ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಸೆಂಬರ್‌ನಲ್ಲಿ 3600 ವಿಮಾನ ರದ್ದಾಗಿದ್ದವು’

Last Updated 3 ಮಾರ್ಚ್ 2015, 12:19 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ ಡಿಸೆಂಬರ್ ತಿಂಗಳದಲ್ಲಿ ಏರ್ ಇಂಡಿಯಾ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಸೇರಿದ 3,600ಕ್ಕೂ ಅಧಿಕ ವಿಮಾನಗಳು ರದ್ದುಗೊಂಡಿದ್ದವು ಎಂದು ಸರ್ಕಾರ ಮಂಗಳವಾರ ತಿಳಿಸಿದೆ.

ಡಿಸೆಂಬರ್ ತಿಂಗಳಲ್ಲಿ 2808 ಸ್ಪೈಸ್ ಜೆಟ್ ಸೇರಿದಂತೆ ಹಲವು ವಿಮಾನಗಳು ರದ್ದುಗೊಂಡಿದ್ದವು ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು ತಿಳಿಸಿದ್ದಾರೆ.

‘ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ.  ಅವುಗಳನ್ನು ಪರಿಹರಿಸಲು ನಾವು ಯತ್ನಿಸುತ್ತಿದ್ದೇವೆ. ವಿಮಾನ ಸಂಸ್ಥೆಗಳ ಕಾರ್ಯ ಕ್ಷಮತೆಯನ್ನು ಉತ್ತಮ ಪಡಿಸಲು ನಾವು ಬಯಸುತ್ತೇವೆ’ ಎಂದು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಅವರು ಸದನಕ್ಕೆ ತಿಳಿಸಿದರು.

ಜೆಟ್ ಏರ್ವೇಸ್–ಜೆಟ್ ಲೈಟ್ ಸಂಸ್ಥೆಯ 317, ಏರ್ ಇಂಡಿಯಾದ 232 ಹಾಗೂ ಇಂಡಿಗೋ ಸಂಸ್ಥೆಯ 224 ವಿಮಾನಗಳು ರದ್ದುಗೊಂಡಿದ್ದವು. ಸರ್ಕಾರಿ ದಾಖಲೆಗಳ ಪ್ರಕಾರ, 53 ಗೋ ಏರ್ ಹಾಗೂ 10 ಏರ್ ಏಷ್ಯಾ ಇಂಡಿಯಾ ವಿಮಾನಗಳೂ ರದ್ದುಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT