ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಧನ’: ₨5,400 ಕೋಟಿ ಠೇವಣಿ

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನ ಮಂತ್ರಿ ‘ಜನಧನ’ ಯೋಜನೆಯ ಅಡಿಯಲ್ಲಿ ತೆರೆಯಲಾದ ಖಾತೆಗಳಲ್ಲಿ ಈವರೆಗೆ ₨ 5,400 ಕೋಟಿ ಠೇವಣಿ ಇಡಲಾಗಿದೆ.

ಸುಭಾಷ್‌ ಅಗರ್ವಾಲ್‌ ಎಂಬುವ­ವರು ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗೆ ಹಣಕಾಸು ಇಲಾಖೆ ಈ ಮಾಹಿತಿ ನೀಡಿದೆ.
ಈಗಾಗಲೇ 7.1 ಕೋಟಿ ಖಾತೆ ತೆರೆಯ­ಲಾಗಿದ್ದು, 5.3 ಕೋಟಿ ಖಾತೆಗಳಲ್ಲಿ ಹಣ ಇಲ್ಲ ಎಂಬ ಮಾಹಿತಿಯನ್ನು ಹಣ­ಕಾಸು ಇಲಾಖೆ ನೀಡಿದೆ. ಬಹುತೇಕ ಖಾತೆಗಳನ್ನು (4.2 ಕೋಟಿ) ಗ್ರಾಮೀಣ ಪ್ರದೇಶದಲ್ಲಿ ತೆರೆಯಲಾಗಿವೆ. ನಗರ ಪ್ರದೇಶದಲ್ಲಿ 2.9 ಕೋಟಿ ಖಾತೆಗಳನ್ನು ತೆರೆಯಲಾಗಿದೆ.

ಹಣಕಾಸು ಸೌಲಭ್ಯಗಳು ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿರುವ ರಾಷ್ಟ್ರೀಯ ಆರ್ಥಿಕ ಸೇರ್ಪಡೆ ಕಾರ್ಯಕ್ರಮ ಇದಾಗಿದೆ. ಈ ಮೂಲಕ ಬ್ಯಾಂಕ್‌ ಖಾತೆಗಳ ಮೂಲಕ ಉಳಿತಾಯ, ಹೂಡಿಕೆ, ಸಾಲ, ವಿಮೆ ಮತ್ತು ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ಈ ಹಿಂದಿನ ಯೋಜನೆಗಳು ಗ್ರಾಮಗಳನ್ನು ಕೇಂದ್ರೀಕರಿಸಿದ್ದರೆ, ಜನಧನ ಯೋಜನೆ ಕುಟುಂಬ ಕೇಂದ್ರಿತವಾಗಿದೆ.
ಆರು ತಿಂಗಳ ಕಾಲ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಕುಟುಂಬವು ಬ್ಯಾಂಕ್‌ನಿಂದ ಐದು ಸಾವಿರ ರೂಪಾಯಿ ಪಡೆದು­ಕೊಳ್ಳುವುದಕ್ಕೆ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT