್ಧಿ ಇರುವ ಮೇಧಾವಿ. ಗಾಂಧೀಜಿ ಅವರಿಗೆ ಒಳ್ಳೆಯ ಮನಸ್ಸಿತ್ತು. ಆದರೆ, ದೂರದೃಷ್ಟಿ ಇರಲಿಲ್ಲ’ ಎಂದು ಟೀಕಿಸಿದರು.

ದೇಶದಲ್ಲಿ ಎಲ್ಲಿಯವರೆಗೆ ದಲಿತರು ಸಮಾ­ನತೆಯ ಭಾವ ಅನುಭವಿಸುವುದಿಲ್ಲವೋ ಅಲ್ಲಿಯ­ವರೆಗೆ ಮೀಸಲಾತಿ ಇರಬೇಕು ಎಂದು ಪ್ರತಿಪಾದಿ­ಸಿದರು.

ಪ್ರಕೃತಿ ಯಾರನ್ನೂ ಹಿಂದೂ, ಮುಸ್ಲಿಂ, ಕ್ರಿಶ್ಚಿ­ಯನ್ ಎಂದು ಸೃಷ್ಟಿಸಿಲ್ಲ. ಮನುಷ್ಯರನ್ನಾಗಿ ಸೃಷ್ಟಿ­ಸಿದೆ. ಆದರೆ, ಮೇಲ್ವರ್ಗದವರು ಶಾಸ್ತ್ರ, ಸಂಪ್ರ­ದಾಯಗಳ ಮೂಲಕ ಕೆಳವರ್ಗದವರನ್ನು ಇನ್ನೂ ಕೆಳಗೆ ತಳ್ಳುತ್ತಿದ್ದಾರೆ. ಅದನ್ನು ವಿರೋಧಿಸಲು ಎಲ್ಲಿ­ಯವರೆಗೆ ಕ್ರಿಯಾಶೀಲ ಸಿಟ್ಟು ಬರುವು­ದಿ­ಲ್ಲವೋ ಅಲ್ಲಿಯವರೆಗೆ ದೇಶ ಅಭಿವೃದ್ಧಿ­ಯಾಗು­ವುದಿಲ್ಲ ಎಂದರು.

ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ್‌ ಮಾತ­ನಾಡಿ, ಇದುವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕ­ವಾಗಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗ­ಳಾದವರು ಮೇಲ್ಜಾತಿಯವರು. ಹೀಗಿರುವಾಗ ಸಾಮಾಜಿಕ ನ್ಯಾಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT